ಬಾಳೆಯಿಂದ ಉತ್ತಮವಾದ ಪೌಷ್ಟಿಕಾಂಶಗಳಿಂದ ಉಪಯೋಗಗಳು

 

ಬಾಳೆ (ಕದಲೀ)

ಬಾಳೆಯ ಹೆಸರು ಕೇಳದವರು, ಬಳಸದವರು ಬಹು ವಿರಳ, ಮಾವು, ಹಲಸಿನೊಂದಿಗೆ ಬಾಳೆ ಜಗತ್ತಿನಲ್ಲೇ ಅತ್ಯಂತ ಸ್ವಾದವಿರುವ ಹಣ್ಣು, ತಂಪಾದ ಸ್ಥಳದಲ್ಲಿ ಬೆಳೆಯುವ ಬಾಳೆಯ ಪ್ರಗಾರ ಗಡ್ಡೆಯಿಂದ, ಗಡ್ಡೆ ಹಾಕಿದ ೪-೬ ತಿಂಗಳಲ್ಲಿ ಫಲ ಕೊಡುತ್ತದೆ. ಬಾಳೆಯನ್ನು ಹಲವಾರು ಕಡೆಯಲ್ಲಿ ಮರವೆಂದು ಕರೆದರೂ ಅದು ಅಗಲವಾದ ಎಲೆಯಿರುವ, ಬಹುರ್ವಯ ಗಿಡ. ಈ ಗಿಡದ ಕಾಂಡವೆಂದು ಕರೆಯಲ್ಪಡುವ ಮಧ್ಯಮ ಭಾಗ ನಿಜಕ್ಕೂ ಬಂಡವಲ್ಲ, ನಿಜವಾದ ನಿಂದ ಭೂಮಿಯ ಒಳಗಡೆ ಇರುತ್ತದೆ. ಬಾಳೆಯ ಒಂದೊಂದು ಭಾಗವೂ ಒಂದಲ್ಲ ಒಂದು ರೀತಿಯಲ್ಲಿ ಆಹಾರವಾಗಿ, ಔಷಧವಾಗಿ ಬಳಕೆಯಾಗುತ್ತದೆ. ಹಣ್ಣು ದಿಂಡು, ಹೂವು, ಗಡ್ಡೆ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿವೆ, ರಸಬಾಳೆ ಎಲ್ಲದಕ್ಕಿಂತ ಹೆಚ್ಚು ಉಪಯೋಗಿ ಕೇಂದ್ರಬಾಳೆ, ಏಲಕ್ಕಿ ಬಾಳೆ, ಪಚ್ಚಬಾಳೆಗಳನ್ನು ಬಳಸಬಹುದು. ಇದನ್ನು ಸಂಸ್ಕೃತದಲ್ಲಿ ‘ಕದಲೀ ಎಂದು ಕರೆಯುವ ಅರ್ಥ ಗಜ ಅಥವಾ ಲಾಂಛನ ಅಂದರೆ ಇದರ ಬರ್ಹ ದೊಡ್ಡದಾದ, ಮೃದುವಾದ ಎಲೆ ಧ್ವಜದಂತೆ ಹಾರಾಡುತ್ತದೆ. ಭಾರತದಲ್ಲಿ ಬಾಳೆಯ ಕೃಷಿಯು ೨,೭೦,೦೦೦ ಪರಿನಲ್ಲಿ ನಡೆಯುತ್ತದೆ. ಫಸಲು 9,000 ಕೆ.ಜಿ. ಪ್ರತಿ ಹೆಕ್ಟೇರಿಗೆ ಸಿಗುತ್ತದೆ. ದಕ್ಷಿಣ ಭಾರತದಲ್ಲಿ ಸುಮಾರು ೧೦೦ ವಿಧವಾದ ತಳಿಗಳಿದ್ದು ಕೇವಲ ೧ ಡಜನ್ನಿನಷ್ಟು ವಾಣಿಜ್ಯ ಬೆಳೆಯಾಗಿದೆ. ಪಕ್ವವಾದ ಹಣ್ಣು ಸ್ವಾದಿಷ್ಟವಾಗಿದ್ದು, ತಗುಣದಿಂದ ಕೂಡಿದ್ದು, ತನ್ನಲ್ಲಿರುವ

ಉತ್ತಮವಾದ ಪೌಷ್ಟಿಕಾಂಶಗಳಿಂದ ಬಲಕಾರಕವಾಗಿದೆ. ಉಪಯೋಗಗಳು

೧. ಚೆನ್ನಾಗಿ ಅರೆದ ಬಾಳೆಹಣ್ಣು, ಹಾಲು, ಸಕ್ಕರೆಯೊಂದಿಗೆ, ಉತ್ತಮವಾದ ಬದು ಆಹಾರ ಹಾಗೂ ಪೌಷ್ಠಿಕ ಆಹಾರ ಕೂಡ. ಇದರಿಂದ ಮಕ್ಕಳಲ್ಲಿ ಹಲವಾರು ಖನಿಜ ಅಂಶಗಳು ಶರೀರದಲ್ಲಿ ತಡೆಹಿಡಿಯಬಹುದೆಂದು ಪ್ರಯೋಗಗಳಿಂದ ದೃಢಪಟ್ಟಿದೆ.

೨. ಪ್ರತಿರಾತ್ರಿ ಒಂದು ಬಾಳೆಹಣ್ಣು ಮತ್ತು ಏಲಕ್ಕಿಯನ್ನು ತಪ್ಪದೇ ಸೇವಿಸುವುದರಿಂದ

ಮೂಲವ್ಯಾಧಿ ನಿಯಂತ್ರಣಕ್ಕೆ ಬರುತ್ತದೆ. ೩. ಒಂದು ಬಾಳೆಹಣ್ಣು ಅರ್ಧ ಲೋಟ ಟೀ ಸೊಪ್ಪಿನ ಕಷಾಯವನ್ನು ಒಟ್ಟಿಗೆ ಸೇವಿಸುವುದರಿಂದ ಉಷ್ಣಭೇದಿ, ರಕ್ತಭೇದಿಗಳು ಹತೋಟಿಗೆ ಬರುತ್ತವೆ. ೪. ಬಾಳೆಹೂವಿನ ಪಲ್ಯ ಮಾಡಿ, ಅನ್ನ ಮತ್ತು ಮೊಸರಿನೊಂದಿಗೆ ಸೇವಿಸುವುದರಿಂದ

ಸ್ತ್ರೀಯರಲ್ಲಿ ಅತಿಯಾಗಿ ಆಗುವ ರಕ್ತಸ್ರಾವ ಕಡಿಮೆಯಾಗುತ್ತದೆ.

೫. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದು ಸಣ್ಣ ಬಟ್ಟಲಿನಷ್ಟು ಬಾಳೆದಿಂಡಿನ ರಸವನ್ನು

ಸೇವಿಸುವುದರಿಂದ ಮೂತ್ರಕೋಶದಲ್ಲಿ ಆಗುವ ಕಲ್ಲು ಕರಗಿ ತೊಂದರೆ ನಿವಾರಣೆಯಾಗುತ್ತದೆ.

೬ ಬಾಳೆದಿಂಡಿನ ಪಲ್ಯ ಅನ್ನದೊಂದಿಗೆ ಜೀರ್ಣಶಕ್ತಿ ಹೆಚ್ಚಿಸುವುದಲ್ಲದೆ, ಅನೇಕ ವಿಷ

ಪದಾರ್ಥಗಳು ದೇಹದಿಂದ ಹೊರಬೀಳುವಂತೆ ಮಾಡುತ್ತದೆ.

[t4b-ticker]

You May Also Like

More From Author

+ There are no comments

Add yours