ನಾಳೆ ಪವರ್ ಕಟ್ ಎಲ್ಲೆಲ್ಲಿ ಈಗಲೇ ನೋಡಿ.

 

ಚಿತ್ರದುರ್ಗ,ಜುಲೈ29:
66/11ಕೆ.ವಿ.  ವಿದ್ಯುತ್ ವಿತರಣಾ ಕೇಂದ್ರ ಚಿತ್ರದುರ್ಗದಿಂದ ಸರಬರಾಜಾಗುವ ಎಫ್-13, ಚಂದ್ರವಳ್ಳಿ ಫೀಡರ್ ವ್ಯಾಪ್ತಿಯ  ಹೊಳಲ್ಕೆರೆ ರಸ್ತೆ ಅಗಲೀಕರಣ  ಕಾಮಗಾರಿಗೆ ಅಡ್ಡವಾಗಿರುವ ವಿದ್ಯುತ್ ಮಾರ್ಗ/ಕಂಬಗಳನ್ನು ಸ್ಥಳಾಂತರ ಕಾಮಗಾರಿ ಇರುವುದರಿಂದ ಜುಲೈ30 ರಂದು ಬೆಳಿಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಗೆ ಒಳಪಡುವ ಪ್ರದೇಶಗಳು: ಮೆದೇಹಳ್ಳಿ ರಸ್ತೆ, ಹೊಳಲ್ಕೆರೆ ರಸ್ತೆ, ಗುಮಾಸ್ತರ ಕಾಲೋನಿ, ಬುರುಜನಹಟ್ಟಿ, ನೆಹರೂ ನಗರ, ಕೆಎಸ್‌ಆರ್‌ಟಿಸಿ ಹತ್ತಿರ, ನೀಲಕಂಠೇಶ್ವರ ರಸ್ತೆ, ಧವಳಗಿರಿ ಬಡಾವಣೆ, ಬಿವಿಕೆಎಸ್ ಬಡಾವಣೆ, ಆಶ್ರಯ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಆಡಚಣೆಯಾಗಲಿದೆ.
ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ತಿಮ್ಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours