ನಾಯಕನಟ್ಟಿ ಜಾತ್ರೆಗೆ 100 ಜಾತ್ರಾ ವಿಶೇಷ ಬಸ್ ಯಾವ ಹೊಸ ಮಾರ್ಗಗಳಲ್ಲಿ ಸಂಚಾರ ಸಂಪೂರ್ಣ ಮಾಹಿತಿ

 

ನಾಯಕನಟ್ಟಿ ಜಾತ್ರಾ ಮಹೋತ್ಸವ: 100 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ
****
ಚಿತ್ರದುರ್ಗ, ಮಾರ್ಚ್ 11:
ನಾಯಕನಹಟ್ಟಿಯಲ್ಲಿ ಮಾರ್ಚ್ 18 ರಿಂದ 21 ರವರೆಗೆ ನಡೆಯಲಿರುವ ಶ್ರೀ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ಚಿತ್ರದುರ್ಗ ಮತ್ತು ಚಳ್ಳಕೆರೆ ಘಟಕಗಳಿಂದ ಒಟ್ಟು 100 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ.
ವಿಶೇಷ ವಾಹನಗಳ ಕಾರ್ಯಾಚರಣೆ ಮಾರ್ಗ ಇಂತಿದೆ. ಚಿತ್ರದುರ್ಗ-ನಾಯಕನಹಟ್ಟಿ ವಯಾ ಬೆಳಗಟ್ಟ, ತುರುವನೂರು, ಮುಷ್ಟೂರು, ಚಿತ್ರದುರ್ಗ-ನಾಯಕನಟ್ಟಿ ವಯಾ ಬೆಳಗಟ್ಟ, ಹಾಯ್ಕಲ್, ಚಳ್ಳಕೆರೆ, ಚಳ್ಳಕೆರೆ-ನಾಯಕನಹಟ್ಟಿ ವಯಾ ನೇರ್ಲಗುಂಟೆ, ಹಿರಿಯೂರು-ನಾಯಕನಹಟ್ಟಿ ವಯಾ ಸಾಣಿಕೆರೆ-ಚಳ್ಳಕೆರೆ-ನೇರ್ಲಗುಂಟೆ, ನಾಯಕನಹಟ್ಟಿ-ಪರಶುರಾಂಪುರ ವಯಾ ಚಳ್ಳಕೆರೆ, ಚಿತ್ರದುರ್ಗ-ನಾಯಕನಹಟ್ಟಿ ವಯಾ ಕಲ್ಲೇದೇವರಪುರ, ನಾಯಕನಹಟ್ಟಿ-ಮೊಳಕಾಲ್ಮುರು ವಯಾ ತಳಕು ಕ್ರಾಸ್ ಮಾರ್ಗದಲ್ಲಿ ಸಂಚರಿಸಲಿವೆ.
ಪ್ರಯಾಣಿಕರ ಜನದಟ್ಟಣೆಗನುಗುಣವಾಗಿ ಹೆಚ್ಚುವರಿ ವಾಹನ ಕಾರ್ಯಾರಣೆ ಮಾಡಲಾಗುವುದು. ಭಕ್ತಾಧಿಗಳು ವಿಶೇಷ ವಾಹನಗಳ ಸದುಪಯೋಗವನ್ನು ಉತ್ತಮ ರೀತಿಯಿಂದ ಪಡೆದುಕೊಳ್ಳಬೇಕು ಎಂದು ರಾಜ್ಯ ರಸ್ತೆ ಸಾರಿಗೆ ನಿಮಗ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours