ನಗರಸಭೆ ಆಸ್ತಿ ತೆರಿಗೆಯಲ್ಲಿ ಹೆಚ್ಚಳವಾಗಿದೆಯೇ ಪೌರಯುಕ್ತರು ಹೇಳಿದ್ದೇನು.

 

ನಗರಸಭೆ: ಪ್ರಸಕ್ತ ಸಾಲಿಗೆ ಆಸ್ತಿ ತೆರಿಗೆ ಯಥಾವತ್ತಾಗಿ ಜಾರಿ
ಚಿತ್ರದುರ್ಗ, ಮಾರ್ಚ್ 21:
ಚಿತ್ರದುರ್ಗದ ನಗರದಲ್ಲಿ ಬರುವ ಆಸ್ತಿ ತೆರಿಗೆ ವಾಸ ಮತ್ತು ವಾಣಿಜ್ಯೇತರ ಕಟ್ಟಡಗಳಿಗೆ ಸ್ವತ್ತಿನ ಮೂಲ ಬೆಲೆ ಆಧರಿಸಿ ಶೇಕಡ 0.2 ಕ್ಕಿಂತ ಕಡಿಮೆ ಇಲ್ಲದಂತೆ ಹಾಗೂ ಶೇಕಡ 1.5 ಕ್ಕಿಂತ ಹೆಚ್ಚಿಗೆ ಇಲ್ಲದಂತೆ ತೆರಿಗೆ ವಿಧಿಸಲು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸುತ್ತೋಲೆಯಂತೆ 2022ರ ಫೆಬ್ರವರಿ 19 ಹಾಗೂ ಮಾರ್ಚ್ 18ರೀತ್ಯಾ ಕ್ರಮ ಕೈಗೊಳ್ಳಬೇಕಾಗಿರುತ್ತದೆ.
2022-23ನೇ ಸಾಲಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉಪ ನೋಂದಣಾಧಿಕಾರಿಗಳವರಿಗೆ ಆಸ್ತಿ ತೆರಿಗೆ ಜಾರಿಗೊಳಿಸುವ ಬಗ್ಗೆ ಮಾರುಕಟ್ಟೆ ಮೌಲ್ಯ ನಿಗಧಿಪಡಿಸಿ ಕೊಡುವಂತೆ ಕೋರಲಾಗಿದ್ದು, ಉಪ ನೋಂದಣಾಧಿಕಾರಿಗಳು, ಚಿತ್ರದುರ್ಗ ರವರ ಪತ್ರದ ಸಂಖ್ಯೆ: ಇತರೆ/23/2021-22, ದಿನಾಂಕ: 15-03-2022 ತೆರಿಗೆ ದರಗಳ ಪರಿಷ್ಕರಣೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳನ್ನು 2021-22ನೇ ಸಾಲಿಗೆ ಪರಿಷ್ಕರಣೆ ಮಾಡಿರುವುದಿಲ್ಲ. ದಿನಾಂಕ: 01-01-2019 ರಿಂದ ಚಾಲ್ತಿ ಇರುವ ಮಾರುಕಟ್ಟೆ ಬೆಲೆಗಳು ಈಗಲೂ ಚಾಲ್ತಿ ಇರುತ್ತವೆ ಎಂದು ಮಾಹಿತಿ ಸಲ್ಲಿಸಿರುತ್ತಾರೆ.
ನಗರಸಭಾ ಸಾಮಾನ್ಯ ಸಭೆಯ ದಿನಾಂಕ: 16-03-2022 ರ ವಿಷಯ ಸಂಖ್ಯೆ: 10 ರಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗಿ ಉಪ ನೋಂದಣಾಧಿಕಾರಿಗಳ ಚಾಲ್ತಿ ಸಾಲಿನ ಮಾರುಕಟ್ಟೆ ದರಗಳನ್ವಯ 2022-23ನೇ ಸಾಲಿಗೆ ಯಥಾವತ್ತಾಗಿ ಆಸ್ತಿ ತೆರಿಗೆಯನ್ನು ಜಾರಿಗೊಳಿಸಲು ತೀರ್ಮಾನಿಸಲಾಯಿತು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours