ಕಾವಿ ಬಟ್ಟೆ ತೊಟ್ಟಿರುವ ಸ್ವಾಮಿಗಳು ತ್ಯಾಗದ ಜೀವಿಗಳು:ಸಚಿವ ಕೆ.ಎಸ್.ಈಶ್ವರಪ್ಪ

 

 

 

ಹಿರಿಯೂರು:ಭಾರತೀಯ ಸಂಸ್ಕೃತಿಯಲ್ಲಿ ಕಾವಿ ಬಟ್ಟೆ ತೊಟ್ಟಿರುವ ಸ್ವಾಮಿಗಳು ತ್ಯಾಗದ ಜೀವಿಗಳು ಆಗಾಗಿ ಶ್ರೀಗಳ ಪಾದಕ್ಕೆ ನಾವು ನಮಸ್ಕಾರ ಮಾಡುತ್ತೇವೆ ನಮಸ್ಕಾರ ಮಾಡುವಾಗ ಯಾವ ಧರ್ಮ, ಸಮಾಜದ ಗುರುಗಳೆಂದು ನೋಡದೇ ಅವರ ಪಾದಕ್ಕೆ ನಮಸ್ಕಾರಿಸುತ್ತೆವೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್. ಈಶ್ವರಪ್ಪ ಹೇಳಿದರು.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಸಪ್ಪನ ಮಾಳಿಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗಣೇಶ, ಶ್ರೀ ಮಾರುತಿ, ಮಾರಿಕಾಂಬಾ ದೇವಿ ಹಾಗೂ ನಾಗದೇವತಾ ನವಗ್ರಹಗಳ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ನಂತರ ಕಾರ್ಯಕ್ರಮ ಉದ್ದೇಶಿ ಮಾತಾಡಿದರು.

ನಾವೆಲ್ಲರೂ ಮನೆಯ ಸದಸ್ಯರೆಲ್ಲರೂ ಕುಳಿತು ಭಜನೆ ಮಾಡುವಾಗ, ಆ ಭಜನೆ ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುತ್ತದೆ. ಆ ಸಂಸ್ಕಾರವೇ ಭಾರತೀಯ ಸಂಸ್ಕೃತಿ ವಿಶೇಷ ಎಂದು ಹೇಳಿದರು.

ಇನ್ನು ಈ ಕಾರ್ಯಕ್ರಮದಲ್ಲಿ ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವನಕಲ್ಲು ಮಠದ ಪೂಜ್ಯರು ಗೋಶಾಲೆ, ಅನಾಥ ಮಕ್ಕಳ ರಕ್ಷಣೆ, ವೃದ್ಧಾಶ್ರಮಗಳನ್ನು ಪ್ರಾರಂಭಿಸಿರುವುದು ಶ್ಲಾಘನೀಯವಾಗಿದೆ ಎಂದರು. ಹಿರಿಯೂರು ತಾಲ್ಲೂಕಿನಾದ್ಯಂತ ಏಪ್ರಿಲ್ ತಿಂಗಳಿನಲ್ಲಿ ವನಕಲ್ಲು ಶ್ರೀಗಳು ಹಮ್ಮಿಕೊಂಡಿರುವ “ಶ್ರೀಗಳ ನಡಿಗೆ ಹಳ್ಳಿಗಳ ಕಡೆಗೆ” ಎಂಬ ದೊಡ್ಡ ಕಾರ್ಯಕ್ರಮ ಸಂತೋಷದ ವಿಚಾರ. ಇದು ಸಫಲವಾಗಬೇಕು ಎಂದರೇ ನಾವೆಲ್ಲರೂ ಬೆಂಬಲಿಸಬೇಕು. ಗೋವುಗಳ ಸಂರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಗೋವುಗಳ ಸಂರಕ್ಷಣೆ ಮಾಡುವುದೊಕೊಸ್ಕರ ರೈತಾಪಿ ವರ್ಗದವರಿಗೆ ಮೇವನ್ನು ಸಂಗ್ರಹಿಸುವ ಒಂದು ಕಾರ್ಯ ಮತ್ತು ಮೌಡ್ಯತೆಗಳು, ಕಂದಾಚಾರಗಳ ವಿರುದ್ಧ ಜನರಿಗೆ ಪೂಜ್ಯರು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ನಮ್ಮೆಲ್ಲರ ಬೆಂಬಲ ಶ್ರೀಗಳ ಜೊತೆಗೆ ಸದಾ ಇರುತ್ತದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಇನ್ನು ದೇವಸ್ಥಾನ ಲೋಕಾರ್ಪಣೆ ಹಿನ್ನೆಲೆಯಲ್ಲಿ ದೇವರಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸೇರಿದಂತೆ, ಸಂಸ್ಕೃತಿ ಕಾರ್ಯಕ್ರಮಗಳು ನಡೆದವು.

ಇದೇ ವೇಳೆ ಕಾರ್ಯಕ್ರಮದಲ್ಲಿ ಬಸವ ರಮಾನಂದ ಶ್ರೀಗಳು ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್, ಡಿಟಿ ಶ್ರೀನಿವಾಸ್, ಸಿದ್ದೇಶ್ ಯಾದವ್, ಲೋಕೇಶ್ ರೆಡ್ಡಿ, ಗ್ರಾಪಂ ಅಧ್ಯಕ್ಷರು ಸದಸ್ಯರು, ದೇವಸ್ಥಾನ ಕಮಿಟಿಯವರು, ಸೇರಿದಂತೆ ಗ್ರಾಮಸ್ಥರು ಮತ್ತಿತರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours