ಜಮಾತೆ ಇಸ್ಲಾಮಿ‌ ಹಿಂದ್ ಚಿತ್ರದುರ್ಗದ ವತಿಯಿಂದ ಈದ್ ಮಿಲಾದುನ್ನಬಿಯ ಪ್ರಯುಕ್ತ ಜಿಲ್ಲಾ ಆಸ್ಪತ್ರೆಯ ಮುಂಭಾಗ ಸ್ವಚ್ಚತೆ ಕಾರ್ಯಕ್ರಮ

 

ಜಮಾತೆ ಇಸ್ಲಾಮಿ‌ ಹಿಂದ್ ಚಿತ್ರದುರ್ಗದ ವತಿಯಿಂದ ಈದ್ ಮಿಲಾದುನ್ನಬಿಯ ಪ್ರಯುಕ್ತ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿರುವ ವಿವೇಕಾನಂದ ಉದ್ಯಾನವನದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು,ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿರುವ ಈ ಉದ್ಯಾನವನ ಸರಿಯಾದ ನಿರ್ವಹಣೆಯಿಲ್ಲದೆ ಕಸದ ತಿಪ್ಪೆಯಂತಾಗಿತ್ತು, ಕಣ್ಣು ಹಾಯಿಸಿದಲ್ಲೆಲ್ಲಾ ಪ್ಲಾಸ್ಟಿಕ್ ಕವರ್ ಗಳು, ಪೇಪರ್ ಗಳು, ಕುಡಿತದ ಬಾಟೆಲ್ಗಳು, ಪ್ಲಾಸ್ಟಿಕ್ ಬಾಟೆಲ್ಗಳು, ಗುಟುಕಾ ಪೇಪರ್ಗಳು, ತಿಂದು ಬಿಸಾಕಿದ ತಿಪ್ಪೆ ಎಲೆಗಳು, ಎಳನೀರು ತ್ಯಾಜ್ಯ ಹೀಗೆ ಇನ್ನೂ ಹಲವು ರೀತಿಯ ಕೊಳೆತ ತ್ಯಾಜ್ಯದಿಂದ ಇಡೀ ಉದ್ಯಾನವನದ ಸ್ವಚ್ಛಪರಿಸರ ಹಾಳಾಗಿ ಎಲ್ಲಕಡೆ ನೊಣಗಳು,ಕ್ರಿಮಿ ಕೀಟಗಳು ಪಸರಿಸಿ ರೋಗಗ್ರಸ್ಥ ವಾತಾವರಣ ನಿರ್ಮಿಸುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು, ಇದನ್ನು ಗಮನದಲ್ಲಿಟ್ಟುಕೊಂಡು ಅದನ್ನು ಸ್ವಚ್ಛಗೊಳಿಸುವ ಒಂದು ಸಣ್ಣ ಪ್ರಯತ್ನವನ್ನು ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಾವೆಲ್ಲಾ ಮಾಡಿದೆವು ಎಂದು ಸ್ವಚ್ಚತಾ ಕಾರ್ಯಕ್ರಮದಲ್ಲಿ‌‌ ಭಾಗವಹಿಸಿದ್ದ ಎಲ್ಲ ಕಾರ್ಯಕರ್ತರು ಅಭಿಪ್ರಾಯ ಪಟ್ಟರು ಜೊತೆಗೆ ಈದ್ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಜಗತ್ತಿನ ಎಲ್ಲ‌ ಮಾನವರ ಪ್ರವಾದಿಯಾಗಿದ್ದು ಅವರ ತತ್ವಾದರ್ಶಗಳನ್ನು ಅರ್ಥೈಸಿಕೊಂಡು ನಾವೆಲ್ಲ ನಮ್ಮ ಮನಸ್ಸಿನಲ್ಲಿರುವ ದ್ವೇಷ ಅಸೂಯೆಗಳೆಂಬ ಕೊಳೆಯನ್ನು ಸ್ವಚ್ಛಗೊಳಿಸಿ ಪರಸ್ಪರ ಸೋದರರಂತೆ ಎಲ್ಲೆಡೆ ಶಾಂತಿಯನ್ನು ಪಸರಿಸುತ್ತಾ ಪ್ರೀತಿಯಿಂದ, ಸಹಕಾರ ಮನೋಭಾವನೆಯಿಂದ ಬಾಳಬೇಕು, ಪವಿತ್ರ ಕುರ್ ಆನ್ ಪ್ರತಿಪಾದಿಸುವಂತೆ ದೇವನಿಗೆ ಅತ್ಯಂತ ಪ್ರಿಯರಾದವರೆಂದರೆ ಪಾಪಗಳಿಗೆ ಕ್ಷಮೆಯಾಚಿಸುವವರು ಹಾಗೂ ಸ್ವಚ್ಛವಾಗಿರುವವರು, ಪವಿತ್ರ ಕುರ್ ಆನಿನ ಈ ಸೂಕ್ತದಡಿಯಲ್ಲಿ ಎಲ್ಲರೂ ಅಂತರಂಗ ಮತ್ತು ಬಹಿರಂಗ ಶುದ್ಧಿಯನ್ನು ಮಾಡಿಕೊಂಡು ಬಾಳಬೇಕಾದ ಅವಶ್ಯಕತೆ ಪ್ರಸ್ತುತ ಸಂದರ್ಭದ ಅನಿವಾರ್ಯತೆಯಾಗಿದೆ ಜೊತೆಗೆ ಪ್ರವಾದಿ ಮುಹಮ್ಮದರು ಸಾರಿದ ನಾವೆಲ್ಲರೂ ಸೋದರರು, ಒಂದೇ ತಂದೆ ತಾಯಿಯ ಮಕ್ಕಳು, ನಿಮ್ಮಲ್ಲಿ ಯಾರಿಗೂ ಯಾರ ಮೇಲೆಯೂ ಶ್ರೇಷ್ಠತೆಯಿಲ್ಲ, ವರ್ಣದ ಆಧಾರದಲ್ಲಿ,ಜಾತಿಯ ಆಧಾರದಲ್ಲಿ, ಅಂತಸ್ತಿನ ಆಧಾರದಲ್ಲಿ, ಯಾರೂ ಶ್ರೇಷ್ಠರಲ್ಲ, ನಿಮ್ಮಲ್ಲಿ‌ ಯಾರು ಅತಿ ಹೆಚ್ಚು ದೇವನಿಗೆ ಅಂಜಿ ಜೀವನ ಸಾಗಿಸುತ್ತಾನೋ ಅವನೇ ನಿಮ್ಮಲ್ಲಿ‌ ಶ್ರೇಷ್ಠನು, ಈ ಸಂದೇಶಗಳನ್ನು ಅನುಸರಿಸುತ್ತಾ ನಾವೆಲ್ಲರೂ ನಮ್ಮ ಮನಸ್ಸು,ಮನೆ,ಪರಿಸರ ಹಾಗೂ ಇಡೀ ದೇಶದಲ್ಲಿ ಸ್ವಚ್ಛಂದ ಪರಿಸರವನ್ನು ನಿರ್ಮಿಸಿ, ಯಾವುದೋ ಕಾರಣಗಳಿಗೆ ನಮ್ಮನ್ನು ಬೇರ್ಪಡಿಸುವವರ ಮಧ್ಯೆ  ಪ್ರೀತಿ,ವಿಶ್ವಾಸ,ಒಗ್ಗಟ್ಟು,ಸಹಕಾರ,ಶಾಂತಿ,ಮಾನವೀಯತೆಯಿಂದ ಬದುಕೋಣ ಎಂಬ ಸಂದೇಶವನ್ನು ಕಾರ್ಯಕರ್ತರು ನೀಡಿದರು.

ಸ್ವಚ್ಛಗೊಳಿಸಿರುವ ಉದ್ಯಾನವನವನ್ನು ಮುಂದೆ ಮತ್ತೆ ಹಾಳಾಗದಂತೆ ಸಂಬಂಧಪಟ್ಟವರು ಗಮನ ಹರಿಸಿ ಮತ್ತಷ್ಟು ಸುಂದರ ವಾತಾವರಣ ನಿರ್ಮಿಸಬೇಕೆಂದು ಕಾರ್ಯಕರ್ತರು ಕೋರಿಕೊಂಡರು.

ಸ್ವಚ್ಚತಾ ಕಾರ್ಯಕ್ರಮದ ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಈದ್ ಸಂದರ್ಭದ ಪ್ರಯುಕ್ತ ರೋಗಿಗಳಿಗೆ‌ ತಿಂಡಿ ಹಂಚುವ ಕಾರ್ಯವನ್ನೂ ಜಮಾತ್ ಕಾರ್ಯಕರ್ತರು ನೆರವೇರಿಸಿದರು.

ಈ ಸಂದರ್ಭ ಜಮಾತೆ ಇಸ್ಲಾಮಿ ಹಿಂದ್ ಕಾರ್ಯಕರ್ತರಾದ ಮೌಲಾನಾ ಮುಜಪ್ಫರ್ ಹುಸೇನ್ ಶಕೀಲ್ ನದ್ವಿ, ಜೆಡಿಎಸ್ ಮುಖಂಡ ಎಂ.ಹನೀಫ್, ಉದ್ಯಮಿ ಹಾಜಿ ದಾದಾಪೀರ್, ಡಾ. ರಹಮತುಲ್ಲಾ, ಮುಹಮ್ಮದ್ ಲುಕ್ಮಾನ್ ಸೈಫ್, ಅಬ್ದುಲ್ ರೆಹಮಾನ್, ಮುಸ್ತಕೀಮ್, ಹಾಗೂ ಜಮಾತ್ ನ ವಿದ್ಯಾರ್ಥಿ ಸಂಘಟನೆಯಾದ ಎಸ್.ಐ.ಒ ವಿದ್ಯಾರ್ಥಿಗಳಾದ ಮುನೀಬುರ್ರಹ್ಮಾನ್, ಕಬೀರ್, ಹನ್ನಾನ್, ಮುಜಮ್ಮಿಲ್,ಫೈಜಾನ್, ಸಾದಿಕ್ ರವರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours