ವಿಶ್ವಕ್ಕೆ ವಾಲ್ಮೀಕಿ ರಾಮಾಯಣ ಸಂದೇಶ ಸಾರುವ ಕೆಲಸ ಆಗಬೇಕಿದೆ :ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

 

ಚಿತ್ರದುರ್ಗ: ರಾಮಾಯಣ ದರ್ಶನವನ್ನು ವಿಶ್ವಕ್ಕೆ ಹರಡಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಿದಾಗ ಸಮಾಜ ಸುಧಾರಣೆ ಆಗುತ್ತದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನರದ ತರಾಸು ರಂಗ ಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ,ನಗರಸಭೆ ಮತ್ತು ಪರಿಶಿಷ್ಟ  ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ 11 ಜನಕ್ಕೆ ವಾಲ್ಮೀಕಿ ಪುರಸ್ಕಾರ ನೀಡಲಾಗುತ್ತಿದೆ. 20 ಸಾವಿರ ನಗದು ಮತ್ತು 20 ಗ್ರಾಂ ಚಿನ್ನ ನೀಡಲಾಗುತ್ತಿದೆ.  ನಾಯಕ ಸಮಾಜಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಯಡಿಯೂರಪ್ಪ ವಾಲ್ಮೀಕಿ ಜಯಂತಿ ಆಚರಿಸಲು ನಿರ್ಧಾರ ಮಾಡಿ ರಜೆ ಘೋಷಣೆ ಮಾಡಿದರು. ವಾಲ್ಮೀಕಿ ರಾಮಾಯಣ ಗ್ರಂಥದಿಂದ ಸಮಾಜ ಸುಧಾರಣೆ ಆಗುತ್ತಿದೆ. ವಿಶ್ವಕ್ಕೆ ಮೌಲ್ಯ ತುಂಬಿದ ಗ್ರಂಥ ಸಮಾಜಕ್ಕೆ ನೀಡಿದರು. ಪ್ರತಿಯೊಬ್ಬ ವ್ಯಕ್ತಿಯು ಬದುಕು ರೂಪಿಸಿಕೊಳ್ಳೊಲು ರಾಮಾಯಣ ಸಹಕಾರಿಯಾಗಿದೆ.
ಜಯಂತಿಗಳು ಸರ್ಕಾರ ಜಯಂತಿಯಾಗುವುದರಿಂದ ಯಾವುದು ಸಮಾಜದ ಸಹಾಯಕ್ಕೆ ಬರುವುದಿಲ್ಲ. ಈ ದೇಶದ ಪ್ರಧಾನಿ, ಮುಖ್ಯಮಂತ್ರಿ ಆರ್ಥಿಕ ಸದೃಢವಾಗಲು ಹಣ ಸರ್ಕಾರದಿಂದ ಬರುತ್ತದೆ. ಆದರೆ ಖಜಾನೆಯಿಂದ ಹಣ ಹೊರ ಬರಲ್ಲ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟುವ ಕೆಲಸ ಆಗಬೇಕಿದೆ. ಎಲ್ಲಾ ಸಮಾಜದ ಜಯಂತಿಗಳಲ್ಲಿ ಆ ಸಮಾಜ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು. ಆ ಸೌಲಭ್ಯ ಪಡೆದು ಬಲಿಷ್ಠ ಸಮಾಜ ಮತ್ತು ಆರ್ಥಿಕವಾಗಿ ಸಬಲರಾಗಲು ಸಹಕಾರಿ ಎಂದು ಜಿಲ್ಲಾಧಿಕಾರಿಗೆ ಮತ್ತು ಸಿಇಓ ಗೆ ತಿಳಿಸಿದರು.
ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ ಮಾತನಾಡಿ ಮಹರ್ಷಿ ವಾಲ್ಮೀಕಿಯವರ 800-1000 ಸಾವಿರ ವರ್ಷಗಳ ಹಿಂದೆ ಸಂವಿಧಾನ ವಿಚಾರ ಪ್ರಸ್ತಾಪ ಮಾಡಿದ್ದಾರೆ.  ಅನುಭವ ಮಂಟಪ್ಪವವನ್ನು  ಅಂದು ಬಸವಣ್ಣ ದೇಶದ ಪಾರ್ಲಿಮೆಂಟ್ ಎಂದು ಬಣ್ಣಿಸಿದರು. ನಾಯಕ ಸಮಾಜದ ಎಲ್.ಜಿ.ಹಾವನೂರು ಕೆಲಸ ಇತಿಹಾಸದಲ್ಲಿ ಯಾರು ಮಾಡಲ್ಲ.  ವಾಲ್ಲೀಕಿ ಜನಾಂಗಕ್ಕೆ ಅಷ್ಟೆ ಅಲ್ಲದೆ ಎಲ್ಲಾ ಹಿಂದುಳಿದ ಸಮಾಜಕ್ಕೆ ಹಾವನೂರು ಕೊಡುಗೆ ಯಾರು ಮರೆಯುವಂತಿಲ್ಲ. ಹಾವನೂರು ಕಮಿಷನ್ ಮಾಡಿದಾಗ ದೇವರಾಜ್ ಅರಸು ಮುಖ್ಯಮಂತ್ರಿ ಆದಾಗ ಅದನ್ನು ಯಥವತ್ತಾಗಿ ಜಾರಿಗೆ ತಂದರು. ಯುವಕರು ಹಾವನೂರನ್ನು ಪೂಜೆ ಮಾಡಿದರೆ ತಪ್ಪಲ್ಲ. ಭೀಮಪ್ಪ ನಾಯಕ ಅವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮುಖಾಂತರ ಹೆಸರುವಾಸಿಯಾದರು. ವಾಲ್ಮೀಕಿ ಗುರುಪೀಠ ನಿರ್ಮಾಣದಲ್ಲಿ  ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ತಿಪ್ಪೇಸ್ವಾಮಿ, ಎನ್.ವೈ ಹನುಮಂತಪ್ಪ ರಾಜ್ಯ ಸುತ್ತಿ ಮಠ ಕಟ್ಟಿದರು. ಡಿ.ಬೊರಪ್ಪ ಅವರು ಎಲ್ಲಾ ಹಳ್ಳಿಗಾಡಿನಲ್ಲಿ ಶಾಲೆಯನ್ನು ತೆರದು ಶಿಕ್ಷಣ ನೀಡಿದ ಕೀರ್ತಿ ಬೋರಪ್ಪಗೆ ಸಲ್ಲುತ್ತದೆ. ನಗರದ ಚಳ್ಳಕೆರೆ ಗೇಟ್ ನಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಮಾಡಲು ಸಮಾಜ ಒತ್ತಾಯಿಸುತ್ತಿದ್ದು ಇದಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಢಾಧಿಕಾರಿ ಜಿ.ರಾಧಿಕಾ ಅವರೊಂದಿಗೆ ಚರ್ಚಿಸಿ ಎಲ್ಲಾ ಜನಾಂಗದವರು  ಸೇರಿ ನಿರ್ಮಾಣ ಮಾಡಲು ಶ್ರಮಿಸೋಣ ಎಂದು ಹೇಳಿದರು.
ಉಪನ್ಯಾಸಕಿ ಜಯಮ್ಮ  ಮಾತನಾಡಿ ವಾಲ್ಮೀಕಿ ಎಂದು  ದರೋಡೆ ಮಾಡಲಿಲ್ಲ ಹಾಗೇ ಎಲ್ಲೂ ದಾಖಲೆಗಳಿಲ್ಲ. ವಾಲ್ಮೀಕಿ ಮೂಲ ಹೆಸರು ರತ್ನಕರ ಎಂದು ನಾನು ಪಾಪದಲ್ಲಿ ಭಾಗಿಯಾಗಲ್ಲ ಎಂದರು. ರತ್ನಾಕರ್ ರಾಮನ ಜಾಪ ಮಾಡಿ ಸುತ್ತಲೂ ಹುತ್ತ ಬೆಳೆದ ಕಾರಣ ವಾಲ್ಮೀಕಿಯಾದನು. ವೈಜ್ಞಾನಿಕ ಸಂಶೋದನೆಗಳು ವಾಲ್ಮೀಕಿ ಕುರಿತು ಆಗಬೇಕಿದೆ. ವಿಶ್ವ ಗೌರವದಿಂದ ಇರಲು ವಾಲ್ಮೀಕಿ ರಾಮಾಯಣ ಕಾರಣವಾಗಿದೆ. 18 ನೇ ಶತಮಾನದಲ್ಲಿ  ವಿಲಿಯಂ ಜೋಮ್ಸ್ ಅವರು ವಾಲ್ಮೀಕಿ ರಾಮಾಯಣ ಕುರಿತು ಆಂಗ್ಲಕ್ಕೆ ತರ್ಜೆಮೆ ಮಾಡುತ್ತಾರೆ. ಹರಿದಾಸ ಹೇಳುವಂತೆ ಕವಿಗಳ ಕವಿ ವಾಲ್ಮೀಕಿ ಎನ್ನುತ್ತಾರೆ. ಈಗಲೂ ಸಹ ವಾಲ್ಮೀಕಿ ಜೀವಂತವಾಗಿದೆ. ಮನುಷ್ಯ ಕುಲ ಇರುವವರೆಗೂ ವಾಲ್ಮೀಕಿ ರಾಮಾಯಣ ಇರುತ್ತದೆ.
 ನಾಯಕ ನೌಕರರ ಸಂಘದ ಅಧ್ಯಕ್ಷ ಮತ್ತು ಪ್ರಾಧ್ಯಪಕ  ಡಾ.ಗುಡ್ಡದೇಶ್ವರಪ್ಪ ಮಾತನಾಡಿ ವಾಲ್ಮೀಕಿ ಒಂದು ಜಾತಿಗೆ ಸಿಮೀತವಾಗಿಲ್ಲ. ನಾಯಕ ಸಮಜ ಎಲ್ಲಾರ ಜೊತೆ ಸಹಬಾಳ್ವೆಯಿಂದ ಬದುಕುತ್ತಿರುವ ಸಮಜವಾಗಿದೆ. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಎಲ್ಲಾರ ಏಳ್ಗೆಗೆ ಶ್ರಮಿಸಿದೆ. ಅನ್ಯ ಸಮಾಜದವರನ್ನು ಗೌರವಿಸುವ ಪ್ರವೃತ್ತಿಗೆ ನಾಯಕ ಸಮಾಜದ ದಿಟ್ಟ ಹೆಜ್ಜೆ ಇಟ್ಟಿದೆ.  ಮೌನ ಕ್ರಾಂತಿಯ ಮುಖಾಂತ ನಾವು ಗೆಲುವನ್ನು ಪಡೆಯಬೇಕು. ಶಾಂತಿಯಿಂದ ಎಲ್ಲಾವನ್ನು ಪಡೆಯುವ ಕೆಲಸ ಆಗಬೇಕಿದೆ.  ವಾಲ್ಮೀಕಿ ಸಮಾಜ ಎಂದು ಸಹ ಬೇಡಲಿಲ್ಲ. ಕಾನೂನು ಗೌರವಿಸಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುತ್ತಿದೆ. ಜನಾಂಗದ ಎಲ್ಲಾರೂ ಸಹ ಸರ್ಕಾರದ ಕಾರ್ಯಕ್ರಮಕ್ಕೆ ‌ಸಹಕಾರ ನೀಡಿದ್ದಾರೆ. 
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ ಸಿಇಓ ನಂದಿನಿದೇವಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲೂಕ ನಾಯಕ ಸಮಜದ ಅಧ್ಯಕ್ಷರಾದ ಬಿ.ಕಾಂತರಾಜ್, ತಹಶೀಲ್ದಾರ್ ಸತ್ಯನಾರಾಯಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬದ್ರಿನಾಥ್,  ಡಾ.ಗುಡ್ಡದೇಶ್ವರಪ್ಪ,  ನಗರಸಭೆ ಸದಸ್ಯರಾದ ವೆಂಕಟೇಶ, ದೀಪಕ್,  ಜಿಲ್ಲಾ ವಾಲ್ಮೀಕಿ ಸಮಾಜದ ವತಿಯಿಂದ ಜಿಲ್ಲಾ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ಸಮಾಜ ಕಲ್ಯಾಣ   ಓ.ಪರಮೇಶ್ವರಪ್ಪ, ಲೆಕ್ಕಪತ್ರ ಇಲಾಖೆ ಶ್ರೀನಿವಾಸ್, ಓಬಿ ಬಸವರಾಜ್, ಅರ್ಜುನ ಇದ್ದರು.
[t4b-ticker]

You May Also Like

More From Author

+ There are no comments

Add yours