ಜಮಸಾಮಾನ್ಯರಿಗೆ ವಿದ್ಯತ್ ಶಾಕ್, ಯುನಿಟ್ ಗೆ ಎಷ್ಟು ಹೆಚ್ಚಳ ?

 

ಬೆಂಗಳೂರು,ಡಿ.11:  ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಇನ್ನಿತರೆ ದರ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ವಿದ್ಯುತ್ ಶಾಕ್ ಎದುರಾಗುವ ಸಾದ್ಯತೆಗಳಿವೆ.

ರಾಜ್ಯದಲ್ಲಿ ಪ್ರತಿ ಯೂನಿಟ್ ಗೆ ಒಂದು ರೂಪಾಯಿ 50 ಪೈಸೆ ವಿದ್ಯುತ್ ದರ ಹೆಚ್ಚಳ ಮಾಡುವಂತೆ ವಿವಿಧ ವಿದ್ಯುತ್ ಕಂಪನಿಗಳು ಕೆಇಆರ್ ಸಿಗೆ ಪ್ರಸ್ತಾವನೆ ಸಲ್ಲಿಸಿವೆ.ಹೀಗಾಗಿ ಬೇಸಿಗೆ ಮುನ್ನವೇ ಜನರಿಗೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟಲಿದೆ.
ಪ್ರತಿ ಯೂನಿಟ್ ವಿದ್ಯುತ್ ಮೇಲೆ 1.50 ರೂಪಾಯಿ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬೆಸ್ಕಾಂ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಈ ಪ್ರಸ್ತಾವನೆಗೆ ಆಯೋಗ ಸಮ್ಮತಿಸಿದರೆ ಗ್ರಾಹಕರಿಗೆ ಗಾಯದ ಮೇಲೆ ಬರೆ ಬೀಳುವುದು ಖಚಿತ.
ಈಗಾಗಲೇ ಪೆಟ್ರೋಲ್, ಡೀಸೆಲ್ ,ಅಡುಗೆ ಅನಿಲ, ಖಾದ್ಯ ತೈಲ ,ಸೇರಿದಂತೆ ದಿನಬಳಕೆಯ ವಸ್ತುಗಳ ದರ ಗಗನಮುಖಿಯಾಗಿದೆ. ಇದರ ಜೊತೆಗೆ ಟಮೋಟೋ, ಸೇರಿದಂತೆ ಇನ್ನಿತರ ತರಕಾರಿ ಬೆಲೆಗಳು ಕೂಡ ಏರಿಕೆಯಾಗಿದ್ದು ಜನರನ್ನು ಬಸವಳಿಯುವಂತೆ ಮಾಡಿವೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಹೀಗಿರುವಾಗ ರಾಜ್ಯದ ವಿದ್ಯುತ್ ಕಂಪನಿಗಳ ಬೆಸ್ಕಾಂ,ಮೆಸ್ಕಾಂ, ಚೆಸ್ಕಾಂ,ಹೆಸ್ಕಾಂ ಸೇರಿದಂತೆ ಇತರ ವಿದ್ಯುತ್ ಕಂಪನಿಗಳು ಪ್ರತಿಬಾರಿಯಂತೆ ಈ ವರ್ಷವೂ ವಿದ್ಯುತ್ ದರ ಹೆಚ್ಚಳ ಮಾಡುವಂತೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕ್ಕೆ ಮನವಿ ಸಲ್ಲಿಸಿವೆ.
ವಿದ್ಯುಚ್ಛಕ್ತಿ ಕಂಪನಿ ನಷ್ಟ ಎದುರಿಸುತ್ತಿವೆ ಎನ್ನುವ ನೆಪವೊಡ್ಡಿ ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ನಿಗಮ ಪ್ರತಿ ಯೂನಿಟ್ ಗೆ 1.50 ರೂ ಹೆಚ್ಚಳ ಮಾಡುವಂತೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ.
ಕಳೆದ ಬಾರಿ ಒಂದು ರೂಪಾಯಿ 35 ಪ್ರಸ್ತಾವನೆ ಇಟ್ಟಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ 1.50 ಪ್ರಸ್ತಾವನೆ ಸಲ್ಲಿಸಿದೆ.
ಬೆಸ್ಕಾಂ ಮುಂದಿರುವ ವಿದ್ಯುತ್ ದರ ಏರಿಕೆ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ಚ್ಛಕ್ತಿ ಆಯೋಗ ಒಪ್ಪಿಕೊಂಡಿದ್ದೆ ಆದರೆ ಜನರಿಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.
೨೦೧೯ರಲ್ಲಿ ಪ್ರತಿ ಯೂನಿಟ್ ಗೆ 34 ಹಾಗೂ 2020ರಲ್ಲಿ ಪ್ರತಿ ಯೂನಿಟ್ ಗೆ 30 ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದೆ. ಈ ಬಾರಿ ವಿದ್ಯುತ್ ಚ್ಚಕ್ತಿ ನಿಯಂತ್ರಣ ಆಯೋಗ ಎಷ್ಟು ದರ ಏರಿಕೆ ಮಾಡಲಾಗುವುದು ಕುತೂಹಲ ಕೆರಳಿಸಿದ್ದು ಸಾರ್ವಜನಿಕರನ್ನು ಬೆಂಕಿಯಿಂದ ಬಾಣಲೆಗೆ ಕೇಳುವಂತೆ ಮಾಡುವುದು ಖಚಿತ ಎನ್ನಲಾಗಿದೆ

ಬಾಕ್ಸ

  • ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆ
  • ಪ್ರತಿ ಯೂನಿಟ್ ಗೆ 1.50 ರೂ ಹೆಚ್ಚಳಕ್ಕೆ ಕೆಇಆರ್ ಸಿಗೆ ಪ್ರಸ್ತಾವನೆ
  • ಬೇಸಿಗೆ ಮುನ್ನವೇ ವಿದ್ಯುತ್ ದರ ಏರಿಕೆ ಶಾಕ್ ಎದುರಾಗುವ ನಿರೀಕ್ಷೆ
  • ವಿವಿಧ ವಿದ್ಯುತ್ ಕಂಪನಿಗಳಿಂದಲೇ ದರ ಏರಿಕೆಗೆ ಮನವಿ
  • ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಏರಿಕೆ ಸಾಧ್ಯತೆ
  • ಬೆಸ್ಕಾಮ್ ನಿಂದ 1.50 ರೂಪಾಯಿ ಏರಿಕೆಗೆ ಮನವಿ
  • ವಿದ್ಯುತ್ ಕಂಪನಿಗಳು ನಷ್ಟ ಅನುಭವಿಸುತ್ತಿವೆ ಎನ್ನುವ ನೆಪವೊಡ್ಡಿ ದರ ಏರಿಕೆಗೆ ಪ್ರಸ್ತಾವನೆ.
[t4b-ticker]

You May Also Like

More From Author

+ There are no comments

Add yours