ದೇಶದಲ್ಲಿ ಒಮಿಕ್ರಾನ್ ಸಂಖ್ಯೆ 25 ಕ್ಕೆ ಏರಿಕೆ,ಯಾವ ರಾಜ್ಯದಲ್ಲಿ ಎಷ್ಟು ನೋಡಿ.

 

ನವದೆಹಲಿ,ಡಿ.11 – ದೇಶದಲ್ಲಿ ಹೊಸ ಮಾದರಿಯ ಕೋರೊನಾ ಸೋಂಕಿನ ರೂಪಾಂತರಿ ” ಒಮಿಕ್ರಾನ್” ಗುಜರಾತ್ ನಲ್ಲಿ ಮತ್ತೆ ಇಬ್ಬರಿಗೆ ಕಾಣಿಸಿಕೊಂಡಿದೆ.

ಹೀಗಾಗಿ ದೇಶದಲ್ಲಿ ಒಟ್ಟು ಓಮಿಕ್ರಾನ್ ಸೊಂಕು ಸಂಖ್ಯೆ 25 ಕ್ಕೆ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಗುಜರಾತ್ ನ ಜಾಮ್ ನಗರದಲ್ಲಿ ಇಬ್ಬರಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ
ಮಹಾರಾಷ್ಟ್ರದಲ್ಲಿ 10, ರಾಜಸ್ಥಾನದಲ್ಲಿ 9 ಗುಜರಾತ್ ನಲ್ಲಿ 3 , ಕರ್ನಾಟಕದಲ್ಲಿ 2, ಮತ್ತು ದೆಹಲಿಯಲ್ಲಿ ಒಂದು ಮಂದಿಯಲ್ಲಿ ಹೊಸ ಮಾದರಿಯ ರೂಪಾಂತರ ಸೋಂಕು ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಪತ್ತೆಯಾಗಿರುವ ಎಲ್ಲಾ 3 ಓಮಿಕ್ರಾನ್ ಮ ಸೋಂಕಿತರ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಈ ನಡುವೆ ಗುಜರಾತ್ ನ ಜಾಮ್ ನಗರದ ಮಹಾನಗರ ಪಾಲಿಕೆ ರೂಪಾಂತರಿ ಪತ್ತೆಯಾಗಿರುವ‌ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಮಹಾನಗರಪಾಲಿಕೆ ಆಯುಕ್ತ ವಿಜಯಕುಮಾರ್ ಕರಾಡಿ ಹೇಳಿದ್ದಾರೆ

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ಸಂಖ್ಯೆ ಕಡಿಮೆಯಾಗುತ್ತಿದೆ ಆದರೆ ಈ ನಡುವೆ ಹೊಸ ಮಾದರಿಯ ಕಾಣಿಸಿಕೊಂಡಿದೆ ಹೀಗಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಶದ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಜಗತ್ತಿನ ನೂರಕ್ಕೂ ಹೆಚ್ಚು ದೇಶಗಳು ಒಪ್ಪಿಕೊಂಡಿವೆ ಹೀಗಾಗಿ ಭಾರತದ ಪ್ರಯಾಣಿಕರು ಜಗತ್ತಿನ ದೇಶಗಳಿಗೆ ತೆರಳಲು ಸಹಕಾರಿಯಾಗಲಿದೆ. ಅಲ್ಲದೆ ಒಪ್ಪಂದ ಮಾಡಿಕೊಂಡಿರುವ 100 ದೇಶಗಳ ಪ್ರಯಾಣಿಕರು ಭಾರತಕ್ಕೆ ಬರಲು ಕೂಡ ಅನುಕೂಲವಾಗಲಿದೆ.

[t4b-ticker]

You May Also Like

More From Author

+ There are no comments

Add yours