ಚಿತ್ರದುರ್ಗ Ksrtc ಬಳಿಯಲ್ಲಿ ರಸ್ತೆಗೆ ಹರಿಯುತ್ತಿದೆ ಮೋರಿ ನೀರು, ದುರ್ವಾಸನೆಗೆ ಜನರು ಹಿಡಿ ಶಾಪ, ಕಣ್ಮುಚ್ಚಿ ಕುಳಿತ ನಗರಸಭೆ

 

ಚಿತ್ರದುರ್ಗ: ಚಿತ್ರದಯರ್ಗ ನಗರದ ಅತಿ ಹೆಚ್ಚು ಜನಸಂದಣಿ ಇರುವ ಚಿತ್ರದುರ್ಗ ksrtc ಬಸ್ ನಿಲ್ದಾಣ ಬಳಿಯ ಮುಖ್ಯ ರಸ್ತೆಯಲ್ಲಿ ಚರಂಡಿ ಮತ್ತು ಶೌಚಾಲಯ ಪಿಟ್ ಹೊಡೆದು ತಿಂಗಳುಗಳೆ ಕಳೆದರು ಸಹ ಅತ್ತ‌ ಯಾವ ನಗಸಭೆಯವರು ತಲೆ ಕೆಡಿಸಿಕೊಂಡಿಲ್ಲ.  ಸಾರ್ವಜನಿಕರು ಮಾತ್ರ ಹಿಡಿ ಶಾಪ ಹಾಕುತ್ತಿದ್ದಾರೆ.

ನಿತ್ಯ ಸಾವಿರಾರು ವಾಹನ ದಟ್ಟಣೆ ಮತ್ತು ಸಾವಿರಾರು ಜನರು ನಡೆದಾಡುವ ಮುಖ್ಯ ರಸ್ತೆಯಲ್ಲಿ ಈ ರೀತಿಯಾದರೆ ಜನರ ಆರೋಗ್ಯದ ಗತಿಯೇನು ಎಂಬ ಚಿಂತೆ ಜನರಲ್ಲಿ ಕಾಡುತ್ತಿದೆ. ಕೆಟ್ಟ ದುರ್ವಾಸನೆಯಿಂದ ಕೂಡಿದ್ದು ಜನರು ನಡೆದಾಡಲು ಬರದಂತೆ ಆಗಿದೆ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಈ‌ ರೀತಿ ಪೈಪ್ ಲೈನ್ ಒಡೆದು ಹೋಗಿದ್ದರು ಸಹ ಅದನ್ನು ಸರಿಪಡಿಸಬೇಕು ಅಥವಾ ಶಾಶ್ವತ ಪರಿಹಾರಕ್ಕಿಂತ ಮೊದಲು ಸಾರ್ವಜನಕರ ಅನುಕೂಲಕ್ಕೆ ತಾತ್ಕಾಲಿಕ ಪರಿಹಾರ ಮಾಡುವ ಕಾರ್ಯಕ್ಕೆ ನಗರಸಭೆ ಮುಂದಾಗದೇ ಇರುವುದು ಜನರ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸಹ ಅಧಿಕಾರಿಗಳು ಗಮನ‌ ಹರಿಸಿ ಕೊಳಚೆ ನೀರು ಚರಂಡಿಯಲ್ಲಿ  ಸಾರಾಗವಾಗಿ  ಹೋಗುವಂತೆ ಮಾಡಲು ಎಚ್ಚರಿಕೆ ವಹಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours