ಕೆಪಿಎಸ್ಸಿ ಮೂಲಕ 985 ಇಂಜಿನಿಯರ್ ಗಳ ಶೀಫ್ರ ನೇಮಕ:ಸಚಿವ ಸಿ.ಸಿ.ಪಾಟೀಲ್.

 

ಬೆಂಗಳೂರು:  ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 325  ಜೂನಿಯರ್ ಇಂಜಿನಿಯರ್‌ಗಳು, 660 ಸಹಾಯಕ ಇಂಜಿನಿಯರ್‌ಗಳು ಸೇರಿದಂತೆ 985  ಇಂಜಿನಿಯರ್‌ಗಳನ್ನು ಶೀಘ್ರದಲ್ಲೇ ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲಾಗುವುದು ಎಂದು ವಿಧಾನ ಪರಿಷತ್‌ನಲ್ಲಿ  ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ರವರು ಮಾಹಿತಿ ನೀಡಿದ್ದಾರೆ.
ಜೆ.ಇ. ಮತ್ತು ಎ.ಇ. ಹುದ್ದೆಗಳನ್ನು ಹೊರತುಪಡಿಸಿ ಲೋಕೋಪಯೋಗಿ ಇಲಾಖೆಯಲ್ಲಿ ಹುದ್ದೆಗಳ ಕೊರತೆಯಿಲ್ಲ ಎಂದಿದ್ದಾರೆ.

ಯು.ಬಿ. ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಲೋಕೋಪಯೋಗಿ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ಹಲವು ಮಂದಿ ಅಧಿಕಾರಿಗಳು ಎರವಲು ಸೇವೆ ಮೇಲೆ ತೆರಳಿದ್ದಾರೆ. 5 ವರ್ಷಗಳ ಕಾಲ ತಾವು ಹೋಗಿದ್ದ ಇಲಾಖೆಯಲ್ಲಿ ಕೆಲಸ ಮಾಡಲು ಅವಕಾಶ ಇದೆ. ಅದಕ್ಕಿಂತಲೂ ಹೆಚ್ಚಿನ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದರೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

[t4b-ticker]

You May Also Like

More From Author

+ There are no comments

Add yours