ಪುನೀತ್ ಸಮಾಜಮುಖಿ ಕಾರ್ಯಗಳು ಜನರಲ್ಲಿ ಅಜಾರಮರವಾಗಿವೆ: ತಹಶೀಲ್ದಾರ ಎನ್.ರಘುಮೂರ್ತಿ

 

ಚಳ್ಳಕೆರೆ:ಪರರಿಗೋಸ್ಕರ ಬದುಕುವ ವ್ಯಕ್ತಿಗಳು ಅವರು ಸತ್ತ ಮೇಲೂ ಕೂಡ ಅಜಾರಮರವಾಗಿರುತ್ತಾರೆ ಎಂದು  ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ಚಳ್ಳಕೆರೆ ಬೀಡ್ಸ್ ವತಿಯಿಂದ ಆಯೋಜಿಸಿದ್ದ  ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಗೀತ ಗಾಯನ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.

ಜನರಿಗೋಸ್ಕರ  ಬದುಕುವ ವ್ಯಕ್ತಿಗಳನ್ನು ಸಮಾಜವು ಶಾಶ್ವತವಾಗಿ ಜನರ ಮನಸ್ಸಿನಲ್ಲಿರುತ್ತಾರೆ. ಪುನೀತ್  ರಾಜಕುಮಾರ್ ಅವರ ಜೀವಿತಾವಧಿಯಲ್ಲಿ ಅವರು ಮಾಡಿರುವಂತಹ ಸತ್ಕಾರ್ಯಗಳು ಸಮಾಜಕ್ಕೆ ಏನಾದರೂ ತಿಳಿದಿದ್ದಲ್ಲಿ ಅವರಿಗೆ ಗುಡಿಕಟ್ಟಿಸಿ ಅವರನ್ನು ದೇವರ ರೀತಿಯಲ್ಲಿ ಆರಾಧಿಸುತ್ತಿದ್ದರು. ಆದರೆ ದುರಾದೃಷ್ಟವಶಾತ್ ಅವರು ದೈವಾಧೀನರಾದ ಬಳಿಕ ಅವರ ಸತ್ಕಾರ್ಯಗಳ ಆದ ಅನಾಥಾಶ್ರಮಗಳ ನಿರ್ವಹಣೆ, ಅಂದಮಕ್ಕಳ ಪಾಠಶಾಲೆ ವಯೋವೃದ್ಧರ ಆಶ್ರಮಗಳು, ಯುವ ಕಲಾವಿದರಿಗೆ  ಪ್ರೋತ್ಸಾಹ ಇಂತಹ  ಮಹತ್ವದ ಕಾರ್ಯಗಳು ಮಾಡಿದರು.  ಮನುಷ್ಯನಿಗೆ ಹುಟ್ಟು ಸಾವು ಇವುಗಳು ಅನಿವಾರ್ಯವಾಗಿದ್ದು ಹುಟ್ಟು ಮತ್ತು ಸಾವು ನಮ್ಮ ಕೈಲಿಲ್ಲ ಆದರೆ ಬದುಕು ನಮ್ಮ ಕೈಲಿದೆ ಪುನೀತ್ ರಾಜಕುಮಾರ್ ಅವರ ರೀತಿ ನಾವುಗಳು ಬದುಕಿ ಜೀವನವನ್ನು ಸಾರ್ಥಕ ಮಾಡಿಕೊಂಡಲ್ಲಿ ಜೀವನಕ್ಕೆ ಒಂದು ಅರ್ಥ ಬರುತ್ತದೆ ಎಂದು ಹೇಳಿದರು

ಯುವ ಮುಖಂಡರಾದ ಕೆಟಿ ತಿಪ್ಪೇಸ್ವಾಮಿ ಮಾತನಾಡಿ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಬದುಕು ಆದರ್ಶನೀಯವಾದದ್ದು ಎಲ್ಲರಿಗೂ ಪ್ರೇರಣಾತ್ಮಕ ವಾದುದು ಎಂದು ಹೇಳಿದರು. ನಗರಸಭೆ ಅಧ್ಯಕ್ಷರಾದ ಸುಮಕ್ಕ ಉಪಾಧ್ಯಕ್ಷರಾದ ಅಂತ ಮಂಜುಳಾ ಪ್ರಸನ್ನಕುಮಾರ್ ಯುವ ಮುಖಂಡರಾದ ಆನಂದ್ ಸಂಘಟಕರಾದ ಬ್ಯಾನರ್ಜಿ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours