ಒಣದ್ರಾಕ್ಷಿ ಸೇವನೆಯಿಂದ ದೇಹಕ್ಕೆ ಎಷ್ಟೊಂದು ಪ್ರಯೋಜನ ಗೊತ್ತೆ. ಒಮ್ಮೆ ಮಿಸ್ ಮಾಡದೇ ಓದಿ.

 

ಒಣ ದ್ರಾಕ್ಷಿ ಅಡುಗೆ ಮತ್ತು ಸಿಹಿ ಖಾದ್ಯಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಉತ್ತಮ ಹಣ್ಣುಗಳನ್ನು ಆಯ್ದು ಒಣಗಿಸಿ ತಯಾರಿಸಲಾದ ದ್ರಾಕ್ಷಿಯು ಅಧ್ಬುತವಾದ ಆರೋಗ್ಯಕರ ಗುಣಗಳನ್ನು ಹೊಂದಿದೆ. ಪ್ರತಿದಿನ ಇದರ ಸೇವನೆಯಿಂದ ಅನೇಕ ಉಪಯೋಗಗಳು ಪಡೆಯಬಹುದಾಗಿದ್ದು.

ರಕ್ತೋತ್ಪತ್ತಿ :-
ಒಣಗಿದ ದ್ರಾಕ್ಷಿಯಲ್ಲಿ ಅಧಿಕ ಪ್ರಮಾಣದ ಕಬ್ಬಿಣದ ಅಂಶ ಅಡಗಿದೆ. ಇದರಿಂದ ನಮ್ಮ ದೇಹದಲ್ಲಿ ರಕ್ತ ಕಣಗಳ ಉತ್ಪಾದನೆಗೆ ಸಹಾಯವನ್ನು ಮಾಡುತ್ತದೆ. ಆದ್ದರಿಂದ ರಕ್ತ ಹೀನತೆ ಇರುವವರು ಇದನ್ನು ಸೇವನೆ ಮಾಡುವುದರಿಂದ ರಕ್ತದ ಉತ್ಪಾದನೆಗೆ ಸಹಾಯವಾಗುದರಲ್ಲಿ ಅನುಮಾನವಿಲ್ಲ.

ಗಟ್ಟಿ ಮುಟ್ಟಾದ ಎಲುಬು :-
ಮನುಷ್ಯನ ದೇಹದಲ್ಲಿ ಎಲುಬುಗಳು ಗಿಟ್ಟಿ ಇದ್ದರೆ ಅನೇಕ ಸಮಸ್ಯೆಗಳಿಂದ ಮುಕ್ತವಾಗಿರುತ್ತಾನೆ.ಅದಕ್ಕಾಗಿ ಒಣದ್ರಾಕ್ಷಿ ಸೇವಿಸುವುದರಿಂದ ಕ್ಯಾಲ್ಸಿಯಮ್ , ಪೊಟ್ಯಾಶಿಯಂ ಮತ್ತು ಬೋರಾನ್ ನ ಶ್ರೀಮಂತ ಮೂಲವಾಗಿದೆ ಈ ಒಣ ದ್ರಾಕ್ಷಿ.. ಇದರಿಂದಾಗಿ ಗಟ್ಟಿ ಮುಟ್ಟಾದ ಎಲುಬನ್ನು ಹೊಂದಲು ಸಹಾಯ ಮಾಡುತ್ತದೆ. ಚಿಕ್ಕ ಮಕ್ಕಳಿಗೆ ನಿತ್ಯವೂ ಹಣ್ಣನ್ನು ನೀಡುವುದರಿಂದ ಸದೃಡ, ಸ್ವಸ್ಥವಾಗಿ ಸಹಾಯವಾಗುತ್ತದೆ.

ಸದೃಡ ದೇಹ :-
ದ್ರಾಕ್ಷಿಯಲ್ಲಿ ಜೀವಸತ್ವಗಳು, ಅಮೈನೋ ಆಮ್ಲಗಳು, ಖನಿಜಗಳು, ರಂಜಕ, ಸೆಲೆನಿಯಮ್ ಮತ್ತು ಪ್ರೋಟಿನ್ಗಳು ತುಂಬಿವೆ. ಇದರಿಂದ ವ್ಯರ್ಥ ಕೊಬ್ಬು ಕರಗಿ, ಸದೃಡವಾದ ದೇಹವನ್ನು ಹೊಂದಬಹುದಾಗಿದೆ. ಇದು ದೇಹದ ತೂಕವನ್ನು ಕಡಿಮೆ ಇರುವವರಲ್ಲಿ ಹೆಚ್ಚಿಸಿಕೊಳ್ಳಲು ಅವಕಾಶವನ್ನು ಮಾಡಿಕೊಡುತ್ತದೆ. ಆದ್ದರಿಂದ ಇದನ್ನು ಉತ್ತಮ ತೂಕ ವರ್ಧಕ ಎಂದು ಕರೆಯುತ್ತಾರೆ.

[t4b-ticker]

You May Also Like

More From Author

+ There are no comments

Add yours