ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಬಗ್ಗೆ ಮಾಜಿ ಸಂಸದೆ ಚಿತ್ರನಟಿ ರಮ್ಯಾ ಏನ್ ಹೇಳಿದ್ದಾರೆ ನೋಡಿ.

 

ಮೈಸೂರು ಡಿಸಿಯಿಂದ ವರ್ಗಾವಣೆಗೊಂಡ ರೋಹಿಣಿ ಸಿಂದೂರು ವಿಚಾರಕ್ಕಡ ಮಾಜಿ ಸಂಸದೆ ನಟಿ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಹಿನ್ನಲೆಗೆ ಸರಿದಿದ್ದಾರೆ ರಾಜಕಾರಣದಿಂದ ದೂರ ಉಳಿಯಲಿದ್ದಾರೆ ಎಂದು ಚಾಲ್ತಿಯಲಿದ್ದ ಮಂಡ್ಯದ ಮಾಜಿ ಸಂಸದೆ ರಮ್ಯಾ ಈಗ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಕುರಿತು ತಮ್ಮದೆ ಶೈಲಿಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ರಮ್ಯಾ ‘ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿಯನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ. ಈಗಲೂ ಮೆಚ್ಚಿಕೊಳ್ಳುತ್ತೇನೆ. ಆದರೆ ಇಂದಿನ ರಾಜಕೀಯ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಪ್ರಾಮಾಣಿಕ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಿಲ್ಲ ಮತ್ತು ಬೆಂಬಲಿಸುತ್ತಿಲ್ಲ ಎನ್ನುವ ನಿರಾಶೆ ಇದೆ’ ಎಂದು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ಖಾಸಗಿ ಸುದ್ದಿ ಮಾಧ್ಯಮಕ್ಕೆ ರೋಹಿಣಿ ಸಿಂಧೂರಿ ಅವರು ನೀಡಿದ ಸಂದರ್ಶನದ ಆಡಿದ ಬೇಸರದ ನುಡಿಯನ್ನು ಅಪ್‌ಲೋಡ್‌ ಮಾಡಿದ್ದಾರೆ.

ಸರ್ಕಾರ ನಿಮ್ಮ ವರ್ಗಾವಣೆ ಮಾಡುತ್ತದೆ ಎಂದು ನಿರೀಕ್ಷೆ ಮಾಡಿದ್ರಾ ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿರುವ ರೋಹಿಣಿ ಸಿಂಧೂರಿ, ‘ಇಲ್ಲ, ನಿರೀಕ್ಷೆ ಮಾಡಿರಲಿಲ್ಲ. ಎಂಟು ತಿಂಗಳಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವಾಗ, ಕೋವಿಡ್‌ ಪ್ರಕರಣಗಳು ಇಳಿಕೆಯಾಗುತ್ತಿರುವಾಗ, ರಾಜ್ಯದಲ್ಲೇ ಅತಿ ಹೆಚ್ಚು ಲಸಿಕೆಯನ್ನು ನೀಡಿರುವಾಗ, ತಾಲ್ಲೂಕು ಮಟ್ಟದಲ್ಲಿ ಒಳ್ಳೆಯ ಕೆಲಸವಾಗುತ್ತಿರುವಾಗ, ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿರುವಾಗ ವರ್ಗಾವಣೆ ನಿರೀಕ್ಷೆ ಮಾಡಿರಲಿಲ್ಲ’ ಎಂದು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours