ಎಂಟು ವರ್ಷಗಳಿಂದ ಮಾಲೀಕರಿಲ್ಲದೆ ಅನಾಥವಾಗಿ ಕಾರೊಂದು ನಿಂತಿದೆ ಎಲ್ಲಿ ನೋಡಿ.

 

ಚಳ್ಳಕೆರೆ : ತ್ಯಾಗರಾಜ ನಗರದಲ್ಲಿರುವ ಸರ್ಕಾರಿ ನಿವಾಸದ ಮುಂದೆ 8 ವರ್ಷಗಳಿಂದ ಮಾಲೀಕರಿಲ್ಲದೆ ಅನಾಥವಾಗಿ ಕಾರೊಂದು ನಿಂತಿದೆ. ಆ ಕಾರು ಈಗ ವಿಷ ಜಂತುಗಳ ತಾಣವಾಗಿದೆ.

ನಗರದ ತ್ಯಾಗರಾಜ ನಗರದಲ್ಲಿರುವ ಸರ್ಕಾರಿ ನಿವಾಸದ ಮುಂದೆ ಸಣ್ಣದೊಂದು ಕಾರು ನಿಂತಿದೆ ಆ ಕಾರಿನ ನಂಬರ್ ಕೆ.ಎ. 17- ಎ- 4797 ಆಗಿದೆ, ಇನ್ನು ಸರ್ಕಾರದ ಸೇವೆಯಲ್ಲಿ ಎಂದು ಸ್ಟಿಕರ್ ಕೂಡ ಹಾಕಲಾಗಿದೆ. ಆದರೆ ಆ ಕಾರು ಖಾಸಗಿ ಕಾರೋ ಅಥವಾ ಸರ್ಕಾರಿ ಕಾರೋ ಗೊತ್ತಿಲ್ಲ. 8 ವರ್ಷಗಳಿಂದ ಸರ್ಕಾರಿ ನಿವಾಸದ ಮುಂದೆ ನಿಂತಿದೆಯಂತೆ, ಆ ಕಾರು ನೋಡಿದರೆ ಅದರ ಗ್ಲಾಸ್ ಗಳು ಪುಡಿ-ಪುಡಿಯಾಗಿವೆ, ಇನ್ನು ಕಾರಿನ ಕೆಲವು ಸಲಕರಣೆಗಳು ಟುಕ್ಕು ಹಿಡಿದು ನೆಲೆ ಕಚ್ಚಿ ಹೋಗಿವೆ, ಆದರೆ ಅ ಕಾರಿನ ಮಾಲೀಕರು ಯಾರು ಎಂದು ಇದುವರೆಗೆ ತಿಳಿದಿಲ್ಲ. ಕಾರು ಮಾತ್ರ ಅನಾಥವಾಗಿ ಬಿಟ್ಟಿದೆ.
ಈ ಅನಾಥವಾದ ಈ ಕಾರು ಈಗ ವಿಷ ಜಂತುಗಳ ತಾಣವಾಗಿದೆ. ಕಾರಿನಲ್ಲಿ ಎರಡು- ಮೂರು ಬಾರಿ ಹಾವುಗಳು ಇರುವುದು ಕಂಡು ಬಂದಿದೆ, ಕಾರು ರಸ್ತೆಯ ಪಕ್ಕದಲ್ಲಿರುವುದರಿಂದ ಪುಟ್ಟ ಮಕ್ಕಳು ಕೂಡ ಆಟವಾಡುತ್ತಾರೆ. ಇದರಿಂದ ಒಂದಲ್ಲ ಒಂದು ದಿನ ಮಕ್ಕಳ ಅಪಾಯ ತಪ್ಪಿದಲ್ಲ. ಆದ್ದರಿಂದ ಈ ಕಾರನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಭಾರತಮ್ಮ,ಮಹೇಶ್, ತೇಜು ಒತ್ತಾಯಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours