ಭದ್ರಾ ಜಲಾಶಯದ ರಕ್ಷಣೆಗಾಗಿ ಡ್ರಿಪ್ ಯೋಜನೆ ಕಳಪೆ ವಿರೋಧಿಸಿ ಹೋರಾಟ

 

ಭದ್ರಾ ಜಲಾಶಯದ ರಕ್ಷಣೆಗಾಗಿ ಡ್ರಿಪ್ ಯೋಜನೆಯಲ್ಲಿ ಕೈಗೊಂಡಿದ್ದ ಕಾಮಗಾರಿ ಕಳಪೆಯಾಗಿದೆ ಎಂದು ರೈತ ಹೋರಾಟಗಾರ ಕೆ. ಟಿ.ಗಂಗಾಧರ್ ಅವರು ಭದ್ರಾ ಜಲಾಶಯದ ಬಳಿ ಕೈಗೊಂಡಿರುವ ನಿರಂತರ ಹೋರಾಟಕ್ಕೆ ಬೆಂಬಲ ನೀಡಲು
ವಿ.ವಿ.ಸಾಗರ ಹಾಗೂ ಭದ್ರಾ ಮೇಲ್ಡಂಡೆ ಯೋಜನೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿಯಿಂದ ಬೆಂಬಲ ಸೂಚಿಸಲು  ಇಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಲಕ್ಕವಳ್ಳಿ ಭದ್ರಾ ಜಲಾಶಯದ ಬಳಿ ನಡೆಯುತ್ತಿರುವ. ಜಲಾಶಯ ರಕ್ಷಣೆಗೆ ಕೈಗೊಂಡಿದ್ದ ಕಾಮಗಾರಿ ಹಿಂದೆ 2018 ಮತ್ತು 2019 ರಲ್ಲಿ ಮಳೆಗಾಲದಲ್ಲಿ ಭದ್ರಾ ಜಲಾಶಯ ತುಂಬಿ ನೀರು ಹರಿಸಿದ್ದಕ್ಕೆ ಆರ್. ಸಿ.ಸಿ. ಮ್ಯಾಟ್ ಕಿತ್ತು ಹೋಗಿದ್ದು,ಹೋರಾಟಗಾರ ಚಳುವಳಿ ಮತ್ತು ತಜ್ಞರ ಸಮಿತಿಯ ವರದಿ ಆಧಾರದ ಮೇಲೆ ರಿಪೇರಿ ನಡೆಯುತ್ತಿದೆ.
ವೀಕ್ಷಣೆ ಮಾಡಿ ಕಾಮಗಾರಿ ನಡೆಸುತ್ತಿದ ಇಂಜಿನಿಯರುಗಳಿಗೆ ಮತ್ತೊಮ್ಮೆ ಇದೇ ರೀತಿ ಕಳಪೆ ಆದರೆ,ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಡಲಾಯಿತು.
ಚಿತ್ರದುರ್ಗ ತುಮಕೂರು ಸೇರಿದಂತೆ ಎಲ್ಲ ಜಿಲ್ಲೆಗಳಿಗೆ ಕೃಷಿಗೆ ಕುಡಿಯುವ ನೀರು ಕೈಗಾರಿಕೆಗಳಿಗೆ ಭದ್ರಾ ಜಲಾಶಯದ ನೀರು ಆಧಾರವಾಗಿದೆ.
ಆದ್ದರಿಂದ ಯಾವುದೇ ಕಾರಣಕ್ಕೂ ಭದ್ರಾ ಜಲಾಶಯದ ಸುರಕ್ಷತೆಗೆ ಸಂಬಂಧಪಟ್ಟಂತಹ ಕಾಮಗಾರಿ ಕಳಪೆ ಆಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಡಲಾಯಿತು.
ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಕಾರ್ಯಧ್ಯಕ್ಷ ಎಚ್ ಆರ್ ತಿಮ್ಮಯ್ಯ ಸಂಚಾಲಕ ಎಸ್ಪಿ ಶಿವಕುಮಾರ್ ಪ್ರಧಾನ ಕಾರ್ಯದರ್ಶಿ ಸಿದ್ದರಾಮಣ್ಣ
ಖಜಾಂಚಿ ಎಂ ಟಿ. ಸುರೇಶ್, ಆರ್. ಕೆ.ಗೌಡ್ರು, ಪಟ್ರೆಹಳ್ಳಿ ರಾಜೇಂದ್ರ ಮೂಡಲಗಿರಿಯಪ್ಪ ರಾಜಶೇಖರ್ ಮಂಜುನಾಥ್ ಮಾಳಿಗೆ ಚಂದ್ರಗಿರಿ ಶಕ್ತಿ ವೆಲ್, ರಾಮಚಂದ್ರ ಬುಡೇನ್ ಸಾಬ್ ರಂಗ ದಾಮಣ್ಣ ಭಾಗವಹಿಸಿದ್ದರು ಇಂಜಿನಿಯರ್ ಲಮಾಣಿ ಅವರೊಂದಿಗೆ ಸಭೆ ನಡೆಸಲಾಯಿತು.
ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಆಗುವ ಮಧ್ಯದಲ್ಲಿನ ಸಮಸ್ಯೆಗಳು ಮತ್ತು ಮೇಲ್ದಂಡೆ ಪ್ಯಾಕೇಜ್ ಒಂದುಹರಿಸುವ ಕಾಮಗಾರಿ ಪ್ರಗತಿ ಬಗ್ಗೆ ಮಾಹಿತಿ ಪಡೆಯಲಾಯಿತು ಕಾರ್ಯಪಾಲಕ ಅಭಿಯಂತರರಾದ ಮಂಜಪ್ಪನವರು ಮಾಹಿತಿ ನೀಡಿದರು.

[t4b-ticker]

You May Also Like

More From Author

+ There are no comments

Add yours