ಇಂದು ಕೆಂಪು ಗುಲಾಬಿಗೆ ಫುಲ್ ಡಿಮ್ಯಾಂಡ್ ಏಕೆ.

 

ಬೆಂಗಳೂರು: ಪ್ರೇಮಿಗಳ ದಿನಕ್ಕೆ್  ಪ್ರೀತಿಯ ಸಂಕೇತವಾಗಿರುವ ಕೆಂಪು ಗುಲಾಬಿಗೆ ಬೇಡಿಕೆ ಹೆಚ್ಚಳ ಆಗಿದೆ. ಹೊರ ರಾಜ್ಯ, ಹೊರ ದೇಶಗಳಿಂದ ಸಿಕ್ಕಾಪಟ್ಟೆ ಡಿಮ್ಯಾಂಡ್ ಕೇಳಿಬರುತ್ತಿದ್ದು, ಸ್ಥಳೀಯ ವ್ಯಾಪಾರಿಗಳಿಗೆ ಬೆಲೆಯೇರಿಕೆ ತಲೆನೋವು ಎದುರಾಗಿದೆ.

ಅತೀ ಬೇಡಿಕೆ ಹಿನ್ನಲೆ ವ್ಯಾಪಾರಕ್ಕೆ ಕಷ್ಟ ಆಗುತ್ತಿದೆ. ಎಲ್ಲವೂ ರಫ್ತಾಗಿರೋದ್ರಿಂದ ಸ್ಥಳೀಯ ವ್ಯಾಪಾರಕ್ಕೆ ಹೂವು ಸಿಗುತ್ತಿಲ್ಲವೆಂದು ಹೂ ವ್ಯಾಪಾರಿಗಳು ಹೇಳುತ್ತಿದ್ದಾರೆ.

50ಕ್ಕೆ ತಂದು 15, 20 ರೂ.ಗೆ ಮಾರಲು ಸಾಧ್ಯವಿಲ್ಲ, ಹೊರ ರಾಜ್ಯದವರು ಎಷ್ಟೇ ದುಡ್ಡು ಕೊಟ್ಟಾದ್ರು ತಗೋತಾರೆ. ಸ್ಥಳೀಯರು ತೆಗೆದುಕೊಳ್ಳೋದಿಲ್ಲ. ಈ ಬಾರಿ ಹೆಚ್ಚು ಮಳೆಯಿಂದಾಗಿ ರೈತರಿಂದ ಹೂವಿನ ಬೆಳೆಯೂ ಬಂದಿಲ್ಲ. 1 ಗುಲಾಬಿ ಬೆಲೆ  20-25 ರೂ. ಇದೆ. ಬೊಕ್ಕೆ ಬೆಲೆ 200 ರೂ.ನಿಂದ ಆರಂಭವಾಗುತ್ತೆ ಎಂದು ರಸೆಲ್ ಮಾರ್ಕೆಟ್ ಹೂವಿನ ವ್ಯಾಪಾರಿ ಮುರುಗೇಶ್ ಹೇಳಿದರು.

ನವೆಂಬರ್ ನಿಂದ ಫೆಬ್ರವರಿ ಅವಧಿಯಲ್ಲಿ ಗುಲಾಬಿ(Rose markets) ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಕ್ಕೆ ಪೂರೈಕೆ ಆಗಲಿದೆ. 1 ಬಂಚ್ ರೆಡ್ ರೋಸ್ ಬೆಲೆ 300 ರೂ., 1 ಬಾಕ್ಸ್ ರೋಸ್ ದರ 5,000 ರೂ. ಇದೆ. ಈ ವಾರದಿಂದ ವಿದೇಶಗಳಿಗೆ ರೋಸ್ ರಫ್ತು ದುಪ್ಪಟ್ಟು ಆಗಿದೆ. ಏಷ್ಯಾದ ಪ್ರಮುಖ ಅಂತಾರಾಷ್ಟ್ರೀಯ ಹೂವು ಹರಾಜು ಕೇಂದ್ರ ಬೆಂಗಳೂರಿನ IFAB ಸಂಸ್ಥೆಯಿಂದ ವಿದೇಶಗಳಿಗೆ ರೋಸ್ ರಫ್ತು ಆಗುತ್ತದೆ.

IFABಯಲ್ಲಿ 283 ನೋಂದಾಯಿತ ಹೂವು(Rose Price) ಬೆಳೆಗಾರರು ಇದ್ದಾರೆ. ಕಳೆದ ವರ್ಷ ಕೆಂಗುಲಾಬಿ ಒಂದರ ದರ 33 ರೂ. ಇತ್ತು. ಆದರೆ ಈ ವರ್ಷ ವ್ಯಾಲೆಂಟೈನ್ಸ್ ಡೇ)ಗೆ ಕೆಂಗುಲಾಬಿ ಒಂದರ ದರ 40 ರೂ.ಗೆ ಏರಿಕೆ ಆಗಿದೆ. ರೋಸ್ ಕಟಾವು ಮಾಡಿ ಒಂದು ವಾರದವರೆಗೆ ಇಡಬಹುದು ಹಾಗೂ ಫ್ರೆಶ್ ಫ್ರೆಶ್ ರೋಸ್ ವಿದೇಶಕ್ಕೆ ಪಾರ್ಸಲ್ ಆಗುತ್ತದೆ. ಈ ಬಾರಿ ಮಳೆ ಹಿನ್ನೆಲೆ ರೆಡ್ ರೋಸ್ ಬೆಳೆದ ರೈತರ ಸಂಖ್ಯೆ ಕಡಿಮೆ, ಹೀಗಾಗಿ ರೆಡ್ ರೋಸ್(Red Rose) ಬೇಡಿಕೆ ಹೆಚ್ವಿದೆ.

[t4b-ticker]

You May Also Like

More From Author

+ There are no comments

Add yours