ಅಗ್ನಿ ದುರಂತಕ್ಕೆ 3 ಅಂಗಡಿಗಳು ಸುಟ್ಟು ಭಸ್ಮ

 

ಅಗ್ನಿ ಅವಘಡದಲ್ಲಿ 3 ಅಂಗಡಿಗಳು ಸುಟ್ಟು ಭಸ್ಮ: ಮೂವರು ಸಂತ್ರಸ್ತರಿಗೆ ತಲಾ 50 ಸಾವಿರ ನೀಡಿದ ಶಾಸಕ ರಾಮಚಂದ್ರಪ್ಪ
ಜಗಳೂರು: ಕಳೆದ ಶುಕ್ರವಾರ ತಡರಾತ್ರಿ ಅಗ್ನಿ ಅವಘಡದಲ್ಲಿ ಮೂರು ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ಮೌಲ್ಯದ ಗುಜರಿ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆ ಬೆನ್ನಲ್ಲೆ ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ ಭೇಟಿ ನೀಡಿ ಅಂಗಡಿ ಮಾಲೀಕರಿಗೆ ತಲಾ 50 ರೂ. ಸಾವಿರ ಸಹಾಯಧನ ನೀಡಿ ಸಾಂತ್ವನ ಹೇಳಿದರು.
ಪಟ್ಟಣದ ಕೆರೆ ಪಕ್ಕದಲ್ಲಿನ ಅಂಗಡಿಗಳಲ್ಲಿ ಕಳೆದ ಶನಿವಾರ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಜಬೀವುಲ್, ಲುಕ್ಮನ್ ಸಾಬ್, ವೀರಣ್ಣ ಎಂಬುವರಿಗೆ ಸೇರಿದ್ದ ಅಂಗಡಿಗಳಾಗಿದ್ದವು. ಈ ಬೆಂಕಿ ಅವಘಡದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಬೆಂಗಳೂರಿನಿಂದ ಎಂ.ಭಾರ್ಗವಿ ನೇತೃತ್ವದ ಎಫ್ಎಸ್ಎಲ್ ಅಧಿಕಾರಿಗಳ ತಂಡ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಪರಿಕರಗಳನ್ನು ಸಂಗ್ರಹಿಸುತ್ತಿದೆ. ಶಾಸಕರು ಮಾಹಿತಿ ನೀಡಿದರು.
ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಕೂಡ ಘಟನಾ ಸ್ಥಳಕ್ಕೆ ಬೇಟಿ ನೀಡಿ ಅಂಗಡಿ ಕಳೆದುಕೊಂಡ ಮಾಲೀಕರಿಗೆ ಸಂತ್ವಾನ ಹೇಳಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಪಟ್ಟಣ ಪಂಚಾಯತ್ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೆ ಮಂಜಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours