ಅಕ್ಟೋಬರ್ 6 ರಿಂದ 17ರವರೆಗೆ ಶರಣಸಂಸ್ಕೃತಿ ಉತ್ಸವ-ಡಾ. ಶಿವಮೂರ್ತಿ ಮುರುಘಾ ಶರಣರು.

 

ಚಿತ್ರದುರ್ಗ:2021 ನೇ ಸಾಲಿನ ಶರಣಸಂಸ್ಕೃತಿ ಉತ್ಸವವನ್ನು ಅಕ್ಟೋಬರ್ ೬ರಿಂದ ೧೭ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರೀಮಠದಲ್ಲಿ ನಡೆದ ಶರಣಸಂಸ್ಕೃತಿ ಪೂರ್ವಸಿದ್ಧತ ಸಭೆಯಲ್ಲಿ ಬಂದ ಭಕ್ತಾದಿಗಳ ಅಭಿಪ್ರಾಯದಂತೆ ಈ ಬಾರಿಯ ಉತ್ಸವದಲ್ಲಿ ವಿಶೇಷ ಪ್ರವಚನ, ವೀರಗಾಸೆ, ಭಜನೆ, ಜಾನಪದ ಸ್ಪರ್ಧೆಗಳು ಹಾಗು ೭೫ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಅದರ ಸವಿನೆನಪಿನಲ್ಲಿ ಇಡೀ ಶರಣಸಂಸ್ಕೃತಿ ಉತ್ಸವವು ಅತ್ಯಂತ ರಚನಾತ್ಮಕವಾಗಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಾಂಕೇತಿಕವಾದ ಕ್ರೀಡಾಕೂಟ, ಸ್ಥಳೀಯ ಕಲಾವಿದರಿಗೆ ಅವಕಾಶ, ಸಿನೆಮಾ ನಟನಟಿಯರನ್ನು ಆಹ್ವಾನಿಸುವ ಬಗ್ಗೆ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಸ್ಮಾರಕದಲ್ಲಿ ಒಂದು ಕಾರ್ಯಕ್ರಮ ಆಯೋಜಿಸುವ ಬಗ್ಗೆ, ಶುದ್ಧ ರಾಜಕಾರಣದ ಬಗ್ಗೆ ಒಂದು ಚರ್ಚಾಗೋಷ್ಠಿ, ವಿವಿಧ ಮಠಾಧೀಶರನ್ನು ಆಹ್ವಾನಿಸುವ ಕುರಿತು, ಪ್ರಾಣಾಯಾಮ ಕಾರ್‍ಯಕ್ರಮ, ಪೀಠಾರೋಹಣ ಆಯೋಜಿಸುವ ಬಗ್ಗೆ ಮುಂತಾದ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.
ಈ ಬಾರಿಯ ಉತ್ಸವವನ್ನು ಯಶಸ್ವಿಯಾಗಿ ನೆರವೇರಿಸಲು ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಶ್ರೀ ಶಿವಬಸವ ಸ್ವಾಮಿಗಳು, ಶ್ರೀ ಬಸವಕುಮಾರ ಸ್ವಾಮಿಗಳು, ಶ್ರೀ ಬಸವ ಪ್ರಭು ಸ್ವಾಮಿಗಳು ಹಾಗು ವಿವಿಧ ಸ್ವಾಮಿಗಳಿಂದ ೭೦ಲಕ್ಷ ರೂ., ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ೧೦ಲಕ್ಷ ರೂಗಳು ಸೇರಿದಂತೆ ಶಂಕರಮೂರ್ತಿ, ಬಸವರಾಜ ಪಾಟೀಲ್, ಪಟೇಲ್ ಶಿವಕುಮರ್, ಸಿದ್ದಾಪುರ ನಾಗಣ್ಣ, ಎಲ್.ಬಿ. ರಾಜಶೇಖರ್, ತಾಜ್‌ಪೀರ್, ಮಹಡಿ ಶಿವಮೂರ್ತಿ ಜಿ.ಟಿ. ಸುರೇಶ್, ಭರಮಸಾಗರ ಮಹಾಂತೇಶ್, ಮರುಳಾರಾಧ್ಯ, ಮಾರುತೇಶ್ ಹೊಳಲ್ಕೆರೆ ಮತ್ತು ಮಾದಾರ ಸಮಾಜದ ತಿಪ್ಪೇಸ್ವಾಮಿ, ಶ್ರೀಮತಿ ದೇವಿಕುಮಾರಿ ವಿಶ್ವನಾಥ್ ಮುಂತಾದವರು ಕಾಣಿಕೆ ಮತ್ತು ದವಸ-ಧಾನ್ಯವನ್ನು ಕೊಡುವುದಾಗಿ ವಾಗ್ದಾನ ಮಾಡಿದರು.
ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು, ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಯಾದವ ಗುರುಪೀಠದ ಶ್ರೀ ಕೃಷ್ಣಯಾದವಾನಂದ ಸ್ವಾಮಿಗಳು, ಗಾಣಿಗ ಗುರುಪೀಠದ ಶ್ರೀ ಬಸವಕುಮಾರ ಸ್ವಾಮಿಗಳು, ಛಲವಾದಿ ಗುರುಪೀಠದ ಶ್ರೀ ಬಸವ ನಾಗೀದೇವ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗಸ್ವಾಮಿಗಳು, ಚಳ್ಳಕೆರೆಯ ಶ್ರೀ ಬಸವ ಕಿರಣ ಸ್ವಾಮಿಗಳು, ತಿಪ್ಪೇರುದ್ರ ಸ್ವಾಮಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯದರ್ಶಿ ಎ.ಜೆ. ಪರಮಶಿವಯ್ಯ, ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಎಲ್.ಬಿ. ರಾಜಶೇಖರ್, ತಾಜಪೀರ್, ಫಾತ್ಯರಾಜನ್, ನಿರಂಜನ ಮೂರ್ತಿ, ಶಂಕರಮೂರ್ತಿ, ಎಸ್.ವಿ.ನಾಗರಾಜಪ್ಪ, ಕೆಇಬಿ ಷಣ್ಮುಖಪ್ಪ, ಮರುಳಾರಾಧ್ಯ, ವಿವಿಧ ಸಮಾಜಗಳ ಮುಖಂಡರುಗಳು, ಎಸ್.ಜೆ.ಎಂ. ವಿದ್ಯಾಸಂಸ್ಥೆಯ ಶಾಲಾಕಾಲೇಜುಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
ಶರಣಸಂಸ್ಕೃತಿ ಉತ್ಸವ ಕಾರ್ಯಾಧ್ಯಕ್ಷ ಕೆ.ಎಸ್. ನವೀನ್ ಸ್ವಾಗತಿಸಿದರು. ಜಿತೇಂದ್ರ ನಿರೂಪಿಸಿದರು.

[t4b-ticker]

You May Also Like

More From Author

+ There are no comments

Add yours