ಲಸಿಕೆಯ ಮೊದಲ ದಿನವೇ ಎಷ್ಟು ಲಕ್ಷ ಜನರು ಲಸಿಕೆ ಪಡೆದಿದ್ದಾರೆ ಗೊತ್ತೆ.

 

ನವದೆಹಲಿ ಜೂನ್ 22: ಭಾರತವು ಕೋವಿಡ್  ವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಲಸಿಕೆ ವಿತರಣೆಯಲ್ಲಿ ದೇಶವು  ಹೊಸ ದಾಖಲೆ  ಸೃಷ್ಟಿಸಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಿದ ಮೊದಲ ದಿನವೇ ದೇಶದಲ್ಲಿ 80 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ.

ಸೋಮವಾರ ರಾತ್ರಿ 8 ಗಂಟೆ ವೇಳೆಗೆ 80,95,314 ಫಲಾನುಭವಿಗಳಿಗೆ ಕೋವಿಡ್  ವೈರಸ್ ಲಸಿಕೆ ನೀಡಲಾಗಿದೆ. ಈ ಹಿಂದೆ ಏಪ್ರಿಲ್ 2ರಂದು ಅತಿಹೆಚ್ಚು ಅಂದರೆ 42,65,157 ಜನರಿಗೆ ಲಸಿಕೆ ನೀಡಿರುವುದೇ ದಾಖಲೆಯಾಗಿತ್ತು.

ದೇಶದಲ್ಲಿ ಜೂನ್ 21ರಿಂದಲೇ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಉಚಿತವಾಗಿ ಕೋವಿಡ್  ವೈರಸ್ ಲಸಿಕೆಯನ್ನು ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಅದರಂತೆ ಮೊದಲ ದಿನ ಲಸಿಕೆ ವಿತರಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ.
[t4b-ticker]

You May Also Like

More From Author

+ There are no comments

Add yours