ಕಳೆದ ಬಾರಿಯ 2019ರ ಏಕದಿನ ವಿಶ್ವಕಪ್‌ ಸೋಲು ಮರೆಯಾಲಗುತ್ತಿಲ್ಲ.

 

ಹೊಸದಿಲ್ಲಿ: ಕಳೆದ ಬಾರಿಯ 2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋಲು ಅನುಭವಿಸಿದ್ದರಿಂದ ನಮಗೆ ತುಂಬಾ ನೋವಾಗಿತ್ತು. ಆದರೆ, ಈ ಸೋಲನ್ನು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪ್ರೇರಣೆಯಾಗಿ ಸ್ವೀಕರಿಸಿ ಮುಂದೆ ಸಾಗುತ್ತೇವೆ ಎಂದು  ಆರಂಭಿಕ ಕೆ.ಎಲ್‌ ರಾಹುಲ್‌ ಹೇಳಿದರು.

ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ, ಅಕ್ಟೋಬರ್‌ 24ರಂದು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸುವ ಮೂಲಕ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುನ್ನ ಬುಧವಾರ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಸೆಣಸಲಿದೆ.

“ಟಿ20 ವಿಶ್ವಕಪ್ ಟೂರ್ನಿ ಆಡಲು ನಾನು ಉತ್ಸುಕನಾಗಿದ್ದೇನೆ. ಏಕೆಂದರೆ, ಮಹತ್ವದ ಟೂರ್ನಿಯಲ್ಲಿ ಆಡಲು ಪ್ರತಿಯೊಬ್ಬ ಆಟಗಾರ ಹಲವು ವರ್ಷಗಳ ಕಾಲ ಕಠಿಣ ತರಬೇತಿ ಪಡೆದಿರುತ್ತಾರೆ. ಅಂದಹಾಗೆ 2019ರ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಸೋಲು ನಮಗೆ ನೋವು ತರಿಸಿತ್ತು. ಆದರೆ, ಇದನ್ನು ಪ್ರೇರಣೆಯಾಗಿ ಪಡೆಯುವ ಮೂಲಕ ಚುಟುಕು ವಿಶ್ವಕಪ್‌ ಟೂರ್ನಿ ಗೆಲ್ಲಲು ಇನ್ನಷ್ಟು ಹೆಚ್ಚಿನ ಪ್ರಯತ್ನ ಹಾಕುತ್ತೇವೆ,” ಎಂದು ಕೆ.ಎಲ್‌ ರಾಹುಲ್‌ ರೆಡ್‌ ಬುಲ್‌ ಆಯೋಜಿಸಿದ್ದ ಕ್ಲಬ್‌ಹೌಸ್‌ ಸೆಷನ್‌ನಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours