ಸಾರ್ಥಕ ಜೀವನ ನಡೆಸಿದ ದಿಮಂತ ಯುಗ ಪುರುಷ ಮಹರ್ಷಿ ವಾಲ್ಮೀಕಿ:ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ : ರಾಮಾಯಣ ಕೇವಲ ಧಾರ್ಮಿಕ ಗ್ರಂಥ ಮಾತ್ರವಷ್ಟೇ ಅಲ್ಲದೇ ಕಾವ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ ಜೀವನದ ಉದ್ದಕ್ಕೂ ಉತ್ತಮ ಮಾರ್ಗದರ್ಶನ ತೋರುವ ಮೂಲಕ ಸಾರ್ಥಕ ಜೀವನ ನಡೆಸಿದ ದಿಮಂತ ಯುಗ ಪುರುಷ ಮಹರ್ಷಿ ವಾಲ್ಮೀಕಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ವಾಲ್ಮೀಕಿ ವೃತ್ತದಲ್ಲಿ ಪುತ್ಥಳಿಗೆ ಹೂವಿನ ಹಾರ ಹಾಕವುದುರ ಮೂಲಕ ವಾಲ್ಮಿಕಿ ಕಲ್ಯಾಣ ಮಂಟದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಮುದಾಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸರಳ ವಾಲ್ಮೀಕಿ ಜಯಂತೋತ್ಸವ ಕಾರ್ಯಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಳ್ಳಕೆರೆ ವಾಲ್ಮೀಕಿ ಜಯಂತಿಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.

ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತೋತ್ಸವ ಆಚರಣೆಗೆ ಅರ್ಥ ಬರುತ್ತದೆ. ಮಹಾನಿಯರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಯುವ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಹನೀಯರ ಜಯಂತಿಗಳು ಅರ್ಥಪೂರ್ಣವಾಗಿವೆ ಎಂದರು.

ನಾಯಕ‌ ಸಮಾಜವು ಸುಶಿಕ್ಷಿತ ಸಮಾಜವಾಗಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೆ ಮುಟ್ಟಿಸುವ ಕೆಲಸ ಆಗಬೇಕಿದೆ.‌ಇದರಿಂದ ಸಮಾಜ ಬೆಳವಣಿಗೆಗೆ ಸಹಕಾರಿಯಾಗಲಿದೆ.  ಹಿಂದುಳಿದ ಪ್ರದೇಶವಾಗಿರುವ ಚಳ್ಳಕೆರೆಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ‌ ಮೂಲಕ ಜನರಲ್ಲಿ ವಿಶ್ವಾಸ ಮೂಡುವ ಕೆಲಸ ಮಾಡುತ್ತಿದ್ದೇನೆ. ನಾಯಕ ಸಮಾಜದಲ್ಲಿ ಹುಟ್ಟಿರುವುದು ನಮ್ಮ ಹೆಮ್ಮೆಯಾಗಿದೆ. ಅಧಿಕಾರದಲ್ಲಿ ಇರುವ ಎಲ್ಲಾರೂ ಸಹ ನ್ಯಾಯ ದೊರಕಿಸುವ ಕೆಲಸ ಮಾಡಿದಾಗ ಸಮಾಜ ಅನುಕೂಲವಾಗುತ್ತದೆ ಎಂದರು.

ಪ್ರಾಸ್ತವಿಕವಾಗಿ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಸಮಾಜದ ಮೀಸಲಾತಿ ಬಳಸಿ ನಮ್ಮ ಜೀವನ ಉನ್ನತ್ತಿಕರಿಸಿಕೊಳ್ಳೋಣ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ ಜನರ ಜೀವನ ದುಸ್ಥಿತಿಯಲ್ಲಿದೆ. ಶೇಕಡ ನಲವತ್ತರಷ್ಟು ಗ್ರಾಮೀಣ ಪ್ರದೇಶದ ಜನರು ಸರಕಾರ ಸೌಲಭ್ಯ
ಕಂಡಿಲ್ಲ, 24 ಸಾವಿರ ಸ್ಲೋಕ್ ಗಳನ್ನು ಸಮುದಾಯ ಕ್ಕೆ ನೀಡಿದ ಮಹಾಕವಿ ಮಹರ್ಷಿಗಳ ಹಾದಿಯಲ್ಲಿ ನಾವು ನಡೆಯಬೇಕು ಎಂದಿದ್ದಾರೆ.

ನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮೀ ಮಾತನಾಡಿ, ಮಾನವನ ಸಮಾಜ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಸಮಾಜದ ಒಳಿತಿಗೆ ಮಹನೀಯರು ನೀಡಿರುವ ಮಾರ್ಗಗಳ ಬಗ್ಗೆ ಚಿಂತನೆ ಮಾಡಿ, ಸಮಾಜದ ಪರಿವರ್ತನೆಯ ನಿಟ್ಟಿನಲ್ಲಿ ಕಾರ್ಯಕ್ರಮಗಳು ಸಾರ್ಥಕವಾಗ ಬೇಕು. ಮಹಾಕಾವ್ಯ ರಾಮಾಣ ಇಂದಿಗೂ ಪ್ರಚಲಿತವಾಗಿರುವಂತೆ ಬರೆದು ವಾಲ್ಮೀಕಿಯವರ ಸಾಧನೆ ಮಹತ್ವದಾಗಿದೆ. ಆದ್ದರಿಂದಲೇ ಇವರನ್ನು ನೆನಪಿಸುವ ದೃಷ್ಟಿಯಿಂದ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮಿ, ಮಾಜಿ ಜಿಪಂ ಸದಸ್ಯ ಜಯಪಾಲಯ್ಯ, ಬಾಳೆಕಾಯಿ ರಾಮದಾಸ್, ಕೆ.ಟಿ.ಕುಮಾರಸ್ವಾಮಿ, ಡಾ.ನಾಗೇಂದ್ರನಾಯಕ, ಸಣ್ಣಸೂರಯ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್‍ಗೌಡ, ತಾಪಂ ಇಒ ಮಡುಗಿನ ಬಸಪ್ಪ, ಪಿಡ್ಲೂಯು ವಿಜಯ್ ಬಾಸ್ಕರ್, ಬಿಇಓ ಸುರೇಶ್, ನಗರಸಭೆ ಸದಸ್ಯರು, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಮಹಿಳಾ ಸದಸ್ಯರು, ಮುಖಂಡರು ಸೇರಿದಂತೆ ಇತರರಿದ್ದರು.

 

[t4b-ticker]

You May Also Like

More From Author

+ There are no comments

Add yours