ಯುವ ಸಮೂಹ ಅಂಬೇಡ್ಕರ್ ಮಾದರಿಯಲ್ಲಿ ಅಧ್ಯಯನ ಮಾಡಿ: ಶಾಸಕ ಜಿ‌.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ಯುವ ಸಮೂಹ  ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾದರಿಯಲ್ಲಿ  ಅಧ್ಯಯನ ‌ಮಾಡಿದರೆ  ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜು ಆವರಣದ ಆಡಿಟೋರಿಯಂ ನಲ್ಲಿ ಜಂಬೂದ್ವೀಪ ಕರ್ನಾಟಕ  ಜಿಲ್ಲಾ ಘಟಕದ  ಮಹಾತ್ಮ ಫುಲೆ ಅಧ್ಯಯನ ಕೇಂದ್ರ ಚಿತ್ರದುರ್ಗ ಇವರ ವತಿಯಿಂದ ಕೆ.ಎ.ಎಸ್. ಪರೀಕ್ಷಾ ತರಬೇತಿ  ಶಿಬಿರವನ್ನು  ಉದ್ಘಾಟಿಸಿ ಮಾತನಾಡಿದರು‌.
ನಮ್ಮ ಜಿಲ್ಲೆಯಲ್ಲಿ ಕೆಎಎಸ್ ಅಧಿಕಾರಿಗಳು ತುಂಬಾ ವಿರಳವಾಗಿದ್ದು ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ಕೆಎಎಸ್ ಅಧಿಕಾರಿಗಳನ್ನು ಕಾಣಬಹುದು. ಅಂಬೇಡ್ಕರ್ ಸಂವಿಧಾನ ರಚನೆ  ಮಾಡದಿದ್ದರೆ ಹಿಂದುಳಿದ  ಸಮಾಜಕ್ಕೆ ಅವಕಾಶಗಳು ದೊರೆಯುತ್ತಿರಲಿಲ್ಲ.ಸಂವಿಧಾನವನ್ನು ಯಾವ    ಸಮಾಜಕ್ಕೂ ಅನ್ಯಾಯ ಮಾಡದೇ ಬರೆದಿರುವುದು ಇತಿಹಾಸ ಆಗಿದೆ. ನಮ್ಮಲ್ಲಿನ  ಎಲ್ಲಾ ಸಮಸ್ಯೆಗೆ  ಸಂವಿಧಾನದಲ್ಲಿ ಪರಿಹಾರ ಒದಗಿಸಿದ್ದಾರೆ.ಸಂವಿಧಾನ ರಚನೆ ಆಗದಿದ್ದರೆ ನಮ್ಮ ಬದುಕನ್ನು ಊಹಿಸಲು ಸಾಧ್ಯವಿಲ್ಲ ಎಂದರು.
ಯಾವುದೇ ಸಮಾಜದ  ರಾಜಕಾರಣಿಗಳು,  ಅಧಿಕಾರಿಗಳು  ಬಡವರನ್ನು  ಕೈ ಹಿಡಿದು ಮೇಲೆತ್ತುವ ಪ್ರಯತ್ನ ಮಾಡುವವರ ಸಂಖ್ಯೆ ತುಂಬಾ ಕಡಿಮೆ. ಸರ್ಕಾರಿ ಅಧಿಕಾರಿಗಳು ತಮ್ಮ ಸ್ವಂತ ಹಣದಲ್ಲಿ  ಸಮಾಜಕ್ಕೆ  ಇಂತಹ ತರಬೇತಿ  ನೀಡುತ್ತಿರುವುದು ಸಂತೋಷದ ವಿಷಯ  ಎಂದರು.
ಹೊರ ಜಿಲ್ಲೆಯಿಂದ ಬರುವ ಮಕ್ಕಳಿಗೆ ಎಲ್ಲಾರಿಗೂ ಸಹ ಹಾಸ್ಟೆಲ್ ಸೌಲಭ್ಯ ಒದಗಿಸಿದ್ದೇನೆ. ಯುವಕ ಯುವತಿಯರು ಉಚಿತವಾಗಿ ನೀಡುತ್ತಿರುವ ಉಚಿತ ದೊರೆಯುವ  ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯನ್ನು ಆಸಕ್ತಿಯಿಂದ ಕಲಿಯಬೇಕು. ತರಬೇತಿ ಮುಗಿದ ನಂತರ ಸಹ ಕಲಿಕೆ ಸಂಬಂಧಿಸಿದ ಪುಸ್ತಕಗಳನ್ನು ಪಡೆದು ನಿರಂತರ ಅಭ್ಯಾಸ ಮಾಡಿದರೆ  ನಿಮ್ಮ ಸರ್ಕಾರಿ ಹುದ್ದೆಯ ಕನಸನ್ನ ನನಸು ಮಾಡಿಕೊಳ್ಳಬಹುದು ಎಂದರು.
ಮುಂದೆ ನಡೆಯುವ ಇಂತಹ ಕೆಎಎಸ್ ಮತ್ತು ಐ.ಎ.ಎಸ್ ತರಬೇತಿಗೆ ಸಹಕಾರ ನೀಡುತ್ತೇನೆ. ಜೊತೆಗೆ ನನ್ನ ಜಿಲ್ಲೆಯಿಂದ ಹೆಚ್ಚು ಜನರು ಆಯಕಟ್ಟಿನ ಜಾಗ ಅಲಂಕರಿಸಬೇಕು ಎಂಬುದು ನನ್ನ ಅಭಿಲಾಷೆ ಆಗಿದೆ. ಸರ್ಕಾರಿ ಅಧಿಕಾರಿಗಳು ಇಂತಹ ತರಬೇತಿ ಕೊಡಿಸುವ ಮೂಲಕ ಇತರೆ ಸರ್ಕಾರಿ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಜಂಬೂದ್ವೀಪ ಘಟಕ ಜಿಲ್ಲಾಧ್ಯಕ್ಷ  ಹಾಗೂ ನಗರಸಭೆ ಪೌರಯುಕ್ತ ಸಿ.ಚಂದ್ರಪ್ಪ ಮಾತನಾಡಿ ನಾವು ಅನ್ ಲೈನ್ ಅರ್ಜಿ ಕರೆದಿದ್ದು 140 ಅರ್ಜಿ ಬಂದಿದ್ದು ಅದರಲ್ಲಿ 4೦ ಮಕ್ಕಳನ್ನು ನಾವು ತರಬೇತಿಗೆ ಆಯ್ಕೆ ಮಾಡಿಕೊಂಡೆವು ಎಂದರು.  ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ತರಬೇತಿ ಅವಶ್ಯಕತೆ ಎಂದು ಅರಿತು  ಚಿತ್ರದುರ್ಗ ಜಿಲ್ಲೆಯ ಮಕ್ಕಳಿಗೆ ಅನುಕೂಲವಾಗಲಿ ಎಂದು  ಕೆ.ಎ.ಎಸ್. ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಸಂಪೂರ್ಣ ಸರ್ಕಾರಿ ನೌಕರರು ಸೇರಿ ಮಾಡಲಾಗುತ್ತಿದೆ. ಈ ಅಧ್ಯಯನ ಕೇಂದ್ರ ಮುಂದಿನ ದಿನದಲ್ಲಿ ಬೇರೆ ರೀತಿಯ ಹೆಜ್ಜೆಯನ್ನು ಇಡುವ ಕಡೆಗೆ ನಮ್ಮ ಕೇಂದ್ರ ಚಿಂತನಡ ನಡಸಿದೆ. ನಮ್ಮ ಜಿಲ್ಲೆ ಹಿಂದುಳಿದ ಜಿಲ್ಲೆಯಲ್ಲಿ ಮಕ್ಕಳಿಗೆ ಆರ್ಥಿಕ ಹೊರೆ ಇಲ್ಲದೇ ಸರ್ಕಾರಿ ಉದ್ಯೋಗವ  ಪಡೆದು ಕುಟುಂಬ ನಿರ್ವಹಣೆ ಉತ್ತಮವಾಗಿ ನಡೆಯಲಿ ಎಂಬ ಆಶಯವಾಗಿದೆ. ಮಕ್ಕಳಿಗೆ ಅಧ್ಯಯಮ ಅವಶ್ಯ ಸೌಲಭ್ಯ ಒದಗಿಸುವ ಕೆಲಸ ಮಾಡಲು ನಿರ್ಧರಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಹೇಗೆ ಎದುರಿಸಬೇಕು ಎಂಬುದರ ಜೊತೆಗೆ ಜೀವನದ ಆಲೋಚನೆಯನ್ನು ಬದಲಾಯಿಸುತ್ತದೆ. ಆಧುನಿಕ ಉಪಕರಣ ಬಳಸಿ ಅಧ್ಯಯನ ಸಹ ಮಾಡಬಹುದು. ಸ್ಮಾರ್ಟ್ ಕ್ಲಾಸ್ ಮೂಲಕ  ಅಂತರ್ ರಾಜ್ಯ  ತರಬೇತುದಾರರಿಂದ ತರಬೇತಿ ನೀಡಲು ಪ್ರಯತ್ನಿಸಲಾಗುತ್ತಿದೆ.  ಮುಂದಿನ ದಿನದಲ್ಲಿ  ಉದ್ಯೋಗಕ್ಕೆ ಯಾವ ರೀತಿ ಅವಕಾಶ ಪಡೆಯಬೇಕು ಎಂಬುದರ ಸಂದೇಶವನ್ನು ಸ್ಪರ್ಧಾತ್ಮಕ ತರಬೇತಿ ಮನಸ್ಸಿಟ್ಟು ಕಲಿಯಬೇಕು,ನಿರಂತರ ಅಭ್ಯಾಸ ಮಾಡಬೇಕು. ಹೆಚ್ಚಿನ ಅನುಕೂಲ ಇರುವವರು ದೊಡ್ಡ ಮಟ್ಟದ ಹುದ್ದೆಗಳಿಗೆ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಜಂಬೂದ್ವೀಪದ ಗೌರವ ಅಧ್ಯಕ್ಷ ತಹಶೀಲ್ದಾರ್ ನಾಗಸಿದ್ದಾರ್ಥ ಹೊಲೆಯರ್ ಮಾತನಾಡಿ ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಈ ಭಾರತ ,53 ಸಾವಿರ ಜಾತಿಗಳಾಗಿ ಹೊಡೆದು ನಿಂತಿವೆ. ಜಂಬೂದ್ವೀಪದಲ್ಲಿ ಮೊದಲು ಜಾತಿಗಳು ಇರಲಿಲ್ಲ. ಭಾರತದ ನಿಜವಾದ ಇತಿಹಾಸ ಅರ್ಥ ಮಾಡಿಕೊಳ್ಳಬೇಕು‌. ಮಕ್ಕಳು ಅಧ್ಯಯನ ಮಾಡಬೇಕು. ಅಧ್ಯಯನದಲ್ಲಿ ಆಸಕ್ತಿ ವಹಿಸಿದರೆ ನಿಮ್ಮ ಅಧ್ಯಯನಕ್ಕೆ ಉತ್ತಮ ಫಲಿತಾಂಶ ಬರುತ್ತದೆ ಎಂದರು‌.
ನಗರಸಭೆ ಸದಸ್ಯೆ ತಾರಕೇಶ್ವರಿ,ಜಿಲ್ಲಾ ಹಿಂದಳಿದ ವರ್ಗಗಳ ಕಲ್ಯಾಧಿಕಾರಿ ಜಗನ್ನಾಥ್, ಜಂಬೂದ್ವೀಪ ರಾಜ್ಯ ಅಧ್ಯಕ್ಷ ರಾಮಣ್ಣ,ಶಿವಮೊಗ್ಗ ಲೋಕೋಪಯೋಗಿ ಅಭಿಯಂತರ ಕೆ.ಜಿ.ಜಗದೀಶ್, ಬ್ರಹ್ಮವರ ತಹಶೀಲ್ದಾರ್  ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ತಿಪ್ಪೇರುದ್ರಪ್ಪ, ಪಿಆರ್ಡಿ ಇಂಜಿನಿಯರ್ ಹನುಮಂತಪ್ಪ ಇದ್ದರು.
[t4b-ticker]

You May Also Like

More From Author

+ There are no comments

Add yours