ವಿಶ್ವ ಅಯೋಡಿನ್ ಕೊರತೆ ನಿವಾರಣಾ ಸಪ್ತಾಹ ದೇಹಕ್ಕೆ ಅಯೋಡಿನ್ ಅವಶ್ಯ: ಡಾ.ಬಿ.ವಿ.ಗಿರೀಶ್

 

ಚಿತ್ರದುರ್ಗ:ಅಯೋಡಿನ್ ಒಂದು ಸೂಕ್ಷ್ಮ ಪೋಷಕಾಂಶವಾಗಿದ್ದು ನಿತ್ಯವೂ ನಮ್ಮ ದೇಹಕ್ಕೆ ಅಯೋಡಿನ್ ಅಂಶ ಅವಶ್ಯವಾಗಿದೆ ಇದನ್ನು ನಾವು ಉಪ್ಪುನಲ್ಲಿ ಮತ್ತು ಕೆಲವು ಅಯೋಡಿನ್ ಅಂಶವಿರುವ ತರಕಾರಿಗಳ ಸೇವನೆಯಿಂದ ಪೂರೈಕೆಯಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮದಕರಿ ಪುರ ಗ್ರಾಮದ ಹಿರಿಯ ಮಾದ್ಯಮಿಕ ಶಾಲೆಯ ಸಮುದಾಯ ಭವನದಲ್ಲಿ ದಿನಾಂಕ 28-10-2022 ರಂದು ವಿಶ್ವ ಅಯೋಡಿನ್ ಕೊರತೆ ನಿವಾರಣಾ ಸಪ್ತಾಹ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 1988 ರಿಂದ ಈ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ಮಾಹಿತಿ ಶಿಕ್ಷಣದೊಂದಿಗೆ ಜಾಗೃತಿ ಮೂಡಿಸುತ್ತಾ ನಡೆಸಲಾಗುತ್ತಿದೆ

ಸಾಧ್ಯವಾದಷ್ಟು ಕೈಗಾಡಿಗಳಲ್ಲಿ ಮಾರುವ ಉಪ್ಪು ಉಪಯೋಗಿಸಬಾರದು ಸೂರ್ಯ ಮಾರ್ಕ್ ಇರುವ ಅಯೋಡಿನ್ ಯುಕ್ತ ಉಪ್ಪನ್ನೇ ಬಳಸಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ ಅಯೋಡಿನ್ ಕೊರತೆಯಿಂದ ಗಂಟಲುವಾಳ ರೋಗ ಬರುತ್ತದೆ ಇದು ಥೈರಾಯ್ಡ್ ಗ್ರಂಥಿಯಲ್ಲಿನ ಒಂದು ಊತವಾಗಿದೆ ಇದು ಕುತ್ತಿಗೆಯ ಊತ ಅಥವಾ ಗಂಟಲುಗೂಡಿನ (ಧ್ವನಿಪೆಟ್ಟಿಗೆ) ಊತಕ್ಕೆ ಕಾರಣವಾಗುತ್ತದೆ ಗಂಟಲುವಾಳ ರೋಗವು ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಸುತ್ತಿಲ್ಲದ ಸಂದರ್ಭದಲ್ಲಿ ಸಂಭವಿಸುತ್ತದೆ ಎಂದರು.

ಸಾಮಾನ್ಯವಾಗಿ ಬೆಟ್ಟಪ್ರದೇಶಗಳಲ್ಲಿ ಅಂದರೆ ಅಲ್ಪ್ಸ್, ಪಿರನೀಸ್, ಕಾರ್ಪೇತಿಯನ್ಸ್, ಅಂಡೀಸ್ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಇದು ಸಾಮಾನ್ಯ ಮಿಟಮಿನ್‍ಗಳ ಕೊರತೆಯ ಜೊತೆಗೆ ಆಹಾರದಲ್ಲಿ ಸಾಕಷ್ಟು ಅಯೋಡಿನ್ ಇಲ್ಲವಾದರೆ ಈ ರೋಗ ಉಂಟಾಗುತ್ತದೆ ಸಾಮಾನ್ಯವಾಗಿ ಇದು ವಯಸ್ಕರಲ್ಲಿ ಹೆಚ್ಚು ಅದರಲ್ಲೂ ಗಂಡಸರಿಗಿಂತ ಹೆಂಗಸರಲ್ಲಿ ಎಂಟು ಪಟ್ಟು ಹೆಚ್ಚು ಕೆಲವು ವೇಳೆ ಅನುವಂಶಿಕ ಕಾರಣಗಳಿಂದಾಗಿ ಎಳೆಯವರಿಗೂ ಬರುವ ಸಾಧ್ಯತೆ ಇದೆ ಎಂದರು
ಪ್ರತಿನಿತ್ಯ ಆಹಾರ ಸೇವನೆಯಲ್ಲಿ ಕನಿಷ್ಟ 150 ಮೈಕ್ರೋ ಗ್ರಾಂನಷ್ಟು ಅಯೋಡಿನ್ ನಮ್ಮ ದೇಹಕ್ಕೆ ಅವಶ್ಯಕತೆ ಇರುತ್ತದೆ 16 ಪಿಪಿಎಂಗಿಂತಳೂ ಜಾಸ್ತಿ ಅಯೋಡಿನ್ ಅಂಶವಿರುವ ಉಪ್ಪನ್ನು ಉಪಯೋಗಿಸಿ ಅಯೋಡಿನ್ ಕೊರತೆ ರೋಗಗಳಿಂದ ಮುಕ್ತರಾಗಿ ಎಂದು ಹೇಳಿದರು
ಶ್ರೀ ಧರ್ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಾತನಾಡುತ್ತ ಮನೆಯಲ್ಲಿ ಉಪ್ಪಿನ ಸಂಗ್ರಹಣೆ ಹೇಗೆ ಮಾಡಬೇಕು ಮತ್ತು ಆಹಾರ ತಯಾರಿಸುವಾಗ ಉಪ್ಪನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು
ಕಾರ್ಯಾಗಾರದಲ್ಲಿ PHCOS ,ಪವಿತ್ರ P B ,ನಾಗರತ್ನ.B ,CHO ರಶ್ಮಿ.D ಆಶಾಕಾರ್ಯಕರ್ತೆಯರಾದ, ರೂಪ.ಕಾವೇರಿ, ಮಂಜುಳಾ, ಜ್ಯೋತಿಬಾಯಿ, ಮುಖ್ಯೋಪದ್ಯಾಯರಾದ, ರೇಖಾ ಮೇಡಂ, ಸಹಶಿಕ್ಷಕರುಗಳಾದ ,ಮೆಹಾಬುಬಿ,ಮೀನಾ.ನಾಗಲತ,ಸಹೀರಾಬಾನು,ಉಷಾ,ವೀಣಾ,ಶಿವಮಂಗಳಮ್ಮ,ಕಮಲಾಕ್ಷಿ .ಹಾಗೂ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾದ ,ಮನೋಹರ್, ಭಾಗವಹಿಸಿದ್ದರು .

[t4b-ticker]

You May Also Like

More From Author

+ There are no comments

Add yours