ಪೌರ ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಿ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಲಹೆ

 

ಚಿತ್ರದುರ್ಗ:ಅ:14:( chitrdaurga)  ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣವನ್ನು ನೀಡುವ ಕಡೆ ಗಮನ ಹರಿಸಿ ಉತ್ತಮ ಸ್ಥಾನಮಾನಗಳನ್ನು ಪಡೆಯುವಂತೆ ಮಾಡಿ ಎಂದು ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ ಸಲಹೆ ನೀಡಿದರು.
ನಗರದ ಅಂಬೇಡ್ಕರ್ ಕಲ್ಯಾಣ ಮಂಟಪ್ಪ ಆವರಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ನಗರಸಭೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೌಕ ಕಾರ್ಮಿಕರು ತಮ್ಮ ಮಕ್ಕಳನ್ನು  ಕೆಎಎಸ್ ಐಎಎಸ್ ಮಾಡುವ ಕಡೆ ಮಕ್ಕಳನ್ನು ನೀವು ಯೋಚಿಸಬೇಕು.ಒಂದು ಒತ್ತು ಉಪವಾಸ ಇದ್ದರು ಪರವಾಗಿಲ್ಲ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಡಿ. ಪೌರ ಕಾರ್ಮಿಕರು ಮಾಡುವ ಕೆಲಸದಿಂದ ರಾಜ್ಯದ ಜನರು ಆರೋಗ್ಯವಾಗಿದ್ದಾರೆ.ನಗರ ಸುಂದರವಾಗಿ ಕಾಣಬೇಕೆಂದರೆ ಅದಕ್ಕೆ ಪೌರಕಾರ್ಮಿಕರು ಕಾರಣವಾಗಿದ್ದಾರೆ. ಪೌಕ ಕಾರ್ಮಿರನ್ನು  ನಮ್ಮ ಬಿಜೆಪಿ ಸರ್ಕಾರ ಕಾಯಂ ಗೊಲಿಸುವ ಮೂಲಕ ಏಜೆನ್ಸಿಯಿಂದ ಪಡೆಯುತ್ತಿದ್ದವರಿಗೆ ನೇರವಾಗಿ ತನ್ನ  ಸಂಬಳ ಪೂರ್ಣವಾಗಿ ಕಾರ್ಮಿಕರ ಕೈ ಸೇರುತ್ತಿರುವುದು ಸಂತೋಷದ ವಿಚಾರವಾಗಿದೆ.
ನಗರದಲ್ಲಿ  ಸ್ಥಳದ ಕೊರತೆ ಇರುವುದರಿಂದ ಎಲ್ಲಾದರೂ ಜಾಗವನ್ನು ಹುಡುಕಿ ಪೌರಕಾರ್ಮಿಕರಿಗೆ ನಿವೇಶನ ದೊರಕಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.  ನಾನು ಸಹ ನಗರದಲ್ಲಿ  8 ಸಾವಿರ ಜನರಿಗೆ ಮನೆ ನೀಡಲಾಗಿದೆ. ಚೋಳಗುಡ್ಡ ಸೇರಿ ಎಲ್ಲಾ ಕಡೆಗಳಲ್ಲಿ  ಜನರಿಗೆ ಖಾತೆ ಮಾಡಿಸುವ ಕೆಲಸ ನಾನು ಮಾಡಿದ್ದೇನೆ‌.
ಪೌರ ಕಾರ್ಮಿಕರು ಒಂದು ದಿನ ತಮ್ಮ ಕಾರ್ಯ ನಿಲ್ಲಿಸಿದರೆ ಜನರ  ಆರೋಗ್ಯ ಸೇರಿ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದರು. ಚುನಾವಣೆ ಬಂದಾಗ ಏನು ಬೇಕಾದರು ಆಶ್ವಾಸನೆ ಕೊಡಬಹುದು ಆದರೆ ಸರ್ಕಾರ ಆರ್ಥಿಕತೆ ನೋಡಿಕೊಂಡು ನಿರ್ಧಾರ ಮಾಡಬೇಕಾಗುತ್ತದೆ ಎಂದರು.ಮುಂದಿನ ದಿನದಲ್ಲಿ  ಪೌರಕಾರ್ಮಿಕರ ಹಿತ ಕಾಯುವ ಕೆಲಸ ಮಾಡುತ್ತ ಅವರ ಕಷ್ಟ ಸುಖಗಳಿಗೆ  ಜೊತೆಯಲ್ಲಿ ಸದಾ ಇರುತ್ತೇನೆ ಎಂದು ತಿಳಿಸಿದರು.
ರಾಜ್ಯ ಪೌರ ಕಾರ್ಮಿಕರ ಸಂಘದ ರಾಜ್ಯಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ 1994 ರಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  ಅವರು  ಸ್ಟೇಡಿಯಂ ಮುಂಭಾಗದಲ್ಲಿ  ಪೌರ ಕಾರ್ಮಿಕರಿಗೆ  ನಿವೇಶನ ನೀಡಿದ್ದರು. ಆದರೆ ಪೌರ ನೌಕರರಿಗೆ ನಿವೇಶನ ನೀಡಿರಲಿಲ್ಲ. ಆದರೆ ತಿಪ್ಪಾರೆಡ್ಡಿ ಅವರು ಮತ್ತು ನಾನು  1988 ರಲ್ಲಿ   ಚರ್ಚಿಸಿ  ಸರ್ಕಾರಿ ಕಲಾ ಕಾಲೇಜು ಹಿಂಭಾಗದಲ್ಲಿ 294 ಜನರಿಗೆ  ನಿವೇಶನಗಳನ್ನು ನೀಡಲಾಯಿತು ಎಂದು ಶಾಸಕರ ಕಾರ್ಯ ಸ್ಮರಿಸಿದರು. ಬಿಬಿಎಂಪಿ, ನಗರಸಭೆ, ಪುರಸಭೆ ಸೇರಿ ಒಟ್ಟು 11820 ಪೌರ ಕಾರ್ಮಕರಿಗೆ  ಬಿಜೆಪಿ ಸರ್ಕಾರ  ಕಾಯಂಗೊಳಿಸಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದರು. ಪೌರ ಕಾರ್ಮಿಕರ ಏಳ್ಗೆಗೆ  ಶಾಸಕರ ಶ್ರಮ ಸಾಕಷ್ಟಿದೆ. ಸಾಕಷ್ಟು ಹೋರಟಗಳ ಮೂಲಕ ಹೊಸ ಕಾನೂನು ಮುಖಾಂತರ ಸಚಿವರಾಗಿದ್ದ  ವೈಜನಾಥ ಪಾಟೀಲ್ ಮತ್ತು ಮುಖ್ಯಮಂತ್ರಿ ದೇವೇಗೌಡರ ಕಾಲದಲ್ಲಿ ತಮ್ಮ ಸ್ಥಳೀಯ ಸಂಸ್ಥೆ ಮೂಲಕ  ಸಂಬಳ ಮಾಡಲು ಸರ್ಕಾರ ಆದೇಶಿಸಲಾಯಿತು.
ಗುತ್ತಿಗೆ ಮೇಲೆ ಇರುವ ಎಲ್ಲಾ ಪೌರ ಕಾರ್ಮಿಕರನನ್ನು  ನೇರ ನೇಮಕಾತಿಯಲ್ಲಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಸಂಘಟನೆ ಬಲಪಡಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಹಿಡೇರಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕ್ರೀಡಯಲ್ಲಿ ಭಾಗವಹಿಸಿ  ಗೆಲುವು ಸಾಧಿಸಿದ ಎಲ್ಲಾ ಕ್ರೀಡಾಪಟುಗಳಿಗೆ  ಶಾಸಕರು ಪ್ರಮಾಣ ಪತ್ರ, ಮೆಡಲ್ ವಿತರಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತಿ ಹಂಚಿನಲ್ಲಿರುವ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.ಶಾಸಕರಿಗೆ ಪೌರಕಾರ್ಮಿಕರು  ವಿವಿಧ ಬೇಡಿಕೆಗಳ‌ ಮನವಿ ಪತ್ರಗಳ ಮನವಿ ಸಲ್ಲಿಸಿದರು.
50 ಲಕ್ಷ ವೆಚ್ಚದ ಪೌರ ಕಾರ್ಮಿಕರ ವಿಶ್ರಾಂತಿ ಗೃಹದ  ನಿರ್ಮಾಣಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಂದ ಶಂಕುಸ್ಥಾಪನೆ:
ನಗರದ ಜೋಗಿಮಟ್ಟಿ  ರಸ್ತೆಯ  ತಿಪ್ಪನ ಘಟ್ಟಮ್ಮ  ದೇವಸ್ಥಾನದ ಮುಂಭಾಗದಲ್ಲಿ  ಪೌರಕಾರ್ಮಿಕರ ವಿಶ್ರಾಂತಿ ಗೃಹಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿ ನಗರಸಭೆಯ ಪೌರ ಕಾರ್ಮಿಕರು ಬೆಳಗಿನ ಜಾವದಲ್ಲಿ ಬಂದು ನಗರ ಎಲ್ಲಾ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ  ನಗರಸಭೆ ಆವರಣದಲ್ಲಿ ವಿಶ್ರಾಂತಿ ಗೃಹಗಳು ಇದ್ದು ನಗರ ಇನ್ನು ಅನೇಕ ಭಾಗಗಳಲ್ಲಿ  ವಿಶ್ರಾಂತಿ ಗೃಹಗಳು ಮಾಡಬೇಕು ಎನ್ನು ದೃಷ್ಟಿಯಿಂದ ಇಂದು  ಸುಮಾರು50 ಲಕ್ಷ ವೆಚ್ಚದ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ನಗರಸಭೆ ಅನುದಾನದಲ್ಲಿ ಇನ್ನು ಹೆಚ್ಚಿನ ಸೌಲಭ್ಯ ನೀಡುವ ಕೆಲಸ ಮಾಡಲಾಗುತ್ತದೆ.ವಿಶ್ರಾಂತಿ ಗೃಹದಲ್ಲಿ ಕೆಲಸದ ನಂತರ ಸ್ವಲ್ಪ ವಿಶ್ರಾಂತಿ ಪಡೆದು ನಂತರ ಮನೆಗೆ ಹೋಗಬಹುದು. ಅಲ್ಲಿ ಮೂಲಭೂತ ಸೌಕರ್ಯಗಳನ್ನು ಮಾಡಲಾಗಿರುತ್ತದೆ ಎಂದರು
ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷೆ ಮಂಜುಳ ವೇದಮೂರ್ತಿ, ನಗರಸಭೆ ಸದಸ್ಯ ವೆಂಕಟೇಶ್, ಸುರೇಶ್, ಅಂಗಡಿ ಮಂಜಣ್ಣ, ಅನುರಾಧ ರವಿಕುಮಾರ್,  ಶ್ರೀದೇವಿ ಚಕ್ರವರ್ತಿ, ದಾವುದ್, ರೋಹಿಣಿ ನವೀನ್, ದೀಪಕ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಮುಖಂಡರಾದ ಪರಮೇಶ್, ರವಿಕುಮಾರ್,ಕೃಷ್ಣ,ನವೀನ್ ಚಾಲುಕ್ಯ, ಮಹೇಶ್, ನಗರಸಭೆ ಆಯುಕ್ತ ಸಿ.ವಾಸಿಂ, ನಗರಸಭೆ ಆರ್ ಓ ಚಂದ್ರಶೇಖರ್,  ಇಂಜಿನಿಯರ್ ಕಿರಣ್, ರೇಣುಕ್ಕಮ್ಮ, ಮಂಜುಳ ಮತ್ತು ಪೌರಕಾರ್ಮಿಕರು  ಇದ್ದರು.
[t4b-ticker]

You May Also Like

More From Author

+ There are no comments

Add yours