ಮಣಿಪುರ ರಾಜ್ಯದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಅತ್ಯಾಚಾರ ಖಂಡಿಸಿ ಪ್ರತಿಭಟನೆ

 

ಮೊಳಕಾಲ್ಮುರು ಸುದ್ದಿ:  ಮಣಿಪುರ ರಾಜ್ಯದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಅತ್ಯಾಚಾರ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕರ್ನಾಟಕ  ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯೆಕ್ತಪಡಿಸಿದರು

ಮೊಳಕಾಲ್ಮುರು ಪಟ್ಟಣದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಪ್ಪಿತಸ್ತರಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ತಪ್ಪಿತಸ್ತರಿಗೆ  ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ನೀಡಬೇಕು ಎಂದು ಘನವೆತ್ತ ರಾಷ್ಟ್ರಪತಿಗಳಿಗೆ ತಹಶೀಲ್ದಾರ್ ಮೂಲಕ ಮನವಿಸಲ್ಲಿಸಿ ಒಕ್ಕೊರಲಿನಿಂದ ಒತ್ತಾಯಿಸಿದರು

ದೇಶದಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿರುವುದು ಅಮಾನುಷವಾದ ಕೃತ್ಯ ವಾಗಿದ್ದು ಇಂತಹ ಕೃತ್ಯ ವ್ಯೆಸಗಿರುವ ಪರಮ ಪಾಪಿಗಳನ್ನು ಸೂಕ್ತ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕವಾಗಿ ಮರಣ ದಂಡನೆಗೆ ಗುರಿಪಡಿಸಬೇಕು ಎಂದು ಆಕ್ರೋಶ ವ್ಯೆಕ್ತಪಡಿಸಿದರು

ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಲ್ಲಿ ಒಬ್ಬರು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ ಮಾಜಿ ಯೋಧನ ಮಾಡದಿಯಾಗಿದ್ದು ದೇಶ ರಕ್ಷಣೆಗೆ ಹೋರಾಡಿದ ನಾನು ನನ್ನ ಮಡದಿಯನ್ನು  ರಕ್ಷಿಸಸಲು ಸಾಧ್ಯವಾಗಲ್ಲಿಲ್ಲ ಎಂದು ಹೇಳುವುದಾದರೆ ದೇಶದಲ್ಲಿ ದೌರ್ಜನ್ಯ ದಬ್ಬಾಳಿಕೆ ಮತ್ತು ಅಜಾಗರುಕತೆ ಎಲ್ಲಿಗೆ ಬಂದಿದೆ ಎಂಬುವುದನ್ನು ತಿಳಿಯಬೇಕಾಗಿದೆ ಇತಹ ಅಮಾನವೀಯ ಘಟನೆಗೆ ಕಾರಣರಾದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅಗ್ರಹಿಸಿದರು

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರ  ಹಿಂದುಳಿದವರ  ಅಲ್ಪಸಂಖ್ಯಾತರ  ರೈತರ ಕೂಲಿಕಾರ್ಮಿಕರ ಮೇಲೆ ದೌರ್ಜನ್ಯ ದಬ್ಬಾಳಿಕೆ ಅತ್ಯಾಚಾರ ಹೆಚ್ಚಾಗಿದ್ದು ಇಂತಹ ಅಮಾನವೀಯ ಕೃತ್ಯಕ್ಕೆ ಕಾರಣರಾದವರನ್ನು ಸೂಕ್ತ ಕಾನೂನು ಕ್ರಮ  ಜರುಗಿಸಿ ನೊಂದ ನಾಗರಿಕರಿಗೆ ನ್ಯಾಯ ಒದಗಿಸಬೇಕಾಗಿದೆ ಎಂದು ಮನವಿ ಮಾಡಿದರು

ದೇಶದ ನಾಗರೀಕ ಸಮಾಜವೆ ತಲೆ ತಗ್ಗಿಸುವಂತ ಅಮಾನವೀಯ ಘಟನೆ ನಡೆದರು ಸಹ ಕೇಂದ್ರ ಸರ್ಕಾರದ ಪ್ರಭಾವಿ ಮಹಿಳಾ ಸಚಿವರಾದ ನಿರ್ಮಲಾ ಸೀತಾರಾಮನ್ ಸ್ಮೃತಿ ಇರಾನಿ ಶೋಭಾ ಕರಂದ್ಲಾಜೆ ದ್ವನಿ ಎತ್ತದಿರುವುದು ಅತ್ಯಂತ  ವಿಷಾದದ ಸಂಗತಿಯಾಗಿದೆ ಎಂದು ವಿಷಾದ ವ್ಯೆಕ್ತಪಡಿಸಿದರು

 

ಬಿಜೆಪಿ ನೇತೃತ್ವದ ಸರ್ಕಾರ ಹೊಂದಿರುವ ರಾಜ್ಯಗಳಲ್ಲಿ ದೌರ್ಜನ್ಯಗಳು ಹೆಚ್ಚಾಗಿದ್ದು ಕೇಂದ್ರ ಸರ್ಕಾರ ಯಾವುದೆ ಕ್ರಮಕ್ಕೆ ಮುಂದಾಗದಿರುವುದು ಪರೋಕ್ಷ ಬೆಂಬಲ ಎದ್ದು ಕಾಣುತ್ತಿದೆ ಇಂತಹ ದುರಾಡಳಿತವನ್ನು ಹತ್ತಿಕ್ಕಲು ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವ ಮುನ್ನ  ಬಿಜೆಪಿ ನೇತೃತ್ವ ಕೇಂದ್ರ ಹಾಗೂ  ರಾಜ್ಯ ಸರ್ಕಾರಗಳನ್ನು ವಜಾ ಮಾಡಿ ಮಹಿಳೆಯರಿಗೆ ರಕ್ಷಣೆ ನೀಡಿ ವಿಶ್ವದಲ್ಲಿ ದೇಶದ ಹೆಸರು  ಉಳಿಯುವಂತೆ ಕ್ರಮ ಜರುಗಿಸಿ ಎಂದು ಅಗ್ರಹಿಸಿದರು

ಸಂದರ್ಭದಲ್ಲಿ ಕರ್ನಾಟಕ  ರೈತ ಸಂಘಟನೆಯ  ರಾಜ್ಯ ಉಪಾಧ್ಯಕ್ಷರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ತಾಲ್ಲೂಕು ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್ ಕರ್ನಾಟಕ  ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ನಾಗಬೂಷಣ  ಜಿಲ್ಲಾ ಸಂಚಾಲಕರಾದ ಕೊಂಡಾಪುರ ಪರಮೇಶ್ವರಪ್ಪ ಮುಖಂಡರಾದ ಬಸವರಾಜಪ್ಪ  ರಾಜಣ್ಣ ಮಂಜಣ್ಣ ಚಂದ್ರಣ್ಣ  ತಿಪ್ಪೇಸ್ವಾಮಿ ಕನಕ ಶಿವಮೂರ್ತಿ ಓಬಣ್ಣ ನಾಗರಾಜ ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours