ಅಕ್ಕಿಗಾಗಿ ಕೂಲಿ ಕಳಕೊಂಡು ಎರಡು ತಿಂಗಳಿಂದ ಮಹಿಳೆಯರ ಅಲೆದಾಟ, ಹೆಬ್ಬೆಟ್ಟು ಪಡೆದು ಅಕ್ಕಿ ನೀಡದೇ ವಂಚನೆ?

 

ಚಿತ್ರದುರ್ಗ: ಜೂ.28 : ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಗ್ರಾಮ ನ್ಯಾಯಬೆಲೆ ಅಂಗಡಿಯಲ್ಲಿ ದೊಡ್ಡ ಗೋಲ್ ಮಾಲ್ ಆಗಿರುವ ಘಟನೆ ನಡೆದಿದ್ದು ಇದೇ ವ್ಯಾಪ್ತಿಯಲ್ಲಿ  ರೇಷನ್ ಪಡೆಯುವ ಬಂಗೇರಹಟ್ಟಿ ಗ್ರಾಮಸ್ಥರು ಮೂರ್ನಾಲ್ಕು ತಿಂಗಳಿಂದ ಆಹಾರ ನೀಡಿಲ್ಲ ಎಂದು ಕೂಡಲೇ ಆಹಾರ ವಿತರಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಮನವಿ ಸಲ್ಲಿಸಿದ ಅವರು ಬಸವರಾಜ್ ಎಂಬುವವರು ಮೂರು ತಿಂಗಳು ಕಳೆದರು ಅಕ್ಕಿ ನೀಡಿಲ್ಲ.ಕೇಳಿದರೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ನ್ಯಾಯ ಬೆಲೆ ಅಂಗಡಿಯಲ್ಲಿ  ಮೂರು ತಿಂಗಳ ಅಲೆದಾಟ ನಡೆಸಿದರು ಅಕ್ಕಿ ಮಾತ್ರ  ಇಂದು ನಾಳೆ ಎಂದು  ಮೂರು ತಿಂಗಳು ಸಾತಾಯಿಸಿದ್ದು ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 40 ಕ್ಕಿಂತ ಹೆಚ್ಚ ಮನೆಗಳು ಬಂಗೇರಹಟ್ಟಿಯಲ್ಲಿ ಇದ್ದು  ಎಲ್ಲಾರಿಗೂ ಅಕ್ಕಿ ನೀಡಿಲ್ಲ.. ಈ ನ್ಯಾಯಬೆಲೆ ಅಂಗಡಿ ಲೈಸನ್ಸ್ ರದ್ದು ಮಾಡಬೇಕು. ಅವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕು. ಸರ್ಕಾರ ಬಡವರಿಗೆ  ಅಕ್ಕ ನೀಡಲು  ಪರದಾಟ ನಡೆಸುತ್ತಿದ್ದರೆ ನ್ಯಾಯಬೆಲೆ ಅಂಗಡಿಯ ಮಾಲೀಕರು ಕಳ್ಳತನದಿಂದ ಅಕ್ಕಿ ಮಾರಟ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಕೂಲಿ ನಾಲಿ ಬಿಟ್ಟ  ಪಡಿತರ ಪಡೆಯಲು ಹೋದರೆ ಇಂದು ನಾಳೆ ಅಕ್ಕಿ ಕೊಡತ್ತೇನೆ ಎಂದು ನಿತ್ಯ ಜನರಿಗೆ ಅಕ್ಕಿ ನೀಡದೇ ತಿಂಗಳು ಕಳೆದರು ಅಕ್ಕಿ ನೀಡದೇ ಮೋಸ ಮಾಡುವ ಪದ್ದತಿ ಇದೆ ಎಂದು ಮಹಿಳೆಯರ ಅಕ್ರೊಶ ಹೊರ ಹಾಕಿದ್ದಾರೆ‌.  ಈ ನ್ಯಾಯಬೆಲೆ ಅಂಗಡಿಯ ಮಾಲೀಕತ ತಮ್ಮ ರಾಜಕೀಯ ಮುಖಂಡನಾಗಿದ್ದು  ಈ ಪ್ರಕರಣ ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೇ  ಜನರಿಗೆ ನ್ಯಾಯ ಒದಗಿಸಲು ಜಿಲ್ಲಾಡಳಿತ ತಕ್ಕ ಶಾಸ್ತಿ ಮಾಡಿ  ಉಳಿದ ಕಳ್ಳ ಮಾರಟಗಾರರಿಗೆ ಬುದ್ದಿ ಕಲಿಸಿ  ಕಾಳ ಸಂತೆ ಮಾರಟಗಾರರ ಮೇಲೆ ಕೇಸ್ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಬಂಗೇರಹಟ್ಟಿ ಗ್ರಾಮಸ್ಥರು ಪ್ರತಿಭಟನೆ ಮೂಲಕ‌ ಒತ್ತಾಯಿಸಿದರು. ಈ  ಸಂದರ್ಭದಲ್ಲಿ ರಾಜಣ್ಣ, ಗುರುಸ್ವಾಮಿ, ಓಬಣ್ಣ ಮತ್ತು ಮಹಿಳೆಯರು ಕಾರ್ಡ ಇದ್ದರು..

 

ನಾನು ನ್ಯಾಯಬೆಲೆ ಅಂಗಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು  ಲೋಪ ಆಗಿರುವುದು ಕಂಡು ಬಂದಿದೆ. ನ್ಯಾಯ ಬೆಲೆ ಅಂಗಡಿ ಮಾಲೀಕರು ಎರಡು ತಿಂಗಳಿನಿಂದ ಅಕ್ಕಿ ನೀಡಿಲ್ಲ. ಇಂದು ನಮ್ಮ ಆರ್ಐ ಅವರನ್ನು ಕಳಿಸಿ ಅಕ್ಕಿ ನೀಡಲಾಗುತ್ತಿದೆ. ಪ್ರಕರಣ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಆಹಾರ ಇಲಾಖೆಗೆ ಪತ್ರ ಬರೆಯಲಾಗಿದೆ. 

ನಾಗವೇಣಿ. ಕೆ.ಎಸ್. ತಹಶೀಲ್ದಾರ್ ಚಿತ್ರದುರ್ಗ 

———————

ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ದ ಸೂಕ್ತ ಕ್ರಮ ವಹಿಸಲಾಗುತ್ತದೆ. ಜನರಿಗೆ ತೊಂದರೆ ಆಗಿರುವುದು ನಿಜವಾಗಿದ್ದು ಎರಡು ತಿಂಗಳಿಂದ ಅಕ್ಕಿ ನೀಡದಿರುವುದು ದೃಢಪಟ್ಟಿದ್ದು  ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ ಅನ್ಯಾಯ ಆಗದಂತೆ ಕ್ರಮ ವಹಿಸಲಾಗಿದ್ದು ಕಾನೂನು ಕ್ರಮ ಜರುಗಿಸಲಾಗುವುದು. 

ಮಧುಸೂದನ್. 

ಜಂಟಿ ನಿರ್ದೇಶಕರು 

ಆಹಾರ ನಾಗರಿಕ ಸರಬರಾಜು ಇಲಾಖೆ 

—————————————————–

[t4b-ticker]

You May Also Like

More From Author

+ There are no comments

Add yours