ಸ್ವಯಂ ಉದ್ಯೋಗದಿಂದ ಮಹಿಳೆಯರು ಸ್ವಾವಲಂಬಿಯಾಗಿ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಡಿ:15: ಮಹಿಳೆಯರ  ಸ್ವಾವಲಂಬನೆಯ ಬದುಕಿಗಾಗಿ ಸ್ವಯಂ ಉದ್ಯೋಗವನ್ನು ಯಶಸ್ವಿಯಾಗಿ ರೂಪಿಸಿಕೊಂಡರೆ ಜೀವನವನ್ನು ಸುಗಮವಾಗಿ ನಡೆಸಬಹುದು ಎಂದು ಶಾಸಕ  ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಎ.ಪಿ.ಎಂ.ಸಿ  ಕುರಿ ಮಾರುಕಟ್ಟೆ ಆವರಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ  ಪರಿಶಿಷ್ಟ ಪಂಗಡಗಳ ಅರ್ಹ ಫಲಾನುಭವಿಗಳಿಗೆ  ಸ್ವಯಂ ಉದ್ಯೋಗ ಯೋಜನೆಯಲ್ಲಿ “ಕುರಿ ಮತ್ತು ಮೇಕೆ” ಘಟಕ  ಯೋಜನೆಯಲ್ಲಿನ  ಕುರಿ ಮೇಕೆಗಳನ್ನು  ವಿತರಣೆ ಮಾಡಿ ಮಾತನಾಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಪಂಗಡದ 37 ಜನ ಮಹಿಳಾ ಫಲಾನುಭವಿಗಳಿಗೆ  ಸ್ವಯಂ ಉದ್ಯೋಗವನ್ನು ಕಲ್ಪಿಸುವ ದೃಷ್ಟಿಯಿಂದ  ಈ  ಕುರಿ ಮೇಕೆ ಘಟಕ  ಯೋಜನೆ ತಂದಿದೆ.  ಸರ್ಕಾರ ಒಬ್ಬ ಫಲಾನುಭವಿಗೆ 35.500ರೂ ಗಳ ಮೊತ್ತದಲ್ಲಿ ನಾಲ್ಕು ಕುರಿ, ಒಂದು ಟಗರು ನೀಡಲಾಗಿದೆ. ಇದರ ಮುಖಾಂತರ ಹೆಣ್ಣುಕುರಿಯನ್ನು ಉತ್ತಮವಾಗಿ ಸಾಕಾಣಿಕೆ ಮಾಡುವ ಮುಖಾಂತರ ಕುರಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಕುಟುಂಬದ ಆದಾಯವನ್ನು ದ್ವಿಗುಣಗೊಳಿಸಿಕೊಂಡ ಆರ್ಥಿಕವಾಗಿ ಸದೃಢವಾಗಬೇಕು ಎಂಬುದು ನಮ್ಮ ಮೂಲ‌ ಉದ್ದೇಶವಾಗಿದೆ.
ಗ್ರಾಮೀಣ ಭಾಗದಲ್ಲಿ ಕುರಿ ಸಾಕಾಣಿಕೆಯನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದು. ಕುರಿಯ ಆಹಾರದ ವೆಚ್ಚವನ್ನು ಉಳಿತಾಯ ಮಾಡಬಹುದು. ಕನಿಷ್ಠ ಆರು ತಿಂಗಳು ಜವಬ್ದಾರಿಯಿಂದ ಕುರಿ ಸಾಕಾಣಿಕೆ ಮಾಡಿದರೆ ಅದನ್ನು ಖರೀದಿ ಬೆಲೆಗಿಂತ ಎರಡು ಪಟ್ಟು ಬೆಲೆಗೆ ಮಾರಟ ಮಾಡಿ ಸಾಕಷ್ಟು ಹಣ ಗಳಿಸಬಹುದು ಎಂದರು.
ಪ್ರಸ್ತುತ ಮನೆ ಬಳಿತೇ ಎರಡ್ಮೂರು ಕುರಿಮರಿ ಸಾಕಿ ಅದರ ಲಾಭದ ಹಣದಲ್ಲಿ ಚಿಕ್ಕ ಕುಟುಂಬಗಳು ನಡೆಸುತ್ತಿರುವ ಉದಾಹರಣೆಗಳು ನಮ್ಮ ಮುಂದಿದ್ದು ಏನೇ ಸ್ವಯಂ ಉದ್ಯೋಗ ಮಾಡಿದರು ಸಹ ಅದರ ಮಹತ್ವ ಅರಿತು  ಶ್ರಮದಿಂದ  ಮಾಡಿದರೆ ಮಾಡಿದ ಕೆಲಸಕ್ಕೆ ಫಲ‌ ದೊರೆಯುವುದರಲ್ಲಿ ಅನುಮಾನವಿಲ್ಲ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.
ಸರ್ಕಾರಗಳು ಎಲ್ಲಾರಿಗೂ ಸರ್ಕಾರಿ ಉದ್ಯೋಗ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ಸರ್ಕಾರಿ ಉದ್ಯೋಗವೇ ಬೇಕು ಎಂದು ಕಾದು ಕುಳಿತುಕೊಳ್ಳುವ ಬದಲು ಸರ್ಕಾರಿ ಉದ್ಯೋಗ ಪ್ರಯತ್ನದ  ಜೊತೆ ಸ್ವಯಂ ಉದ್ಯೋಗಕ್ಕ ಒತ್ತು ನೀಡಿದರೆ ಕುಟುಂಬಕ್ಕೆ ಮತ್ತು ತಮ್ಮ ಜೀವನದಲ್ಲಿ ಆತ್ಮ ವಿಶ್ವಾಸ ಮೂಡುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ  ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಲ್ಯಾಣಧಿಕಾರಿ ಪರಮೇಶ್ವರಪ್ಪ, ಎಪಿಎಂಸಿ ಉಪ ಕಾರ್ಯದರ್ಶಿ ವಾಣಿ, ಪಶುಪಾಲನ ಇಲಾಖೆ ಸಹಾಯಕ‌ ನಿರ್ದೇಶಕ ಕುಮಾರ್ ಮತ್ತು ಫಲಾನುಭವಿಗಳು ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours