ಹೆಂಡತಿ ಇಲ್ಲ ಮಕ್ಕಳಿಲ್ಲ ಆರೋಪದಲ್ಲಿ ಹುರುಳಿಲ್ಲ: ವಾಲ್ಮೀಕಿ ಶ್ರೀ

 

ದಾವಣಗೆರೆ: ನನ್ನ ಮೇಲೆ ಏನೇ ಅನುಮಾನಗಳಿರಲಿ, ಸಮಾಜ ಬಾಂಧವರು ನೇರವಾಗಿ ನನ್ನೇ ಕೇಳಿ, ಅದು ಬಿಟ್ಟು ಮಾಧ್ಯಮಗಳ ಮುಂದೆ ಹೋಗುವುದು ಸರಿಯೇ? ನಾನು ಮುಕ್ತವಾಗಿದ್ದೇನೆ. ನೀವು ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧ ಎಂದು ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.
ಹರಿಹರ ತಾ, ರಾಜನಹಳ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಗೊಂದಲ, ವಿಚಾರ, ಹೇಳಿಕೆಗಳಿಗೆ ಸ್ಪಷ್ಟಿಕರಣ ನೀಡಿ ಸಮಾಜದ ರಾಜ್ಯ ಮಟ್ಟದ ಸಭೆಯಲ್ಲಿ ಮಾತನಾಡಿ, ಸ್ವಾಮೀಜಿಗಳು ತಮ್ಮ ಹೆಸರಿಗೆ ಅಸ್ತಿಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿವೆ ಎಂದು ಬೇಸರ ಹೊರ ಹಾಕಿದರು.
 ನಮ್ಮ ಪೂರ್ವಾಶ್ರಮದ ಹೆಸರಿನಲ್ಲಿ ಯಾವುದೇ ಆಸ್ತಿಗಳೂ ಇಲ್ಲ ಎಂದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಶ್ರೀ ವಾಲ್ಮೀಕಿ ಗುರುಪೀಠ, ರಾಜನಹಳ್ಳಿ ಹೆಸರಿನಲ್ಲಿ ಇದೆ ಎಂದು ತಿಳಿಸಿದರು.
ಎಲ್ಲವೂ ಮಠದ ಆಸ್ತಿ: ಹಿಂದೆ ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿಸ್ವಾಮೀಜಿಹೆಸರಿನಲ್ಲಿ ಆಸ್ತಿ ಇದ್ದವು. ನಂತರ ಆಸ್ತಿ ಪರಣಿಗಳು ತಮ್ಮ ಹೆಸರಿಗೆ ಬಂದಿವೆ. ಪುಣ್ಯಾನಂದ ಪುರಿ ಸ್ವಾಮೀಜಿ, ಕುಟುಂಬಸ್ಥರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಅದು ಮಠದ ಆಸ್ತಿಯಾಗಿದ್ದು, ಮಠಕ್ಕೆ ಸೇರಬೇಕೆಂಬುದಾಗಿ ಕೋರ್ಟ್‌ ನಲ್ಲಿ ತೀರ್ಮಾನವ ಆಯಿತು, ಅದೇ ರೀತಿ ನನ್ನ ನಂತರ ಮುಂಬರುವ ಸ್ವಾಮೀಜಿಗೆ ವರ್ಗಾವಣೆಯಾಗುತ್ತದೆ. ಏನಾದರೂ ಅನುಮಾನವಿದ್ದರೆ ಟ್ರಸ್ಟ್ ಸಮ್ಮುಖದಲ್ಲಿ ಬಾಂಡ್ ಪೇಪರ್‌ಮೇಲೆ ಬರೆದು ಕೊಡುತ್ತೇನೆ ಎಂದು ಹೇಳಿದರು.
[t4b-ticker]

You May Also Like

More From Author

+ There are no comments

Add yours