ಡಿಕೆಶಿ ಹೈಕಮಾಂಡ್ ಗೆ ಹಾಕಿದ ನಾಲ್ಕು ಷರತ್ತುಗಳು ಏನು?

 

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ( Karnataka CM) ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ಅಂತಿಮ ಉತ್ತರ ದೊರೆತಿದೆ.

ಸಿದ್ದರಾಮಯ್ಯ (Siddaramaiah) ಅವರೇ ರಾಜ್ಯ ಸಿಎಂ ಆಗಲು ಹೈಕಮಾಂಡ್‌ ಒಪ್ಪಿಗೆ ಸೂಚಿಸಿದೆ. ಆದರೆ ಸಿಎಂ ಸ್ಥಾನ ತಮ್ಮದಾಗಲೇಬೇಕೆಂದು ಶತಾಯಗತಾಯ ಪ್ರಯತ್ನಿಸಿದ್ದ ಡಿ.ಕೆ ಶಿವಕುಮಾರ್‌ (D.K Shivakumar) ಅವರು, ನಾಲ್ಕು ಷರತ್ತುಗಳನ್ನು ಹೈಕಮಾಂಡ್‌ ಮುಂದಿಟ್ಟಿದ್ದಾರೆ.

ಕಳೆದ ಮೂರು ದಿವಸಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ರಾಜಕೀಯದ ಹೈ ಪ್ರೊಫೈಲ್‌ ಚಟುವಟಿಕೆಗಳು ನಡೆದಿದ್ದವು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸ, ಈ ಚಟುವಟಿಕೆಗಳ ಕೇಂದ್ರವಾಗಿತ್ತು. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಅವರು ಇಲ್ಲಿಗೆ ಸತತವಾಗಿ ಭೇಟಿ ನೀಡಿದ್ದರು.

ಖರ್ಗೆ ಅವರ ಜತೆ ನಡೆದ ಎರಡೆರಡು ಸುತ್ತಿನ ಮಾತುಕತೆಗಳಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗದೆ, ಮಾತುಕತೆ ರಾಹುಲ್‌ ಗಾಂಧಿ ಅವರಲ್ಲಿಗೆ ಶಿಫ್ಟ್‌ ಆಗಿತ್ತು. ಅಲ್ಲಿ ಒಂದು ಅಂತಿಮ ಒಪ್ಪಂದಕ್ಕೆ ಇಬ್ಬರೂ ನಾಯಕರು ಬಂದಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಸಿಎಂ ಆಗುವುದಾದರೆ ತನ್ನ ನಾಲ್ಕು ಷರತ್ತುಗಳನ್ನು ಈಡೇರಿಸಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಆ ನಾಲ್ಕು ಷರತ್ತುಗಳು ಇಂತಿವೆ:

  1. ಮೊದಲ ಎರಡು ವರ್ಷ ಮಾತ್ರ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ.
  2. ನಂತರದ 3 ವರ್ಷಗಳ ಕಾಲ ಸಿಎಂ ಹುದ್ದೆ ನನ್ನದಾಗಬೇಕು.
  3. ಡಿಸಿಎಂ ಸ್ಥಾನದಲ್ಲಿ ನಾನು ಮಾತ್ರ ಇರಬೇಕು. ಇನ್ಯಾರಿಗೂ ನೀಡುವಂತಿಲ್ಲ.
  4. ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ನನ್ನಲ್ಲೇ ಇರಬೇಕು.

ಈ ಷರತ್ತುಗಳಲ್ಲಿ ಎಷ್ಟನ್ನು ಹೈಕಮಾಂಡ್‌ ಒಪ್ಪಿದೆ, ಯಾವ ಬಗೆಯ ತೀರ್ಮಾನಕ್ಕೆ ಬಂದಿದೆ ಎಂಬುದು ಮುಂದೆ ತಿಳಿದುಬರಲಿದೆ.

[t4b-ticker]

You May Also Like

More From Author

+ There are no comments

Add yours