ಕ್ಷೇತ್ರದ ಅಭಿವೃದ್ದಿಗೆ ಕಾಂಗ್ರೆಸ್ ಗೆ ಮತ ನೀಡಿ:ಮಾಜಿ ಸಚಿವ ಹೆಚ್.ಆಂಜನೇಯ

 

ಹೊಳಲ್ಕೆರೆ:  ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ್ದು ತಾಲ್ಲೂಕಿನ ಸಮಗ್ರ ಅಭವೃದ್ಧಿಗೆ ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಮಾಜಿ ಸಚಿವ ಹೆಚ್.ಆಂಜನೇಯ ಮನವಿ ಮಾಡಿದರು.

ಮಂಗಳವಾರ ಚಿಕ್ಕಜಾಜೂರಿನಲ್ಲಿ ನಡೆದ ಕಾಂಗ್ರೆಸ್ ಗ್ಯಾರಂಟಿ ಸಭೆಯಲ್ಲಿ ಅವರು ಮಾತನಾಡಿದರು.

ಈಗಿನ ಶಾಸಕರು ತಮ್ಮ ಆಡಳಿತ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಡವರಿಗೆ ಒಂದೂ ಮನೆ ಕಟ್ಟಿಕೊಟ್ಟಿಲ್ಲ, ಕೊಳವೆ ಬಾವಿ ಕೊರೆಸಿಕೊಟ್ಟಿಲ್ಲ, ಶಾಲೆಗಳನ್ನನು ಮಾಡಿಲ್ಲ. ಆದರೆ ನನ್ನ ಅವಧಿಯಲ್ಲಿ ಎಲ್ಲರಿಗೂ ಮನೆ ಕೊಟ್ಟಿದ್ದೆವು. ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆ ಬಾವಿ ಕೊರೆಸಿದ್ದೆವು. ಶಾಲೆಗಳನ್ನು ಕಟ್ಟಿದ್ದೆವು, ಹಾಸ್ಟೆಲ್‌ಗಳನ್ನು ಮಾಡಿದ್ದೆವು. ಆದರೆ ಹಾಲಿ ಶಾಸಕರು ಕಮೀಷನ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ನನ್ನ ಅಧಿಕಾರ ಅವಧಿಯಲ್ಲಿ ತಾಲ್ಲೂಕಿನಲ್ಲಿ ನಡೆದ ಕಾಮಗಾರಿಗಳ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡಲಾಗುತ್ತಿತ್ತು. ಆದರೆ ಈ ಶಾಸಕರ ಅವಧಿಯಲ್ಲಿ ಕಮೀಷನ್ ಹೊಡೆಯಲು ಹೊರಗಿನವರಿಗೆ ಗುತ್ತಿಗೆಯನ್ನು ನೀಡಲಾಗುತ್ತಿದೆ ಎಂದರು.
ನಮ್ಮ ಆಡಳಿತ ಅವಧಿಯಲ್ಲಿ ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದೆವು. ಇದರಿಂದ ಬೋವಿ, ಲಂಬಾಣಿ ಸಮುದಾಯದವರು ಗುತ್ತಿಗೆಗಳನ್ನು ಪಡೆದುಕೊಂಡು ಆರ್ಥಿಕವಾಗಿ ಉತ್ತಮ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದರು.
ಹಾಲಿ ಶಾಸಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದು ಜನರನ್ನು ಉದ್ರೇಕಕಾರಿಗೊಳಿಸುವುದು, ಪ್ರಚೋದನೆ ಮಾಡುವುದರಲ್ಲಿ ಎತ್ತಿದ ಕೈ ಆಗಿದ್ದಾರೆ ಇವರ ಆಡಳಿತವನ್ನು ಅಂತ್ಯಗೊಳಿಸಬೇಕೆAದು ಜನರಲ್ಲಿ ಮನವಿ ಮಾಡಿದರು.
ಬಿಜೆಪಿ ಅವಧಿಯಲ್ಲಿ ವಿಪರೀತ ಪ್ರಮಾಣದಲ್ಲಿ ದರ ಏರಿಕೆ ಕಂಡಿದೆ. ಅನಿಲ ಒಂದು ಸಿಲಿಂಡರ್ ದರ ಸಾವಿರ ರೂಗಳನ್ನು ದಾಟಿದೆ. ಪೆಟ್ರೋಲ್ ದರ ನೂರು ರೂ. ಮುಟ್ಟಿದೆ. ಯಾರೂ ನೆಮ್ಮದಿಯ ಜೀವನವನ್ನು ಮಾಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಮ್ಮದು ನುಡಿದಂತೆ ನಡೆದ ಸರ್ಕಾರ ೨೦೧೩ರಲ್ಲಿ ಅಧಿಕಾರಕ್ಕೆ ಬಂದಿದ್ದ ನಮ್ಮ ಸರ್ಕಾರ ಅನ್ನ ಭಾಗ್ಯ ಸೇರಿದಂತೆ ನೀಡಿದ್ದ ಎಲ್ಲ ಭರವಸೆಗಳಲ್ಲಿ ಶೇಕಡ ನೂರರಷ್ಟು ಈಡೇರಿಸಿತ್ತು. ಈ ಬಾರಿಯೂ ಅಧಿಕಾರಕ್ಕೆ ಬಂದು ನೀಡುವ ಎಲ್ಲ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದರು.

ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯೊಡತಿಗೆ ಮಾಸಿಕ ೨,೦೦೦ ರೂ.ಗಳನ್ನು ನೀಡಲಾಗುವುದು, ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ೩,೦೦೦ ನೀಡಲಾಗುವುದು, ಹತ್ತು ಕೆ.ಜಿ ಅಕ್ಕಿ ನೀಡಲಾಗುವುದು. ಪ್ರತಿ ಮನೆಗೆ ಪ್ರತಿ ತಿಂಗಳು ೨೦೦ ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಕಾಂಗ್ರೆಸ್‌ನ ಈ ಗ್ಯಾರಂಟಿಯನ್ನು ಅನುಷ್ಠಾನಕೆ ತರಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಅಪಾರ ಸಂಖ್ಯೆಯ ಯುವಕರು ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಬೆಳಗ್ಗೆ ಸಹ ಆಂಜನೇಯ ಅವರ ಮನೆಯಲ್ಲಿ ಹೊಳಲ್ಕೆರೆ ತಾಲ್ಲೂಕಿನ ಯಳಗೋಡು ಗ್ರಾಮದ ಬಿಜೆಪಿ ಮುಖಂಡರಾದ ಎನ್.ಟಿ.ಪ್ರಸಾದ್, ಮಲ್ಲಿಕಾರ್ಜುನ, ತೇಜೇಶ್ವರ್, ಎಸ್.ಮಾರುತಿ, ಇನ್ನೂ ಅನೇಕರು ಹೆಚ್.ಆಂಜನೇಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಎಚ್.ಆಂಜನೇಯ ಅವರು ಹೋದ ಕಡೆಗಳಲ್ಲೆಲ್ಲ ಅಭೂತಪೂರ್ವ ಜನಬೆಂಬಲ ವ್ಯಕ್ತವಾಯಿತು.
ಸಭೆಯಲ್ಲಿ ಮುಖಂಡರಾದ ಶಿವಣ್ಣ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಂಗಾಧರ್, ಶಿವಮೂರ್ತಿ, ಮಹಿಳಾ ಕಾಂಗ್ರೆಸ್‌ನ ಅಂಬಿಕಾ, ಮಂಜಣ್ಣ, ಕಿರಣ್ ಯಾದವ್, ಡಿ.ಕೆ.ಶಿವಮೂರ್ತಿ, ಎಚ್.ಟಿ.ಹನುಮಂತಪ್ಪ, ಕಾಟಿಹಳ್ಳಿ ಶಿವಕುಮಾರ್, ಪುಟ್ಟಣ್ಣ, ಸೋಮಶೇಖರ್, ಬಾಬಣ್ಣ, ಜಮೀರ್, ತಾಪಂ ಉಪಾಧ್ಯಕ್ಷರಾಗಿದ್ದ ಓಂಕಾರ ಮೂರ್ತಿ, ನಾಗಣ್ಣ, ರಶ್ಮಿ, ಪ್ರದೀಪ್ ಕುಮಾರ್, ಗ್ರಾ.ಪಂ. ಸದಸ್ಯ ಕೆ.ಎಸ್.ಸಿದ್ದೇಶ್, ಎ.ಬಾಬು, ಜಯಶೀಲ, ಒಂಕಾರಮೂರ್ತಿ ಮತ್ತಿತರರು ಇದ್ದರು.

[t4b-ticker]

You May Also Like

More From Author

+ There are no comments

Add yours