ರಾಜ್ಯದಲ್ಲಿ ವಿಜಯೇಂದ್ರ ಅಧಿಕಾರ ಸ್ವೀಕಾರ, ನಾಳೆ ಕೋಟೆ ನಾಡಿಗೆ ಮೊದಲ ಎಂಟ್ರಿ

 

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ  (Vijayendra)ಅವರು ಇಂದು ಬೆಂಗಳೂರಿನ ಮಲ್ಲೇಶ್ವರಂನ ಪ್ರಧಾನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಬಿಜೆಯಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಪದಗ್ರಹಣ ಹಿನ್ನೆಲೆ ರಾಜ್ಯ ಬಿಜೆಪಿ ಕಚೇರಿ ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಪೂಜೆ, ಹೋಮ, ಹವನ ನಡೆಯಿತು.

ಅಧಿಕಾರ ಸ್ವೀಕರಿಸಿದ ಘಳಿಗೆಯನ್ನು ಟ್ವೀಟ್‌ ಮಾಡುವ ಮೂಲಕ ಹಂಚಿಕೊಂಡಿರುವ ವಿಜಯೇಂದ್ರ, ‘ಈ ಅಮೃತ ಘಳಿಗೆಯಲ್ಲಿ ಜನ ಸಂಘದ ದಿನಗಳು, ತ್ಯಾಗ ಮೆರೆದ ಹಿರಿಯರು, ಪರಿಶ್ರಮದ ಕಾರ್ಯಕರ್ತರು ಕಣ್ಣ ಮುಂದೆ ಹಾದು ಹೋದರು’ ಎಂದು ತಿಳಿಸಿದ್ದಾರೆ.

ದಿಗ್ಗಜರು, ಪುಣ್ಯವಂತರು ಸೇವೆ ಸಲ್ಲಿಸಿದ ಸಾಲಿನಲ್ಲಿ ನಾನೂ ಸೇರ್ಪಡೆಯಾಗುವ ಸುಯೋಗ ಕಲ್ಪಿಸಿದ ಪಕ್ಷದ ವರಿಷ್ಠರ ತೀರ್ಮಾನ ನೆನೆದು ಭಾವುಕನಾದೆ. ಒಬ್ಬ ಕಾರ್ಯಕರ್ತನಾಗಿ ಹೆಮ್ಮೆ ಎನಿಸಿತು. ಜವಾಬ್ದಾರಿ ಎಚ್ಚರಿಸಿತು. ವರಿಷ್ಠರ ನಿರೀಕ್ಷೆ, ಕಾರ್ಯಕರ್ತರ ಅಪೇಕ್ಷೆ ಗುರಿ ತಲುಪುವ ನಿಟ್ಟಿನಲ್ಲಿ ‘ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ’ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜನಪದರ ‘ದೀಪಾವಳಿ’ಯ ಬಹುರೂಪಿ ಕರ್ನಾಟಕ

‘ಪಕ್ಷ ಸದೃಢಗೊಳಿಸಲು ಪಕ್ಷದ ಪ್ರತಿಯೊಬ್ಬ ಪ್ರಮುಖರೂ ನನ್ನೊಂದಿಗೆ ಹೆಗಲು ಕೊಡಲು ಮುಂದಾಗಿರುವುದು ನನ್ನಲ್ಲಿ ಮತ್ತಷ್ಟು ಉತ್ಸಾಹ ತುಂಬಿದೆ. ಪಕ್ಷದ ಹಿರಿಯರೆಲ್ಲರ ಆಶೀರ್ವಾದ, ಮಾರ್ಗದರ್ಶನದೊಂದಿಗೆ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ 2024ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದ್ದಾರೆ.

ನಾಳೆಯ ಕೋಟೆನಾಡಿನ ಪ್ರವಾಸದ ವಿವರ

ಬೆಳಗ್ಗೆ 9 ಗಂಟೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಮನೆಯಲ್ಲಿ ಕಾಫಿಗೆ ಆಗಮಿಸುವರು.ನಂತರ ಮಾದಾರ ಚನ್ನಯ್ಯ ಮಠದಲ್ಲಿ  ಉಪಹಾರ ಸೇವನೆ ನಂತರ ಮಠಗಳಿಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಹೆಚ್ಚಿನ ಮಾಹಿತಿ ಅಧಿಕೃತವಾಗಿ ಹೊರ ಬರಬೇಕಿದೆ.

[t4b-ticker]

You May Also Like

More From Author

+ There are no comments

Add yours