ಮಾ.17 ರಂದು ವಿಧಾನ ಸಭಾ ಚುನಾವಣೆ ಮೊದಲ ಪಟ್ಟಿ ಬಿಡುಗಡೆ: ಸಿದ್ದರಾಮಯ್ಯ

 

ದಾವಣಗೆರೆ (ಮಾ.14) : ಮಾ.17ರಂದು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಹೊನ್ನಾಳಿಯಲ್ಲಿ ಸೋಮವಾರ ಪ್ರಜಾಧ್ವನಿ ಸಮಾವೇಶ(Prajadhwani convention)ಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಸೋಮಣ್ಣ, ನಾರಾಯಣಗೌಡ(V Somanna and Narayanagowda) ಅವರು ಕಾಂಗ್ರೆಸ್ಸಿಗೆ ಬರುವ ವಿಚಾರವೇ ನನಗೆ ಗೊತ್ತಿಲ್ಲ.

ಗೊತ್ತಿಲ್ಲದ ವಿಚಾರಕ್ಕೆ ನಾನು ಹೇಗೆ ಉತ್ತರಿಸಲು ಸಾಧ್ಯ? ಎಂದರು. ಶನಿವಾರ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಧ್ರುವನಾರಾಯಯಣ ಪುತ್ರನಿಗೆ ಟಿಕೆಟ್‌ ನೀಡುವಂತೆ ಸ್ಥಳೀಯ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ಕೇಳಿದ್ದಾರೆ. ಈ ಬಗ್ಗೆ ನೋಡೋಣ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪರ ಇಲೆ ಇದೆ. ಪ್ರಧಾನಿ ಮೋದಿ ಪದೇ ಪದೆ ಬಂದರೂ ಇಲ್ಲಿ ಏನೂ ಆಗುವುದಿಲ್ಲ. ಕಳೆದ ಸಲವೂ ಮೋದಿ ಇಲ್ಲಿಗೆ ಬಂದಿದ್ದರು. ಮೈಸೂರು ಬೆಂಗಳೂರು ಹೈವೇ(Bengaluru-Mysuru Expressway) ಮಾಡಿದ್ದು ಯಾರು? ಆಸ್ಕರ್‌ ಫರ್ನಾಂಡೀಸ್‌ ಸಚಿವರಿದ್ದಾಗ ನಾನೇ ಅದನ್ನು ಮಂಜೂರು ಮಾಡಿಸಿದ್ದೆ. ಈಗ ಬಿಜೆಪಿಯವರು ಹೆದ್ದಾರಿ ಶ್ರೇಯ ತೆಗೆದುಕೊಳ್ಳುತ್ತಿದ್ದಾರೆ. ಹೆದ್ದಾರಿ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಕಾಮಗಾರಿ ಪ್ರಗತಿಯಲ್ಲಿದ್ದರೂ ತರಾತುರಿಯಲ್ಲಿ ನರೇಂದ್ರ ಮೋದಿ ಕರೆಸಿ, ಉದ್ಘಾಟನೆ ಮಾಡಿಸಿದ್ದಾರೆ ಎಂದು ಟೀಕಿಸಿದರು.

ಮಾಡಾಳು ಬಂಧಿಸಬೇಕಿತ್ತಲ್ಲವ್ವ?: ಸಿದ್ದು

ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ(Madalu Virupakshappa) ಪುತ್ರ .40 ಲಕ್ಷ ಲಂಚದ ಹಣದ ಸಮೇತ ಸಿಕ್ಕಿ ಬಿದ್ದಿದ್ದು, ತಕ್ಷಣವೇ ಮಾಡಾಳು ಅವರನ್ನು ಪೊಲೀಸರು ಬಂಧಿಸಬೇಕಿತ್ತು. ಅಲ್ಲದೆ, ಬಿಜೆಪಿಗೆ ನೈತಿಕತೆ ಇದ್ದಿದ್ದರೆ ಮಾಡಾಳು ವಿರುಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕಿತ್ತು. ಆದರೆ, ಅದ್ಯಾವುದನ್ನೂ ಮಾಡದ ಬಿಜೆಪಿಯವರೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಬಿಜೆಪಿಯವರು ಭ್ರಷ್ಟಾಚಾರದ ಪರವಾಗಿದ್ದಾರೆ ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.

[t4b-ticker]

You May Also Like

More From Author

+ There are no comments

Add yours