ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ವಿವಿಧ ಸೌಲಭ್ಯ: ವಿವರ ನೀಡಲು ಸೂಚನೆ

 

ಚಿತ್ರದುರ್ಗ ಕರ್ನಾಟಕ ವಾರ್ತೆ ಆಗಸ್ಟ್ 03 :
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅವಲಂಬಿತರಿಗೆ 19 ವಿವಿಧ ರೀತಿಯ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾದ ಫಲಾನುಭವಿಗಳ ಮಕ್ಕಳು 2022-23ನೇ ಶೈಕ್ಷಣಿಕ ವರ್ಷದಲ್ಲಿ 01 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವಂತಹ ಮಕ್ಕಳ ಸೂಕ್ತ ದಾಖಲೆಗಳೊಂದಿಗೆ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ, ಆಧಾರ್ ಕಾರ್ಡ್,  ಮಕ್ಕಳ ವ್ಯಾಸಂಗ ಪ್ರಮಾಣಪತ್ರವನ್ನು ಆಗಸ್ಟ್ 5 ರೊಳಗಾಗಿ ಮಾಹಿತಿಯನ್ನು ಕಾರ್ಮಿಕ ನಿರೀಕ್ಷಕರ ಕಛೇರಿಗಳಿಗೆ ನೀಡುವಂತೆ ಕೋರಲಾಗಿದೆ.
ಆದರೆ ಈ ಹಿನ್ನಲೆಯಲ್ಲಿ ಮಧ್ಯವರ್ತಿಗಳು ಹಣದ ಆಮಿಷೆಯನ್ನು ತೋರಿಸಿ, ಲ್ಯಾಪ್‍ಟಾಪ್ ಮತ್ತು ಟ್ಯಾಬ್‍ಅನ್ನು ನೀಡುತ್ತೇವೆ ಎಂದು ಕಾರ್ಮಿಕರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದು, ಈ ತರಹದ ಆಮಿಷಗಳಿಗೆ ಒಳಗಾಗದೇ ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕೇಳಿರುವ ಮಾಹಿತಿಯನ್ನು ಖುದ್ದಾಗಿ ನಿಮ್ಮ ವ್ಯಾಪ್ತಿಯ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಗೆ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ

[t4b-ticker]

You May Also Like

More From Author

+ There are no comments

Add yours