ನಿವೇಶನ , ಸ್ಮಶಾನ ಗುರುತಿಸುವಿಕೆಗೆ ತುರ್ತಾಗಿ ಕ್ರಮ ವಹಿಸಿ, ಎಲ್ಲಾ ಅಧಿಕಾರಿಗಳು ಮಾಹಿತಿ ಜೊತೆ ಸಭೆಗೆ ಬನ್ನಿ: ಶಾಸಕ ಟಿ.ರಘುಮೂರ್ತಿ ಚಾಟಿ

 

ಚಿತ್ರದುರ್ಗ:ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆ ಜೊತೆಗೆ ಎಲ್ಲಾ ಇಲಾಖೆಯ ಮಾಹಿತಿ ಜೊತೆ ಸಭೆಗೆ ಬರಬೇಕು. ಎಲ್ಲಾ ಇಲಾಖೆಗೆ ಮತ್ತೊಂದು ಇಲಾಖೆ ಕೊಂಡಿಯಾಗಿರುತ್ತದೆ ಎಂಬುದನ್ನು ಮರೆತಿದ್ದಿರ ಎಂದು ಶಾಸಕ ಟಿ.ರಘುಮೂರ್ತಿ ಅವರು ಅಧಿಕಾರಿಗಳಿಗೆ  ಖಡಕ್ ವಾರ್ನಿಂಗ್ ಕೊಟ್ಟರು.

ತಾಪಂ ಸಭಾಂಗಣದಲ್ಲಿ ಬುಧವಾರ ಹೋಬಳಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸ್ಮಶಾನವಿಲ್ಲದೆ ಜನ ತೊಂದರೆ ಅನುಭವಿಸುವುದು ಬೇಡ. ಜನವರಿಯಲ್ಲೇ ಈ ಸಂಬಂಧ ತಾಕೀತು ಮಾಡಿದ್ದೆ. ಚುನಾವಣೆ ಮುಗಿದಿದ್ದು, ಸಾರ್ವಜನಿಕ ಕೆಲಸಗಳನ್ನು ತ್ವರಿತವಾಗಿ ಮಾಡಿ. ಸಬೂಬು ಬೇಡ ಎಂದು ಗರಂ ಆದರು.

ತಾಲೂಕಿನ ತುರುವನೂರು ಹೋಬಳಿಯ 48 ಗ್ರಾಮಗಳಿಗೆ 49 ಸ್ಮಶಾನದ ಅಗತ್ಯವಿದ್ದು, ನಾಲ್ಕೈದು ಗ್ರಾಮ ಹೊರತುಪಡಿಸಿ ಉಳಿದೆಲ್ಲವಕ್ಕೂ ಜಮೀನು ಮಂಜೂರಾಗಿದೆ. ಇನ್ನುಳಿದೆಡೆ ಸ್ಥಳ ಗುರುತಿಸಿ ಅಭಿವೃದ್ಧಿಗೊಳಿಸಲು ಕ್ರಮ ವಹಿಸಬೇಕು ಸಮಸ್ಯೆ ಇರುವ ಕಡೆ ತಹಶೀಲ್ದಾರ್ ಸಂಪರ್ಕಿಸಿ, ಇಓ ,ಎಡಿ ಸೇರಿ ಸಮಸ್ಯೆ ಬಗೆಹರಿಸಬೇಕು ಎಂದು  ಎಲ್ಲಾ  ಅಧಿಕಾರಿಗಳಿಗೆ ಸೂಚನೆ ನೀಡಿದರು.

49ರಲ್ಲಿ 34 ಗ್ರಾಮಗಳಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ಮಂಜೂರಾಗಿದೆ. ರಚನೆ ಕಾರ್ಯವೂ ಪ್ರಗತಿಯಲ್ಲಿದೆ. ಇನ್ನುಳಿದ 15 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇಲ್ಲದ ಕಾರಣ ಖಾಸಗಿಯಾಗಿ ಖರೀದಿಸಬೇಕಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಿಡಿಒಗಳು ಮಾಹಿತಿ ನೀಡಿದರು.

ಪಿಆರ್‌ಐಡಿ ಅಧಿಕಾರಿಗಳು ಕೂಡಲೇ ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕು. 15 ಗ್ರಾಮ ಯಾವುವು ಎಂಬ ಮಾಹಿತಿ ಪಡೆದು ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಸ್ಥಳ ಗುರುತಿಸಿ ಎಂದು ತಹಶೀಲ್ದಾರ್‌ ಡಾ.ನಾಗವೇಣಿ ಅವರಿಗೆ ಶಾಸಕರು ಸೂಚಿಸಿದರು.

ಬೊಗಳೇರಹಟ್ಟಿ ಗ್ರಾಮದ ಸ್ಮಶಾನಕ್ಕೆ 20 ಗುಂಟೆ ಜಮೀನು ಸಾಕಾಗುವುದಿಲ್ಲ. ಜನಸಂಖ್ಯೆ ಹೆಚ್ಚಾಗಿರುವ ಕಾರಣ ಸ್ಥಳವಕಾಶ ಇನ್ನಷ್ಟು ವಿಸ್ತೀರ್ಣವಾಗಿರಲಿ. ಹೆದ್ದಾರಿ ಹಾದುಹೋಗಿದ್ದು, ಸರ್ವೀಸ್‌ ರಸ್ತೆಯೂ ಇಲ್ಲ,  ಅಲ್ಲಿ ನಿವೇಶನ ಸಮಸ್ಯೆ ಸಹ ಇದ್ದು ಸರ್ಕಾರಿ‌ ಜಮೀನು ಅತ್ಯಗತ್ಯವಾಗಿ ಬೇಕಿದ್ದು ‌ ತುರ್ತಾಗಿ  ಈ ಕುರಿತು ಗಮನಹರಿಸಿ ಎಂದು ತಹಶೀಲ್ದಾರ್ ಅವರಿಗೆ  ತಾಕೀತು ಮಾಡಿದರು.

ಹೋಬಳಿಯಲ್ಲಿ 6 ಮನೆ, 1 ಹೆಕ್ಟೇರ್‌ ಮೆಕ್ಕಜೋಳ, 23.4 ಎಕರೆ ವಿಸ್ತೀರ್ಣದಲ್ಲಿ ಬಾಳೆ, ಪಪ್ಪಾಯ, ಅಡಿಕೆ ಬೆಳೆಗೆ ಹಾನಿಯಾಗಿದೆ. ವಾಡಿಕೆಗಿಂತಲೂ ಶೇ 50ರಷ್ಟು ಮಳೆ ಕಡಿಮೆಯಾಗಿದೆ. ಹೀಗಾಗಿ ಬಿತ್ತನೆ ಚಟುವಟಿಕೆ ಚುರುಕು ಪಡೆದಿಲ್ಲ. ಜೂ. 4ರ ನಂತರ ಮುಂಗಾರು ಪ್ರವೇಶಿಸಲಿದ್ದು, ಆನಂತರ ರೈತರ ಆಸಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಹಿಂದಿನ ವರ್ಷ ಅರ್ಹರೆಲ್ಲರಿಗೂ ಬೆಳೆ ಪರಿಹಾರ ವಿತರಿಸಲಾಗಿದೆ ಎಂದು ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ನನ್ನ ಕ್ಷೇತ್ರದಲ್ಲಿ ಯಾವ ಕೆಲಸ ಬಾಕಿ ಇರುವ ಆಗಿಲ್ಲ. ಎಲ್ಲಾವೂ ಸಹ ಪೂರ್ಣವಾಗಬೇಕು. ನಿವೇಶನದ ಗುರುತು ಆಗಿರುವ ಕಡೆ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಮೂಲಕ ನಿವೇಶನ ಪೂರ್ಣವಾಗಬೇಕು. ಒಬ್ಬ ಫಲಾನುಭವಿ ನಿವೇಶನಕ್ಕೆ 3 ಸಾವಿರ ಹಣ ಕಟ್ಟಿಸಿಕೊಂಡ ಅಭಿವೃದ್ಧಿ ಮಾಡಲು ಅವಕಾಶ ಇದೆ. ಜೊತೆ ಫಲಾನುಭವಿ ಬಳಿ ಪಡೆದು, ಉದ್ಯೋಗ ಖಾತ್ರಿ ಬಳಸಿ ಒಟ್ಟಿನಲ್ಲಿ  ಒಂದೆರಡು ತಿಂಗಲ್ಲಿ ಎಲ್ಲಾ ಮುಗಿಸಿ ನಿವೇಶನ ನೀಡಬೇಕು.ಇದು ಸಿರಿಯಸ್‌ ಆಗಿ ಕೆಲಸ ಮಾಡಿ ಎಂದು ಪಿಡಿಓ ಮತ್ತು ಇಓ, ಎಡಿ , ಪಿರ್ಡಿ ಅಧಿಕಾರಿಗಳು ಒಟ್ಟಾಗಿ ಪೂರ್ಣಗೊಳಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ಹಲವೆಡೆ ಬಿರುಗಾಳಿ-ಮಳೆಗೆ ಜಾನುವಾರು ಮತ್ತು ಕುರಿ ಶೆಡ್‌ಗಳು ಹಾನಿಯಾಗಿವೆ. ಇದಕ್ಕೆ ತ್ವರಿತವಾಗಿ ಪರಿಹಾರ ಒದಗಿಸಲು ಮುಂದಾಗಿ ಎಂದು ರಘುಮೂರ್ತಿ ಸೂಚನೆ ನೀಡಿದರು. ತಾಪಂ ಅಧಿಕಾರಿ ಧನಂಜಯ ಅವರು ನರೇಗಾ ಯೋಜನೆಯಡಿ ಇದಕ್ಕೆ ಅವಕಾಶವಿದೆ ಎಂದರು.

[t4b-ticker]

You May Also Like

More From Author

+ There are no comments

Add yours