UGC NET 2023 ಫೆಬ್ರವರಿ 21 ರಿಂದ ನೆಟ್‌ ಎಕ್ಸಾಮ್‌; ಅರ್ಜಿ ಆಹ್ವಾನಿಸಿದ NTA

 

ಬೆಂಗಳೂರು: ದೇಶದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳಿಗಾಗಿ ಮತ್ತು ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ನೇಮಕಕ್ಕಾಗಿ ನಡೆಸಲಾಗುವ ಅಖಿಲ ಭಾರತ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ (UGC NET 2023) ಅರ್ಜಿ ಆಹ್ವಾನಿಸಲಾಗಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಪರವಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಈ ಪರೀಕ್ಷೆಯನ್ನು ನಡೆಸುತ್ತದೆ. ಎನ್‌ಟಿಎ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಅರ್ಜಿ ಸಲ್ಲಿಸಲು ಜನವರಿ 18 ಕೊನೆಯ ದಿನವಾಗಿರುತ್ತದೆ. ಫೆಬ್ರವರಿ21 ರಿಂದ ಮಾರ್ಚ್‌10ರ ವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಇದು ಕಂಪ್ಯೂಟರ್‌ ಆಧಾರಿತ ಪರೀಕ್ಷೆ (CBT) ಯಾಗಿರಲಿದೆ.

ವರ್ಷದಲ್ಲಿ 2 ಬಾರಿ ಈ ಪರೀಕ್ಷೆ ನಡೆಯುತ್ತದೆ. ಇದು 2022 ರ ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಯ ಅಧಿಸೂಚನೆಯಾಗಿದೆ. 2023ರ ರಲ್ಲಿ ಇನ್ನೂ ಎರಡು ಬಾರಿ ಪರೀಕ್ಷೆ ನಡೆಯುವ ಸಾಧ್ಯತೆಗಳಿವೆ.

ಪರೀಕ್ಷಾ ವೇಳಾಪಟ್ಟಿಇಂತಿದೆ;

ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳಿಗೆ 1,100 ರೂ. ಇಡಬ್ಲ್ಯುಎಸ್‌ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 550ರೂ. ಹಾಗೂ ಎಸ್‌/ಎಸ್‌ಟಿ/ಅಂಗವಿಕಲ ಮತ್ತು ತೃತೀಯ ಲಿಂಗಿಗಳಿಗೆ 275 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶವಿರುತ್ತದೆ.

ವಯೋಮಿತಿ ಎಷ್ಟು?
ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಇರುವುದಿಲ್ಲ. ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ಗಾಗಿ ಅರ್ಜಿ ಸಲ್ಲಿಸುವವರು 30 ವರ್ಷದೊಳಗಿನವರಾಗಿರಬೇಕು.

ಪರೀಕ್ಷೆ ಹೇಗಿರುತ್ತದೆ?
ಒಟ್ಟು 100 ವಿಷಯಗಳಿಗೆ ಸಂಬಂಧಿಸಿದಂತೆ ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ನಡೆಯುವ ದಿನದಂದು ಎರಡು ಅಧಿವೇಶನಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಬೆಳಗ್ಗೆ 9.30ರಿಂದ 12.30 ಮತ್ತು ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಪರೀಕ್ಷೆ ನಡೆಯಲಿದೆ.

ಒಟ್ಟು ಎರಡು ಪಶ್ನೆ ಪತ್ರಿಕೆಗಳಿರಲಿವೆ. ಪ್ರಶ್ನೆ ಪತ್ರಿಕೆ-1 ನೂರು ಅಂಕಗಳಿಗೆ ನಡೆಯಲಿದ್ದು, 50 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪ್ರಶ್ನೆ ಪತ್ರಿಕೆ-2 ಇನ್ನೂರು ಅಂಕಗಳಿಗೆ ನಡೆಯಲಿದ್ದು, 100 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಈ ಪ್ರಶ್ನೆ ಪತ್ರಿಕೆಗಳಿರಲಿವೆ. ಪ್ರತಿ ಪ್ರಶ್ನೆಗೆ ಎರಡು ಅಂಕ ನಿಗದಿಪಡಿಸಲಾಗಿದೆ. ನೂರು (50 ಪ್ರಶ್ನೆ) ಅಂಕಗಳ ಪ್ರಶ್ನೆ ಪತ್ರಿಕೆ-1ಕ್ಕೆ ಉತ್ತರ ಬರೆಯಲು ಒಂದು ಗಂಟೆ ಕಾಲಾವಕಾಶ ಮತ್ತು 200 ಅಂಕಗಳ (100ಪ್ರಶ್ನೆ) ಪ್ರಶ್ನೆ ಪತ್ರಿಕೆ-2ಕ್ಕೆ ಉತ್ತರ ಬರೆಯಲು 2ಗಂಟೆ ಕಾಲಾವಕಾಶ ನೀಡಲಾಗುತ್ತದೆ.

ರಾಜ್ಯದ ಬೆಳಗಾವಿ, ಬಳ್ಳಾರಿ, ಬಾಗಲಕೋಟ, ಬೆಂಗಳೂರು, ಬೀದರ್‌, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಹಾಸನ, ಹುಬ್ಬಳ್ಳಿ/ಧಾರವಾಡ, ಹಾವೇರಿ, ಕಾರವಾರ, ಕೊಡಗು, ಕೋಲಾರ, ಮಂಗಳೂರು, ಮೈಸೂರು, ರಾಯಚೂರು, ರಾಮನಗರ, ಯಾದಗಿರಿ, ಮಣಿಪಾಲ್‌/ ಉಡುಪಿ, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ : https://ugcnet.nta.nic.in/

[t4b-ticker]

You May Also Like

More From Author

+ There are no comments

Add yours