ದಶಪಥ ರಸ್ತೆಯಲ್ಲಿ ಟೋಲ್ ದರ ಹೆಚ್ಚಳ

 

 ರಾಮನಗರ, ಮಾ.31- ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ ಸಂಚಾರವು ಹೆಚ್ಚು ದುಬಾರಿ, ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಟೋಲ್ ದರ ಏರಿಕೆಯಾಗಿದೆ. 22ರಷ್ಟು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ಟೋಲ್ ದರ ನಿಗದಿತ ಮೂಲಗಳು ತಿಳಿವೆ.ಎಷ್ಟು ದರ: ಕಾರು, ವ್ಯಾನ್, ಜೀಪ್‌ಗಳ ಏಕಮುಖ ಟೋಲ್ ಅನ್ನು 135 ರೂ.ಗಳಿಂದ 165ಕ್ಕೆ ಏರಿಸಲಾಗಿದೆ.
ದ್ವಿಮುಖ ಸಂಚಾರ ದರವು ೨೦೫ ರೂ.ರಿಂದ ೨೫೦ಕ್ಕೆ ಏರಿಕೆಯಾಗಿದೆ. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ 220 ರೂ.ರಿಂದ 270ಕ್ಕೆ ಹಾಗೂ ದ್ವಿಮುಖ ಸಂಚಾರಕ್ಕೆ 405 ರೂ. (೭೫ ರಷ್ಟು) ನಿಗದಿಯಾಗಿದೆ.ಟ್ರಕ್, ಬಸ್, ಎರಡು ಆಕ್ಸೆಲ್ ವಾಹನಗಳ ಏಕಮುಖ ಟೋಲ್ ಬರೋಬ್ಬರಿ 565 ರೂ.ಗಳಿಗೆ ಏರಿಕೆಯಾಗಿದೆ (105 ರೂ. ಹೆಚ್ಚಳ). ದ್ವಿಮುಖ ಸಂಚಾರಕ್ಕೆ ೮೫೦ ರೂ. ನಿಗದಿಪಡಿಸಲಾಗಿದೆ (೧೬೦ ರೂ. ಒಟ್ಟು).೩ ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವು ೬೧೫ ರೂ.(೧೧೫ ರೂ. ಏರಿಕೆ) ಹಾಗೂ ದ್ವಿಮುಖ ಸಂಚಾರಕ್ಕೆ ೯೨೫ ರೂ. (೨೨೫ ರೂ.) ಏರಿದೆ. ಭಾರಿ ವಾಹನಗಳ ಏಕಮುಖ ಟೋಲ್ ೮೮೫ ರೂ. (೧೬೫ ರೂ.), ದ್ವಿಮುಖ ಸಂಚಾರಕ್ಕೆ ೧,೩೩೦ ರೂ. (೨೫೦ ರೂ.) ನಿಗದಿ ಆಗಿದೆ. ೭ ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ದರವು ೧,೦೮೦ ರೂ. (೨೦೦ ರೂ. ಮೊತ್ತ) ಹಾಗೂ ದ್ವಿಮುಖ ಸಂಚಾರಕ್ಕೆ ೧,೬೨೦ ರೂ. (೩೦೫ ರೂ. ಏರಿಕೆ) ನಿಗದಿಯಾಗಿದೆ. ರಸ್ತೆ ಪ್ರಾಧಿಕಾರ ಜನಸಾಮಾನ್ಯರನ್ನ ಲೂಟಿ ಮಾಡುತ್ತಿದೆ.

ಟೋಲ್ ಸಂಗ್ರಹ..!
ಪ್ರಧಾನಿ ನರೇಂದ್ರ ಮೋದಿ ಇದೇ ಮಾರ್ಚ್ 12 ರಂದು ಈ ರಸ್ತೆಯನ್ನು ಉದ್ಘಾಟಿಸಿದರು. ಮಾ. 14 ರಿಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಕಿ ಹಾಗೂ ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಪ್ರಾರಂಭವಾಯಿತು. ಇದೀಗ 17 ದಿನದಲ್ಲೇ ಟೋಲ್ ಸಂಗ್ರಹ ಮಾಡಲಾಗಿದೆ.

 

[t4b-ticker]

You May Also Like

More From Author

+ There are no comments

Add yours