ಸಮಸ್ಯೆಗಳನ್ನು ಸರಾಗವಾಗಿ ಬಗೆಹರಿಸೋಣ: ಪೂರ್ಣಿಮಾ ಶ್ರೀನಿವಾಸ್

 

ಹಿರಿಯೂರು : ತಾಲ್ಲೂಕಿನ ಯರಬಳ್ಳಿ ಗ್ರಾಮ ಪಂಚಾಯಿತಿ ಅಂದ್ರೆ ಸದಾಕಾಲ ವಿವಾದಾತ್ಮಕವಾಗಿದ್ದಂತ ಸ್ಥಳ. ಇಂತಹ ಪಂಚಾಯಿತಿಯಲ್ಲಿ ಐದು ವರ್ಷಗಳ ನಂತರ ಯಶಸ್ವಿ ಗ್ರಾಮಸಭೆ ನಡೆಯಿತು.

ಸಾರಥ್ಯವಹಿಸಿದ್ದ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಯರಬಳ್ಳಿ ಗ್ರಾಮ
ಪಂಚಾಯಿತಿಯಲ್ಲಿ ಕಳೆದ 5 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗದೆ ಇರುವುದರಿಂದ ಇಂತಹ ಪಂಚಾಯಿತಿಗಳಿಗೆ ಅಧಿಕಾರಿಗಳು ಹೆಚ್ಚು ಒತ್ತು ಕೊಟ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬೇಕೆಂದು ಸೂಚಿಸಿದರು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಮೂಲಕ ಸಾರ್ವಜನಿಕರಿಗೆ ಸ್ಪಂದಿಸಿದರು.

ವಿವಿಧ ಸಮಸ್ಯೆಗಳನ್ನು ಹೊತ್ತು ಬಂದಿದ್ದ ಏಳು ಹಳ್ಳಿಯ ಗ್ರಾಮಸ್ಥರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮುಂದೆ ತಮ್ಮ ಸಮಸ್ಯೆಗಳನ್ನು ಅನಾವರಣ ಮಾಡಿದರು. ಈ ಕುರಿತು ಮಾತನಾಡಿದಂತಹ ಪೂರ್ಣಿಮಾ ಶ್ರೀನಿವಾಸ್ ಯರಬಳ್ಳಿ ಪಂಚಾಯಿತಿ ಐದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೆ ಇರುವುದಕ್ಕೆ ಸ್ಥಳೀಯರ ಸಮಸ್ಯೆಗಳು ಕಾರಣ. ಯಾವುದೇ ರೀತಿಯ ಅಧಿಕಾರಿಗಳಿಂದ ಲೋಪದೋಷಗಳಿಲ್ಲ ಆದರೆ ಇದೀಗ ಎರಡು ವರ್ಷಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸೋಣ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಯರಬಳ್ಳಿ ಪಂಚಾಯತಿ ಆಡಳಿತಾಧಿಕಾರಿ ಸತ್ಯನಾರಾಯಣ, ತಾ ಪಂ ಇಒ ಹನುಮಂತರಾಯಪ್ಪ, ಸಿಪಿಐ ರಾಘವೇಂದ್ರ, ಪಿಡಿಒ ಬಸವರಾಜ, ಬೆಸ್ಕಾಂ ಎಸ್.ಒ ಪರುಶುರಾಮ, ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾಮೆಗೌಡ ಮುಂತಾದವರ ಉಪಸ್ಥಿತರಿದ್ದರು.
ಯರಬಳ್ಳಿ,ಕಳವಿಭಾಗಿ, ಸಲಬೊಮ್ಮನಹಳ್ಳಿ, ಗೊಲ್ಲಹಳ್ಳಿ, ಕಂದಿಕೆರೆ, ಕಾಟಪ್ಪನಹಟ್ಟಿ, ಗೊಲ್ಲರಹಟ್ಟಿ ಯ ಗ್ರಾಮಸ್ಥರು ತಮ್ಮ ಮನವಿ ಸಲ್ಲಿಸಿದರು.

[t4b-ticker]

You May Also Like

More From Author

+ There are no comments

Add yours