ಜಿಲ್ಲೆಯಲ್ಲಿ 514 ಗ್ರಾಮ ಪೋಡಿ ಮುಕ್ತ, ನೀವು ನೊಂದಯಿಸಿಕೊಳ್ಳಿ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಅ.21:
ಚಿತ್ರದುರ್ಗ (chitradurga)   ಜಿಲ್ಲೆಯಲ್ಲಿ ಒಟ್ಟು 1053 ಕಂದಾಯ ಗ್ರಾಮಗಳಿದ್ದು, ಈ ಪೈಕಿ 514 ಗ್ರಾಮಗಳಲ್ಲಿ ಸರ್ಕಾರದ ವತಿಯಿಂದ ಖಾಸಗಿ ಜಮೀನುಗಳಲ್ಲಿ ಬಹುಮಾಲೀಕತ್ವ ಇರುವ ಪಹಣಿಗಳಲ್ಲಿ ಪೋಡಿಮುಕ್ತ ಅಭಿಯಾನದ ಮೂಲಕ ಉಚಿತವಾಗಿ ಪೋಡಿ ಕೆಲಸ ನಿರ್ವಹಿಸಲಾಗಿರುತ್ತದೆ.
  ಪೋಡಿಮುಕ್ತ ಅಭಿಯಾನಕ್ಕೆ ಬಾಕಿ ಉಳಿದಿರುವ 539 ಗ್ರಾಮಗಳಲ್ಲಿ ಬಹುಮಾಲೀಕತ್ವ ಹೊಂದಿರುವ ಪಹಣಿಗಳಲ್ಲಿ ಪೋಡಿಮುಕ್ತ ಅಭಿಯಾನದ ಮೂಲಕ ಉಚಿತವಾಗಿ ಅಳತೆ ಮಾಡಿ ಪೋಡಿ ಮಾಡಲು ಸರ್ಕಾರವು ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ಟೋಬರ್‍ನಿಂದ ಪೋಡಿಮುಕ್ತ ಅಭಿಯಾನ ಪ್ರಾರಂಭಿಸಿದೆ.
ಈ ಯೋಜನೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ನಿಮ್ಮ ಜಮೀನಿನ ಹತ್ತಿರ ಅಳತೆ ಕೆಲಸಕ್ಕೆ ಹಾಜರಾಗುವ ಭೂಮಾಪಕರಿಗೆ ಸಹಕಾರ ನೀಡಿ ಪೋಡಿಮುಕ್ತ ಅಭಿಯಾನದಲ್ಲಿ ಉಚಿತ ಪೋಡಿ ಮಾಡಿಸಿಕೊಂಡು ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು  ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
========

[t4b-ticker]

You May Also Like

More From Author

+ There are no comments

Add yours