ಕೋಟೆ ನಾಡಲ್ಲಿ ವರುಣನ ಆರ್ಭಟಕ್ಕೆ ಬೆಚ್ಚಿ ಬಿದ್ದ ಜನ, ನಗರ ಅಸ್ತವ್ಯಸ್ತ, ರಸ್ತೆಗುರುಳಿದ ಮರಗಳು

 

ಚಿತ್ರದುರ್ಗ: ಚಿತ್ರದುರ್ಗ ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ.  ಹಲವು ಭಾಗಗಳಲ್ಲಿ ಇಂದು ಸಂಜೆ 5-30 ರ ಸಮಯದಲ್ಲಿ  ವೇಳೆ ಭರ್ಜರಿ ಮಳೆಯಾಗಿದ್ದು, ನಗರದಲ್ಲಿ  ವಿವಿಧ  ಭಾಗಗಳಲ್ಲಿ ಅಲ್ಲಿಕಲ್ಲು ಸಹಿತ ಮಳೆ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿದ್ದು, ಕಪ್ಪು ಕಾರ್ಮೋಡಗಳು ಕವಿದು ಭರ್ಜರಿ ಮಳೆಯಾದ ಕಾರಣ ವಾಹನ ಸವಾರರು ದಾರಿ ಕಣದೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವಂತೆ ಆಗಿತ್ತು.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ‌ಹಿನ್ನೆಲೆಯಲ್ಲಿ  ಎಫೆಕ್ಟ್ ಚಿತ್ರದುರ್ಗ ಜಿಲ್ಲೆಗೆ ತಲುಪಿದ್ದು  ಮಳೆಯ ಸುರಿದ ರಭಸಕ್ಕೆ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಬೆಳಗ್ಗೆಯಿಂದ ತಣ್ಣನೆ ವಾತವರಣ ಇದ್ದರು ಸಹ ಸಂಜೆ ವೇಳೆಗೆ ಕೋಟೆ ನಾಡು ತಂಪಾಗಿದೆ.

ಗಾಳಿ ಸಹಿತ ಮಳೆಯಿಂದ ಹಲವು ಕಡೆ ಅಂಗಡಿ ಮುಂಗಟ್ಟುಗಳ ಬೋರ್ಡ್ ನೆಲಕ್ಕೆ ಉರುಳಿವೆ.ನೂರಾರು ಮನೆಗಳು ಮತ್ತು ಕಚೇರಿಗಳ ಯುಪಿಎಸ್, ಟಿವಿಗಳು , ಬಲ್ಫಗಳು ಸುಟ್ಟು ಹೋಗಿವೆ. ವಾಹನಗಳ ಮೇಲೆ ಹಳೆಯ ಮರಗಳು ಬಿದ್ದು ಜಾಖಂ ಆಗಿವೆ. ಕೇಲವು ಬೈಕ್ ಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.ವಾತವರಣ ತಂಪಾದರು ಸಹ ಸ್ವಲ್ಪ ಒತ್ತು ಜನರು ಜೀವವನ್ನು ಬಿಗಿ ಇಟ್ಟುಕೊಳ್ಳವಂತೆ  ಮಾಡಿತ್ತು. ಒಟ್ಟಿನಲ್ಲಿ ವರುಣ ಕೃಪೆ ತೋರಿದರು ಮುನಿದಂತೆ ಕಾಣುತ್ತಿದೆ.

[t4b-ticker]

You May Also Like

More From Author

+ There are no comments

Add yours