ಎರಡನೇ ದಿನಕ್ಕೆ ಕಾಲಿಟ್ಟ ಸರ್ಕಾರಿ ನೌಕರರ ಪ್ರತಿಭಟನೆ

 

ಬೆಂಗಳೂರು: NPS ನ್ಯೂ ಪೆನ್ಷನ್ ಸ್ಕೀಂ ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಎನ್​​ಪಿಎಸ್ ನೌಕರರ ಬೃಹತ್ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಚಳಿಯನ್ನು ಕೂಡ ಲೆಕ್ಕಿಸದೆ ರಾತ್ರಿಯಿಡಿ ನೌಕರರು ಪ್ರತಿಭಟನೆಯನ್ನ ಮುಂದುವರೆಸಿದ್ದಾರೆ. ನಿಗಮ ಮಂಡಳಿಗಳಲ್ಲಿ ಕೆಲಸ ಮಾಡುತ್ತಿರುವ 3 ಲಕ್ಷ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಜಾರ್ಖಂಡ್, ಛತ್ತೀಸ್ ಗಢ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ NPS ರದ್ದು ಪಡಿಸಲಾಗಿದ್ದು ಕರ್ನಾಟಕದಲ್ಲಿ ಮಾತ್ರ NPS ರದ್ದು ಪಡಿಸುತ್ತಿಲ್ಲ. ಬೇಡಿಕೆ ಈಡೇರಿಕೆ ಆಗೋವರೆಗೂ ಮನೆಗೆ ಹೋಗಲ್ಲ ಅಂತ ಸರ್ಕಾರಿ ನೌಕರರು ಪಟ್ಟು ಹಿಡಿದು ಕುಳಿತಿದ್ದಾರೆ.

[t4b-ticker]

You May Also Like

More From Author

+ There are no comments

Add yours