ಕೆಂಡದಲ್ಲಿ ಬಿದ್ದು ಸುಟ್ಟು ನರಳಾಡುತ್ತಿದ್ದ ಮಗುವಿಗೆ ಚಿಕಿತ್ಸೆ ಕೊಡದ ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳು, ಬಡವರು ಸರ್ಕಾರಿ ಆಸ್ಪತ್ರೆಗೆ ಹೋಗೋದು ತಪ್ಪಾ

 

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯರು, ಸಿಬ್ಬಂದಿ  ಬೆಳಿಗ್ಗೆ 6 ಗಂಟೆಯಿಂದ ನರಳುತ್ತಿರುವ ಗಾಯಾಳುಗಳಿಗೆ ಚಿಕಿತ್ಸೆ ನೀಡದೇ ಅಮಾನವೀಯ ವರ್ತನೆ ತೋರಿರುವ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ  ನಡೆದಿದೆ‌

ಚಿತ್ರದುರ್ಗ ತಾಲೂಕಿನ ಬೊಮ್ಮನಹಳ್ಳಿ  ಗ್ರಾಮದಲ್ಲಿ ಮೊಹರಂ ಹಬ್ಬದ  ಸಂಪ್ರದಾಯದಂತೆ ಕೆಂಡ ಹಾಯುವ ವೇಳೆ ಮುಗ್ಗರಿಸಿ ಬಿದ್ದ ರಮೇಶ್(38) ಹಾಗೂ 2ವರ್ಷದ ಮಗು ರವಿ ಅವರು ಇಬ್ಬರಿಗೂ 25ರಷ್ಟು ಸುಟ್ಟ ಗಾಯ ಗಾಯವಾಗಿವೆ. ಬೆಳಿಗ್ಗೆ 6 ಗಂಟೆಗೇ ಬಂದ್ರೂ ಸುಟ್ಟ ಗಾಯಗಳಾದ ಮಗುವಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದರು.ಮಗುವಿನ ಕುಟಂಬಸ್ಥರಿಂದಲೇ ಮಗುವಿಗೆ ಡ್ರೆಸ್ಸಿಂಗ್ ಮಾಡಿಸಿದ ಸಿಬ್ಬಂದಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ.

ವೈದ್ಯರು, ಸಿಬ್ಬಂದಿ ಮುಂದೇ ಇದ್ರೂ ಕುಟುಂಬಸ್ಥರಿಂದ ಡ್ರೆಸ್ಸಿಂಗ್ ಮಾಡಿಸಿ ವೈದ್ಯ ವೃತ್ತಿಗೆ ದ್ರೋಹ ಮಾಡಿದ್ದಾರೆ‌.ಬೆಳಿಗ್ಗೆ ಬಯೋಮೆಟ್ರಿಕ್ ಹಾಕಿ ಡ್ಯೂಟಿ ಡಾಕ್ಟರ್ ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಫೋನ್ ಮಾಡಿದ್ರೂ ಕ್ಯಾರೇ ಎಂದಿಲ್ಲ ಎಂದು ರೋಗಿಗಳ ಆರೋಪವಾಗಿದೆ.

ಫೋನ್ ಮಾಡಿದ್ರೂ ಸಿಗದ ಡ್ಯೂಟಿ ಡಾಕ್ಟರ್ ಅನೂಪ್ ವಿ.ಎಂ.ಇತ್ತೀಚೆಗೆ ಶಾಸಕರು ವಾರ್ನ್ ಮಡಿದ್ರೂ ಕ್ಯಾರೇ ಎನ್ನದ ಜಿಲ್ಲಾಸ್ಪತ್ರೆ ಸಿಬ್ಬಂದಿ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಗಾಯಾಳುಗಳ ನರಳಾಟ ಹೆಚ್ಚಾದರು ಸಹ ಚಿಕಿತ್ಸೆ ಕೊಡುವ ಗೋಜಿಗೆ ಸಿಬ್ಬಂದಿ ಹೋಗಿಲ್ಲ.

 

ಮಾಧ್ಯಮದವರು ಸಚಿವರ ಗಮನಕ್ಕೆ ತಂದ ತಕ್ಷಣ ಜಿಲ್ಲಾ    ಉಸ್ತುವಾರಿ ಸಚಿವ ಡಿ.ಸುಧಾಕರ್ , ಶಾಸಕ ಟಿ.ರಘುಮೂರ್ತಿ , ಕೆ.ಸಿ.ವೀರೇಂದ್ರ ಪಪ್ಪಿ  ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದ ತಕ್ಷಣ ಸಚಿವರ ಮುಂದೆ ಮಗುವಿನ ಸಂಬಂಧಿಕರ ಅಳಲು ಇದನ್ನು ಗಮನಿಸಿಸ ಸಚಿವರು ಡಿಎಸ್ ಎಲ್ಲಿಗೆ ಹೋಗಿದ್ದಾರೆ, ಅವ್ರು ಡ್ಯೂಟಿನಲ್ಲಿ ಇದ್ದಾರಾ, ಎಂದಾಗ ಸಬೂಬು ಹೇಳಲು‌ ಮುಂದಾದ ಸಿಬ್ಬಂದಿ ವಿರುದ್ದ ಗರಂ ಆದ ಸಚಿವರು ಕೇಳಿದ್ದಕ್ಕೆ ಮಾತ್ರ ಅನ್ಸಾರ್ ಮಾಡಿ ಎಂದರು‌.ಫೋನ್ ಸ್ವಿಚ್ ಆಫ್ ಮಾಡ್ತೀರಾ ಏನ್ರೀ,ಡ್ಯೂಟಿ ಟೈಮ್ ನಲ್ಲಿ ಎಲ್ಲಿಗೆ ಹೋಗ್ತೀರಾ, ಅವ್ರು ಎಲ್ಲಿಗೆ ಹೋಗಿದ್ದಾರೆ ಅಷ್ಟು ಹೇಳಿ ಹಿರಿಯ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಸಚಿವರು, ಶಾಸಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

[t4b-ticker]

You May Also Like

More From Author

+ There are no comments

Add yours