ತಹಶೀಲ್ದಾರ್ ಎನ್.ರಘುಮೂರ್ತಿ ಕಾರ್ಯ ವೈಖರಿಗೆ ಸಚಿವ ಬಿ.ಶ್ರೀರಾಮುಲು ಹರ್ಷ

 

ಚಳ್ಳಕೆರೆ : ತಾಲೂಕು ಮೊಳಕಾಲ್ಮುರು ಕ್ಷೇತ್ರದ ವ್ಯಾಪ್ತಿಯ  ತಳುಕು ಹೋಬಳಿ ಮತ್ತು ನಾಯಕನಹಟ್ಟಿ ಹೋಬಳಿಯ 48  ಗ್ರಾಮಗಳನ್ನು ಈಗಾಗಲೇ ಕಂದಾಯ ಇಲಾಖೆಯ ಸಮಸ್ಯೆ  ಮುಕ್ತ ಗ್ರಾಮಗಳನ್ನಾಗಿ ಮಾಡಿದ್ದು ಉಳಿದಂತ ಎಲ್ಲ ಗ್ರಾಮಗಳನ್ನು ಕೂಡ  ಸಮಸ್ಯೆ  ಮುಕ್ತ ಗ್ತಾಮಗಳಾಗಿ ಮಾಡಿ ಎಂದು  ಸಚಿವ ಬಿ.ಶ್ರೀರಾಮುಲು ಹೇಳಿದರು.

ಚಿತ್ರದುರ್ಗದಿಂದ ಬಳ್ಳಾರಿ ಹೋಗುವ ರಸ್ತೆ ಮಾರ್ಗದಲ್ಲಿ ತಹಶೀಲ್ದಾರ್ ಎನ್‌.ರಘುಮೂರ್ತಿ ಅವರನ್ನು ಭೇಟಿ ಮಾಡಿ ಮಾತನಾಡಿ ಸಾರ್ವಜನಿಕರ  ಪೌತಿಕತೆ , ದರಕಾಸ್ತು, ಪೋಡಿ ದಾರಿ ವಿವಾದಗಳು ಮತ್ತು ಬಗರು ಹುಕುಂ ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಸಚಿವರು  ಚಳ್ಳಕೆರೆ ತಹಶೀಲ್ದಾರ್  ಅವರಿಗೆ ಸೂಚಿಸಿದರು..

ತಾಲೂಕಿನಲ್ಲಿ ವಿನೂತನವಾದಂತ ಈ ಕಾರ್ಯಕ್ರಮವನ್ನು ರೂಪಿಸಿ ಜನತೆಗೆ ನೆಮ್ಮದಿ ತಂದಿದ್ದಾರೆ. ಸರ್ಕಾರಿ ಕಚೇರಿಗೆ ಶೇಕಡಾ 80ರಷ್ಟು ಸಾರ್ವಜನಿಕರು ಅಲೆಯುವುದನ್ನು ತಪ್ಪಿಸಿದ್ದಾರೆ. ಸರ್ಕಾರದ ಮೇಲೆ ಸಾರ್ವಜನಿಕರಿಗೆ ಭರವಸೆ ಉಂಟಾಗುವ ಹಾಗೆ ಕೆಲಸ  ಮಾಡಿದ್ದಾರೆ. ಇನ್ನೂ ಉಳಿದಂತ ಎಲ್ಲ ಕೆಲಸ ಕಾರ್ಯಗಳನ್ನು ಶೇಕಡ ನೂರಕ್ಕೆ ನೂರರಷ್ಟು ಪೂರ್ಣಗೊಳಿಸಿ ಇದೊಂದು ಮಾದರಿ ತಾಲೂಕ ಆಗುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.

ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ ತುಳುಕು ಮತ್ತು ನಾಯಕನಹಟ್ಟಿ ಹೋಬಳಿಯ ಶೇಕಡ 95 ರಷ್ಟು ರೈತರಿಗೆ ಬೆಳೆ ಪರಿಹಾರವನ್ನು ನೀಡಲಾಗಿದೆ.  ಸಚಿವರು ಹೇಳಿದ ರೀತಿಯಲ್ಲಿ ಸರ್ಕಾರದ ಮೇಲೆ ಜನಗಳಿಗೆ ಭರವಸೆಯನ್ನು ಮೂಡಿಸಲಾಗಿದೆ. ತಳುಕು ಮತ್ತು ನಾಯಕನಹಟ್ಟಿ  ಹೋಬಳಿಯಲ್ಲಿ ಬಾಕಿ ಉಳಿದಿರುವಂತಹ ಎಲ್ಲ ಗ್ರಾಮಗಳನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮುಂದಿನ ಎರಡು ತಿಂಗಳೊಳಗಾಗಿ ಮಾಡಲಾಗುವುದು.ನಮ್ಮ  ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ಸೂಚನೆ ನೀಡಿದ್ದು  ಸಚಿವರ ಆದೇಶದಂತೆ ಎಲ್ಲ ಕೆಲಸ ಕಾರ್ಯಗಳು ಎರಡು ತಿಂಗಳು ಒಳಗೆ ಪೂರ್ಣ ಮಾಡಲಾತ್ತದೆ.

ಇದೇ ಸಂದರ್ಭದಲ್ಲಿ ಮುಖಂಡರಾದ ಹೊನ್ನೂರು ಗೋವಿಂದಪ್ಪ , ಹನುಮಂತನಹಳ್ಳಿ ತಿಮ್ಮಾರೆಡ್ಡಿ , ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours