ವಿವಾದಿತ ಸ್ಮಶಾನ ಸ್ಥಳಕ್ಕೆ ಮುಕ್ತಿ ನೀಡಿದ ತಹಶೀಲ್ದಾರ್ ಎನ್.ರಘುಮೂರ್ತಿ

 

ನಾಯಕನಹಟ್ಟಿ: ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಸರ್ವೆ ನಂಬರ್ 112 ರಲ್ಲಿರುವಂತ ಸ್ಮಶಾನದ ವಿವಾದ ಇಂದು ಸುಖಾಂತ್ಯ ಕಂಡಿದೆ. ಈ ಸರ್ವೇ ನಂಬರ್ ನಲ್ಲಿ ಎರಡು ಎಕರೆ ಜಮೀನನ್ನು  ಸ್ಮಶಾನಕೋಸ್ಕರ  ಮೀಸಲಿಟ್ಟಿದ್ದು  ಈ ಜಮೀನನ್ನು ಒತ್ತುವರಿ ಮಾಡಿ ಕೃಷಿಗೆ ಬಳಸಿಕೊಂಡಿದ್ದನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ. ನೂರು ಜನ ಗ್ರಾಮಸ್ಥರು ನಿನ್ನೆ ತಾಲೂಕು  ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಎನ‌್‌.ರಘುಮೂರ್ತಿ  ಅವರನ್ನು ಆಗ್ರಹಿಸಿದ್ದರು. ಇವರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್  ಇಂದು ಸರ್ವೆ ಸಿಬ್ಬಂದಿ ಕಂದಾಯ ಇಲಾಖೆಯ ರಾಜ್ಯಸ್ವ  ನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ವಿವಾದಿತ ಪ್ರದೇಶಕ್ಕೆ ಭೇಟಿ ನೀಡಿ ಅಳತೆ ಮಾಡಿಸಿ ಒತ್ತುವರಿದಾರರನ್ನು ಕರೆಸಿ ಮನುಷ್ಯನ ಕೊನೆಯ ದಿನಗಳಲ್ಲಿ ಅವನ ಸದ್ಗತಿಗೆ ಅವಶ್ಯವಾಗಿ ಸ್ಮಶಾನಕ್ಕೆ ಜಾಗ ಬೇಕಾಗುತ್ತದೆ. ಇಂತಹ ಜಮೀನನ್ನು ಕೂಡ ಒತ್ತುವರಿ ಮಾಡಿ ಮನುಷ್ಯರು ಸ್ವಾರ್ಥಿಗಳಾಗುವುದು ತುಂಬಾ ವಿಷಾದ ಸಂಗತಿ ಬದುಕುವುದು ಮೂರೇ ದಿನ ಆದರೂ ಕೂಡ ಆದರ್ಶವಾಗಿ ಬದುಕಬೇಕು.

ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಅದೆಷ್ಟೋ ಜನರ ಆದರ್ಶದ ಬದುಕು ನಮ್ಮ ಮುಂದಿದೆ ಹೀಗಿದ್ದರೂ ಕೂಡ ಈ ಸ್ಮಶಾನದ ಜಮೀನನ್ನು ಹೀಗಿದ್ದರೂ ಕೂಡ ಈ ಸ್ಮಶಾನದ ಜಮೀನನ್ನು ಒತ್ತುವರಿ ಮಾಡುವುದು ಶೋಭೆ ತರುವುದಿಲ್ಲ  ಎಂದು ಒತ್ತುವರಿದಾರರಿಗೆ ಮನ ಪರಿವರ್ತಿಸಿ ಹೊತ್ತುವರಿಯಾಗಿರುವಂತಹ ಜಮೀನನ್ನು ಪುನಃ ಸರ್ಕಾರಕ್ಕೆ ವಾಪಸ್ ಪಡೆಯಲು ಯಶಸ್ವಿಯಾದರು.

ಈ ಸಂದರ್ಭದಲ್ಲಿ ತಹಶೀಲ್ದಾರ್   ಮಾತನಾಡಿ ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆರೆ ಕುಂಟೆ ಹಳ್ಳ ದಾರಿ ಗೋಮಳ ರಾಜ ಕಾಲುವೆ ಮುಂತಾದವುಗಳನ್ನು ಹೊತ್ತುವರಿ ಮಾಡಿಕೊಳ್ಳಲು ಯಾರೂ ಕೂಡ ಮುಂದಾಗಬಾರದೆಂದು ಮನವಿ ಮಾಡಿದರು ಹೀಗಿದ್ದರೂ ಕೂಡ ಯಾರಾದರೂ ಒತ್ತುವರಿ ಮಾಡಿಕೊಂಡಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಈ  ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ, ರಾಜಸ್ವ ಚೇತನ್ ಕುಮಾರ್ ಗ್ರಾಮ ಲೆಕ್ಕಾಧಿಕಾರಿಪುಷ್ಪಲತಾ ಸರ್ವೆ ಬಸವರಾಜು ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours