ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರು ಪ್ರಯತ್ನಿಸಬೇಕು: ಬಿಇಓ ತಿಪ್ಪೇಸ್ವಾಮಿ

 

ಚಿತ್ರದುರ್ಗ:ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಗಣನೀಯವಾದದ್ದು, ಅವರ ಶಿಕ್ಷಣದಲ್ಲಿ ಗುಣಾತ್ಮಕವಾದಂತ ಬದಲಾವಣೆ ತರಲು ಶಿಕ್ಷಕರು ಅವಿರತವಾಗಿ ಪ್ರಯತ್ನಿಸಬೇಕು, ಜಿಲ್ಲೆಯ ಫಲಿತಾಂಶ ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ಬರುವಂತಹ ಪ್ರಯತ್ನಗಳಾಗಬೇಕು ಎಂದು ಬಿ ಇ ಓ ತಿಪ್ಪೇಸ್ವಾಮಿಯವರು ನುಡಿದರು.
ಅವರು ರೋಟರಿ ಕ್ಲಬ್ ಚಿತ್ರದುರ್ಗ ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ವತಿಯಿಂದ ಆದಿಶೇಷ ರೋಟರಿ ಭವನ, ಮರುಳಪ್ಪ ಬಡಾವಣೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು.
ಪರೀಕ್ಷ ಸಮಯ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳನ್ನು ಉತ್ತಮ ಫಲಿತಾಂಶ ತರುವಂತೆ ತರಬೇತಿಗೊಳಿಸಬೇಕು. ಗುಣಾತ್ಮಕ ಶಿಕ್ಷಣ ಮತ್ತು ಗುಣಾತ್ಮಕ ಫಲಿತಾಂಶದ ಕಡೆಗೆ ನಮ್ಮ ಗಮನವಿರಬೇಕು ಎಂದು ಕರೆ ನೀಡಿದರು.
ರೊಟೇರಿಯನ್ ಪಿ ಎಚ್ ಎಫ್ ವಿಶ್ವಜಿತ್ ಜಾದವ್ ಡಿ ಎಲ್ ಸಿ ಸಿ ಆರ್ ಐ ಡಿ 3160 ದಾವಣಗೆರೆ ಮಾತನಾಡುತ್ತಾ ಶಾಲೆಯಲ್ಲಿ ಎಷ್ಟೇ ಸೌಕರ್ಯಗಳಿದ್ದರೂ ಸಹ ಉತ್ತಮ ಶಿಕ್ಷಕರು ಇಲ್ಲದಿದ್ದರೆ ಕಲಿಕೆಯಲ್ಲಿ ಗುಣಾತ್ಮಕವಾದ ಬದಲಾವಣೆ ತರುವುದು ಕಷ್ಟಕರ, ಹಾಗಾಗಿ ತರಬೇತಿ ಹೊಂದಿದ ಶಿಕ್ಷಕರಿಗೆ ಹೆಚ್ಚು ಆದ್ಯತೆ ನೀಡಿದಷ್ಟು ಮಕ್ಕಳಲ್ಲಿ ಕಲಿಕೆ ಹೆಚ್ಚು ಆಗುವುದು ಎಂದರು.
ರೋ. ಹರಿಸರ್ವೋತ್ತಮ್ ಚೇರ್ಮನ್, ಲಿಟರಿಸಿ ಕಮಿಟಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಿಕ್ಷಕರಲ್ಲಿ ತರಬೇತಿ ನೀಡುವುದರಿಂದ ಮಕ್ಕಳಲ್ಲಿ ಉನ್ನತ ವಿಚಾರಗಳು ಚಿಂತನೆಗಳು ಮೂಡುತ್ತದೆ ಅದಕ್ಕಾಗಿ ರೋಟರಿ ಸಂಸ್ಥೆ ಅವಿರತವಾಗಿ ಪ್ರಯತ್ನಿಸುತ್ತಿದೆ ಎಂದು ನುಡಿದರು
ಕಾರ್ಯಕ್ರಮದಲ್ಲಿ ರೋ. ಪಿ ಎಚ್ ಎಫ್, ಎಂ ಕೆ ರವೀಂದ್ರ, ಡಿಸ್ಟ್ರಿಕ್ಟ್ ಗೌರ್ನರ್, ರೋ ಪಿಎಚ್ಎಫ್ ಗಾಯತ್ರಿ ಶಿವರಾಂ, ರೋ ಮಾಧುರಿ ಮಧು ಪ್ರಸಾದ್, ರೋಟರಿ ಕ್ಲಬ್ ಪ್ರೆಸಿಡೆಂಟ್, ರೋ ಡಾಕ್ಟರ ಮಧುಸೂದನ್ ರೆಡ್ಡಿ ಪ್ರೆಸಿಡೆಂಟ್ ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ರೋ. ಜಯಶ್ರೀ ಶಾ, ಕಾರ್ಯದರ್ಶಿ, ರೋ ಜೆ ಅಶೋಕ್ ಕುಮಾರ್ ಕಾರ್ಯದರ್ಶಿ, ರೋ ಎಂ ಜೆ ರಾಘವೇಂದ್ರ ಚೇರ್ಮನ್ ಲಿಟರಸಿ ಕಮಿಟಿ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಇನ್ನಿತರ ರೋಟರಿ ಕ್ಲಬ್ ಸದಸ್ಯರು ಪದಾಧಿಕಾರಿಗಳು ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours