ಕಡಿಮೆ ಮತದಾನ ಪ್ರದೇಶದಲ್ಲಿ ಮತದಾನ‌ ಹೆಚ್ಚಿಸಲು ಕ್ರಮ ವಹಿಸಿ: ಸಿಇಓ ಎಂ.ಎಸ್.ದಿವಾಕರ್

 

ಸಾರ್ವತ್ರಿಕ ಚುನಾವಣೆ -2023
ಜಿಲ್ಲಾ ಸ್ವೀಪ್ ಸಮಿತಿ, ಚಿತ್ರದುರ್ಗ.

ಚಿತ್ರದುರ್ಗ: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಅಧ್ಯಕ್ಷರು ಜಿಲ್ಲಾ ಸ್ವೀಪ್ ಸಮಿತಿ, ಚಿತ್ರದುರ್ಗ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ  ಜಿ.ಪಂ. ಸಿಇಓ ಎಂ.ಎಸ್.ದಿವಾಕರ್  ಅಧ್ಯಕ್ಷತೆಯಲ್ಲಿ ಕಾರ್ಯಗಾರ ನಡೆಯಿತು.

ಚುನಾವಣೆ ಸ್ವಿಪ್ ಕಾರ್ಯಗಾರದಲ್ಲಿ  ಬಿಎಲ್ ಓ, ಬಿಆರ್ಸಿ, ಬಿಇಓ ಮತ್ತು ಡಿಡಿಪಿಐ ಗಳು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

 

ಈ ಕಾರ್ಯಗಾರದಲ್ಲಿ 2018 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ  ಜಿಲ್ಲೆಯಲ್ಲಿ ಶೇಕಡ 82.4%ಕ್ಕಿಂತ ಕಡಿಮೆ ಮತದಾನವಾದ 585 ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾದ ಬಗ್ಗೆ ಕಾರಣ, ಹಾಗೂ ಹೆಚ್ಚಿನ ಮತದಾನ ವಾಗುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ BLO, BRC, BEO ಹಾಗೂ DDPI ರವರೊಂದಿಗೆ ಸಭೆ ನಡೆಸಲಾಯಿತು.

ಸ್ವೀಪ್ ಕಾರ್ಯಕ್ರಮದ ಭಾಗವಾಗಿ, ಎಲ್ಲಾ CRPC ರವರುಗಳು ಅವರ  ವ್ಯಾಪ್ತಿಯಲ್ಲಿ ಬರುವ ಕಡಿಮೆ ಮತದಾನವಾದ ಪ್ರದೇಶವನ್ನು  ವೈಯಕ್ತಿಕವಾಗಿ ತಂಡಗಳನ್ನು ರಚಿಸಿಕೊಂಡು, ಅದರಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತಗಳ ಜೊತೆಗೆ ಮನೆ ಮನೆ ಗೆ ಭೇಟಿ ನೀಡಿ  ಯಾವ ಕಾರಣಕ್ಕಾಗಿ ಕಡಿಮೆ ಮತದಾನ ಪ್ರಮಾಣ ಆಗಿದೆ ಎಂಬುದನ್ನು  ಬಗ್ಗೆ ಹತ್ತು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದರು.

ಕಡಿಮೆ ಮತದಾನವಾದ ಮತಗಟ್ಟೆಗಳ ಪ್ರದೇಶದಲ್ಲಿ  ಈ ಬಾರಿ ಹೆಚ್ಚಿನದಾಗಿ ಮತದಾನ ವಾಗುವಂತೆ ಎಲ್ಲರೂ ಮತದಾರರಿಗೆ ಪ್ರೇರೇಪಿಸಬೇಕು.

ಮುಂದುವರೆದು ಮತಗಟ್ಟೆಗಳ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿಡಬೇಕು ಹಾಗೂ ಮೂಲಸೌಕರ್ಯ ಇರುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.

ಈ ತರಬೇತಿ ಕಾರ್ಯಗಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ  ಡಿಡಿಪಿಐ ರವಿಶಂಕರ್ ರೆಡ್ಡಿ ಸೇರಿ   ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours