ಬಸ್ಸಿಗೆ ಕಲ್ಲು ಹೊಡೆದರೆ ಸೌಲಭ್ಯ ಸಿಗುತ್ತೆ ಎಂದ ಸ್ವಾಮೀಜಿ

 

ದಾವಣಗೆರೆ :Davanagere  ಹಡಪದ ಅಪ್ಪಣ್ಣ ಜಯಂತಿಯಲ್ಲಿ ಅನ್ನದಾನಿ ಬಸವಪ್ರಿಯ ಹಡಪದ ಅಪ್ಪಣ್ಣ  ಸ್ವಾಮೀಜಿ  ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ನಗರದ   ಶಿವಯೋಗಿ ಮಂದಿರದಲ್ಲಿ ಹಡಪದ ಅಪ್ಪಣ್ಣಶ್ರೀ ಕಾರ್ಯಕ್ರಮದಲ್ಲಿ ಶ್ರೀಗಳು ಬಸ್ಸಿಗೆ ಕಲ್ಲು ಹೊಡೆಯಬೇಕು ಆಗ ಮಾತ್ರ ಸೌಲಭ್ಯಗಳು ಸಿಗುತ್ತವೆ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.

ಲಿಂಗಾಯತ ಹಡಪದ ಅಂತ ಇದ್ದರೆ ಮೀಸಲಾತಿ 3ಬಿ ಯಲ್ಲಿ ಸಿಗುತ್ತದೆ. ಹಿಂದೂ ಹಡಪದ ಅಂತ ಇದ್ದರೆ ಮೀಸಲಾತಿ 2ಎ ನಲ್ಲಿ ಸಿಗುತ್ತದೆ. ಆದರೆ ನಮ್ಮ ದಾಖಲಾತಿಗಳು ಲಿಂಗಾಯತ ಹಡಪದ ಎಂದೆ ಇವೆ. ಹೀಗಾಗಿ ಹಡಪದ ಸಮಾಜ ಮೀಸಲಾತಿಯಿಂದ ವಂಚಿತವಾಗಿದ ಎಂದರು.

ಇದಕ್ಕಾಗಿ ನಾವೆಲ್ಲರೂ ಹೋರಾಟ ಮಾಡಬೇಕು, ಎಲ್ಲರೂ ಸಂಘಟಿತರಾಗಬೇಕು ಎಂದು ದಾವಣಗೆರೆಯಲ್ಲಿ ಅನ್ನದಾನಿ ಬಸವಪ್ರಿಯ ಹಡಪದ ಅಪ್ಪಣ್ಣ ಶ್ರೀ ಈ ಕುರಿತು ಹೇಳಿಕೆ ನೀಡಿದ್ದಾರೆ.

[t4b-ticker]

You May Also Like

More From Author

+ There are no comments

Add yours