ಬೆಳ್ಳಿ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ, ಚಿತ್ರದುರ್ಗದಲ್ಲಿ ಎಷ್ಟಿದೆ ನೋಡಿ.

 

ಈ  ದಿನ ಚಿನ್ನ, ಬೆಳ್ಳಿಯ ದರ (Today Gold and Silver Rate) : ಪ್ರಿಯರು, ಮಹಿಳೆಯರ ಪಾಲಿಗೆ ನಿಜಕ್ಕೂ ಇದು ಸಿಹಿ ಸುದ್ದಿ. ಕಳೆದ ಕೆಲವು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ (Gold Rate) ಇಳಿಕೆಯಾಗುತ್ತಿದ್ದು, ಇಂದು ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ ಕಂಡಿದೆ.

ಇನ್ನು ಬೆಳ್ಳಿಯ (Silver Rate) ಬೆಲೆಯಲ್ಲಿಯೂ 2,000 ರೂಪಾಯಿ ಕುಸಿತವಾಗಿದೆ.

ಕಳೆದ ಸೆಪ್ಟೆಂಬರ್‌ ಕೊನೆಯ ವಾರದಿಂದಲೂ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಕುಸಿತವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಕಳೆದ 7 ತಿಂಗಳಲ್ಲಿಯೇ ಇದು ಕನಿಷ್ಠಮಟ್ಟದ ಕುಸಿತವಾಗಿದೆ. ಕಳೆದ 10 ದಿನಗಳ ಅವಧಿಯಲ್ಲಿ ಚಿನ್ನದ ದರ 4,000 ರೂಪಾಯಿ ಕುಸಿತ ಕಂಡಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿದೆ. ಅಲ್ಲದೇ ಶುಭ ಸಮಾರಂಭಗಳು ಈ ಬಾರಿ ಅಷ್ಟಾಗಿ ನಡೆಯುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಆಭರಣ ವ್ಯಾಪಾರಿಗಳು ಚಿನ್ನ ಖರೀದಿಗೆ ಹೆಚ್ಚಿನ ಒಲವು ತೋರಿಸಿದ್ರೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಬೆಂಗಳೂರಲ್ಲಿ ಎಷ್ಟಿದೆ ಚಿನ್ನದ ದರ ?

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೂ ಚಿನ್ನದ ದರದಲ್ಲಿ ಬಾರೀ ಇಳಿಕೆ ಕಂಡಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ ನಿನ್ನೆ 1 ಗ್ರಾಂಗೆ 5,804 ರೂ.ಇದ್ದು, ಇಂದು 5,738 ರೂ.ಗಳಿಗೆ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನಕ್ಕೆ58,040 ರೂಪಾಯಿ ಇದ್ದ ಚಿನ್ನ ಇಂದು5,738 ರೂಪಾಯಿಗಳಿಗೆ ಇಳಿಕೆಯಾಗಿದೆ.

ಇನ್ನು 22 ಕ್ಯಾರೆಟ್‌ ಚಿನ್ನದ ದರವನ್ನು ನೋಡುವುದಾದ್ರೆ. ಒಂದು ಗ್ರಾಂ ಚಿನ್ನದ ದರದ ನಿನ್ನೆ 5,320 ರೂಪಾಯಿ ಇದ್ದು, ಇಂದು 5,260 ರೂಪಾಯಿ ಇದೆ. ಇನ್ನು 10 ಗ್ರಾಂ ಚಿನ್ನದರ ಇಂದು 53,200 ರೂಪಾಯಿ ಇದ್ದು, ಇಂದು 52,600 ರೂಪಾಯಿ ಇದೆ.

ಚಿತ್ರದುರ್ಗ:

ಬಂಗಾರದ ಬೆಲೆ

91.6  -5400

kdm-5000

ಬೆಳ್ಳೆ- 61600

[t4b-ticker]

You May Also Like

More From Author

+ There are no comments

Add yours