ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ: ಕೆ.ಸಿ.ವೀರೇಂದ್ರ ಪಪ್ಪಿ

 

ಚಿತ್ರದುರ್ಗ: ಕೋಟೆ ನಾಡು ಐತಿಹಾಸಿಕ ಚಿತ್ರದುರ್ಗ ಕಳೆದ ಮೂವತ್ತು ವರ್ಷಗಳಿಂದ ಹೇಗಿದೆಯೋ ಈಗಲೂ ಹಾಗೆ ಇದೆ. ಸ್ವಲ್ಪವೂ ಬದಲಾವಣೆಯಾಗಿಲ್ಲ. ಇಡೀ ರಾಜ್ಯಕ್ಕೆ ಚಿತ್ರದುರ್ಗ ನಗರವನ್ನು ಮಾದರಿಯನ್ನಾಗಿ ಮಾಡಬೇಕೆಂಬ ಚಿಂತನೆಯಿಟ್ಟುಕೊಂಡಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಜಯಶಾಲಿಯನ್ನಾಗಿಸಿ ನಿಮ್ಮಗಳ ಋಣ ತೀರಿಸುತ್ತೇನೆಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸ್ಪರ್ಧಾಕಾಂಕ್ಷಿ ಕೆ.ಸಿ.ವೀರೇಂದ್ರಪಪ್ಪಿ ಅಭಿಮಾನಿಗಳಲ್ಲಿ ಕೈ ಮುಗಿದು ವಿನಂತಿಸಿಕೊಂಡರು.KC Virendra Pappi

ಚಳ್ಳಕೆರೆ ರಸ್ತೆಯಲ್ಲಿರುವ ವಿನಾಯಕ ಕಲ್ಯಾಣ ಮಂಟಪದ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಲ್ಯಾಣ ಮಂಟಪದಲ್ಲಿ ಸೋಮವಾರ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿಮಾನೋತ್ಸವ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು..KC Virendra Pappi ಅಭಿಮಾನಿಗಳೆ ನನಗೆ ನಾಯಕರು. ನಿಮ್ಮೆಲ್ಲರ ಪ್ರತಿನಿಧಿಯಾಗಿ ಬಂದಿದ್ದೇನೆ. ಬೂತ್ ಮಟ್ಟದಲ್ಲಿ ಐವತ್ತು ಸದಸ್ಯರುಗಳನ್ನು ನೊಂದಾಯಿಸಿದ್ದೀರಿ. ಅದರ ಜೊತೆಗೆ ಇನ್ನು ಐವತ್ತು ಓಟುಗಳನ್ನು ಸೇರಿಸಿ ಒಂದೊಂದು ಬೂತ್ ಮಟ್ಟದಲ್ಲಿ ನೂರು ಮತ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಅವೈಜ್ಞಾನಿಕ ರಸ್ತೆ ಹಾಗೂ ಡಿವೈಡರ್‍ಗಳನ್ನು ನೋಡಿದರೆ ಶೇ.40 ಪರ್ಸೆಂಟ್ ಕಮಿಷನ್ ಎಷ್ಟು ಮೀತಿ ಮೀರಿದೆ ಎನ್ನುವುದು ಗೊತ್ತಾಗುತ್ತದೆ. ಇಷ್ಟು ಸಾಲದು ಎಂಬಂತೆ ಇಲ್ಲಿನ ಶಾಸಕರು ಹೊಸ ಪೀಳಿಗೆಯನ್ನು ಚುನಾವಣೆಗೆ ರೆಡಿ ಮಾಡುತ್ತಿದ್ದಾರೆ. ಈಗಲಾದರೂ ಯುವಕ/ಯುವತಿಯರು ಎಚ್ಚೆತ್ತುಕೊಂಡು ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆ ಮಾಡದಿದ್ದರೆ ಜೀವನ ಪೂರ್ತಿ ಹೇಳಿದಂತೆ ಕೇಳಿಕೊಂಡಿರಬೇಕು ಎಂದು ಎಚ್ಚರಿಸಿದರು. chitradurga
ಭ್ರಷ್ಟಾಚಾರ, ದೌರ್ಜನ್ಯ, ಬೆದರಿಕೆಯಿಂದ ಚಿತ್ರದುರ್ಗದ ಜನ ಬೇಸತ್ತಿದ್ದಾರೆ. ಚಿತ್ರದುರ್ಗಕ್ಕೆ ಕೆಟ್ಟ ಹೆಸರು ಬರಲು ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳಿ. ದೊಡ್ಡ ಹಳ್ಳಿಯಂತಿರುವ ಚಿತ್ರದುರ್ಗ ಸಾಕಷ್ಟು ಅಭಿವೃದ್ದಿಯಾಗಬೇಕಿದೆ. ನನ್ನನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿ. ನಿಮ್ಮ ಸೇವೆ ಮಾಡುವ ಮೂಲಕ ಮತದಾನದ ಋಣ ತೀರಿಸುವೆ. ಬೂತ್ ಮಟ್ಟದಲ್ಲಿ ಅನೇಕ ಸಮಸ್ಯೆಗಳಿವೆ. ಅಧಿಕಾರ ಸಿಕ್ಕಾಗ ಏನು ಮಾಡಬೇಕೆಂಬುದನ್ನು ಆಲೋಚಿಸಿ ಅಭಿವೃದ್ದಿಗೆ ಮುಂದಾಗುತ್ತೇನೆ. ನವದುರ್ಗ ಮಾಡೋಣ. ಬಡವರ ಹಸಿವು ನೀಗಿಸಲು ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು. ಅಡುಗೆ ಅನಿಲ, ಅಕ್ಕಿ, ಬೇಳೆ, ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾಗಿದೆ. ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್‍ನಲ್ಲಿ ಘೋಷಿಸಿರುವಂತೆ ಪ್ರತಿ ಮನೆಯ ಮಹಿಳೆಗೆ ಎರಡು ಸಾವಿರ ರೂ.ಗಳನ್ನು ಪ್ರತಿ ತಿಂಗಳು ಉಚಿತವಾಗಿ ನೀಡಲಾಗುವುದು. ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆಯಿದೆ. ಕೆಲಸ ಹುಡುಕಿಕೊಂಡು ದೂರದ ಬೆಂಗಳೂರಿಗೆ ಇಲ್ಲಿನ ಯುವ ಜನಾಂಗ ವಲಸೆ ಹೋಗುತ್ತಿದ್ದರೂ ಏಕೆ ಇಲ್ಲಿ ಉದ್ಯೋಗಕ್ಕೆ ಶಾಸಕರು ಅವಕಾಶ ಕಲ್ಪಿಸಲಿಲ್ಲ. ಅತಿಥಿ ಉಪನ್ಯಾಸಕರುಗಳ ಸ್ಥಿತಿ ಕಂಡರೆ ಕರುಳು ಹಿಂಡುತ್ತದೆ. ನಲವತ್ತು ಪರ್ಸೆಂಟ್ ಕಮೀಷನ್‍ನಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗಳಾಗಲು ಕಾರಣ ಎಂದು ದೂರಿದರು.

ಸ್ವಾಮಿ ವಿವೇಕಾನಂದ ಹೇಳಿದಂತೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವಂತೆ ಎದ್ದೇಳುವ ಕಾಲ ಬಂದಿದೆ. ಮತ್ತೆ ಮಲಗಿದರೆ ಇನ್ನು ಐದು ವರ್ಷಗಳ ಕಾಲ ಮಲಗೇ ಇರಬೇಕು. ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆ ಮಾಡಿ ದುರ್ಗದ ಅಭಿವೃದ್ದಿಗೆ ಕೈಜೋಡಿಸಿ ಎಂದು ಅಭಿಮಾನಿಗಳಲ್ಲಿ ಕೆ.ಸಿ.ವೀರೇಂದ್ರಪಪ್ಪಿ ಮನವಿ ಮಾಡಿದರು.

ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜುನಾಥ್, ಶ್ರೀರಾಮ್, ಸಿದ್ದವ್ವನಹಳ್ಳಿ ಎಸ್.ಪರಮೇಶ್, ವೀರಶೈವ ಲಿಂಗಾಯಿತ ಯುವ ವೇದಿಕೆ ಅಧ್ಯಕ್ಷ ಹೆಚ್.ಎಂ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಹುಲ್ಲೂರು ಮಂಜುನಾಥ್, ಹನೀಸ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಆರ್.ಮಂಜುನಾಥ್, ದೊಡ್ಡಾಲಘಟ್ಟ ವಿಜಯಕುಮಾರ್, ಗಿರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಸೈಯದ್ ಖುದ್ದೂಸ್, ಜ್ಯೋತಿರಾಜ್ ಇನ್ನು ಅನೇಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours