ಸರ್ಕಾರಿ ಶಾಲೆಗಳ ಅಭಿವೃದ್ದಿ ನನ್ನ ಕನಸು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ನನ್ನ ಕ್ಷೇತ್ರದಲ್ಲಿ ಸುಮಾರು 200 ಕ್ಕಿಂತ ಹೆಚ್ಚಿನ ಶಾಲಾ ಕೊಠಡಿಗಳನ್ನು ನನ್ನ ಕ್ಷೇತ್ರದಲ್ಲಿ ನಿರ್ಮಾಣ  ಮಾಡಿದ್ದು  ಖಾಸಗಿ ಶಾಲೆಗಳ ಡೋನೇಷನ್ ಹಾವಳಿಗೆ ಬ್ರೇಕ್ ಹಾಕಿ ಸರ್ಕಾರಿ ಶಾಲೆಗಳ  ಸುಧಾರಣೆಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ  ಎಂದು ಶಾಸಕ ಹೆಚ್.ಡಿ.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ಮಾಳಪ್ಪನಹಟ್ಟಿ ಗ್ರಾಮದಲ್ಲಿ ಡಿಎಂಎಫ್ ಅನುದಾನದಲ್ಲಿ 2.2 ಕೋಟಿ ವೆಚ್ಚದಲ್ಲಿ  ನೂತನವಾಗಿ ನಿರ್ಮಿಸಿರುವ ಮಾದರಿ ಪ್ರಾಥಮಿಕ  ಹೈಟೆಕ್ ಶಾಲೆಯನ್ನು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ‌ ಮೌಲ್ಯವಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಅಧ್ಯಯಮ ಮಾಡಿಸಬೇಕು. ಗುಣಮಟ್ಟ ಮತ್ತು ಅನುಭವಿ ಶಿಕ್ಷಕರನ್ನು ಸರ್ಕಾರಿ ಶಾಲೆಗಳು ಹೊಂದಿವೆ. ನನ್ನ ಕೇತ್ರದಲ್ಲಿ ಪ್ರಾಥಮಿಕ ಶಾಲಾ ಕೊಠಡಿಗೆ 19.5 ಕೋಟಿ ಹಣವನ್ನು ನೀಡಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಮಾಳಪ್ಪನಹಟ್ಟಿಯಲ್ಲಿ ಖಾಸಗಿ ಶಾಲೆಗಳಿಗಿಂತ ಸುಂದರ ಮತ್ತು ಆಕರ್ಷಣೆಯಿಂದ ಸರ್ಕಾರಿ ಶಾಲೆ ಆಗಬೇಕು ಎಂಬ ದೃಷ್ಟಿಯಿಂದ ಮಾಳಪ್ಪನಹಟ್ಟಿ ಯಲ್ಲಿ ತಾಲೂಕಿನಲ್ಲಿ ಎಲ್ಲೂ ಇಲ್ಲದಂತಹ  ಹೈಟೆಕ್ ಶಾಲೆ ಮಾಡಿದ್ದು ವಿಶಾಲವಾದ ಕೊಠಡಿ, ಸ್ಮಾರ್ಟ್ ಕ್ಲಾಸ್ , ಶೌಚಾಲಯ, ಕಂಪ್ಯೂಟರ್ ಕೊಠಡಿ,ಗ್ರಂಥಾಲಯ ಕೊಠಡಿ  ಸೇರಿ ಎಲ್ಲಾವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದೆ.
ಮಾಳಪ್ಪನಹಟ್ಟಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬಡವರು,ಹಿಂದುಳಿದವರು, ಕೂಲಿ ಕಾರ್ಮಿಕರು ಸೇರಿ ಎಲ್ಲಾ ಸಮಾಜದವರ ಅನುಕೂಲವಾಗುತ್ತ  ಪ್ರೌಢಶಾಲೆ ಮತ್ತು ಕಾಲೇಜನ್ನು ನೀಡುವ ಕೆಲಸ ಮುಂದಿನ ದಿನದಲ್ಲಿ ನೀಡಿ ಈ ಭಾಗದ ವಿದ್ಯಾರ್ಥಿಗಳ ಹಿತ ಕಾಯುವ ಕೆಲಸ ಮಾಡುತ್ತೇನೆ.
ಎಲ್ಲಾ ಶಾಸಕರು ಸೇರಿ ಸಿಎಂ ಬಳಿ ಪ್ರತಿ ಕ್ಷೇತ್ರಕ್ಕೆ 150 ಕೋಟಿ ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮಂಜೂರು ಮಾಡಿ ಎಂದು ಮನವಿ ಮಾಡಲಾಗಿತ್ತು. ಹಣಕಾಸು ವ್ಯವಸ್ಥೆ ನೋಡಿಕೊಂಡು ಅನುದಾನ  ಒದಗಿಸಲಾಗುತ್ತದೆ  ಎಂದು ಭರವಸೆ ನೀಡಿದ್ದರು ಎಂದರು..
ನನ್ನ ಕ್ಷೇತ್ರದಲ್ಲಿ ಶಾಸಕರ ಅನುದಾನ, ಡಿಎಂಎಫ್ ಅನುದಾನ, ಶಿಕ್ಷಣ ಇಲಾಖೆ, ಅನುದಾನ ಬಳಸಿ  ಪ್ರಾಥಮಿಕ ಮತ್ತು ಪ್ರೌಢಶಾಲೆ ಕೊಠಡಿ, ಅಂಗನವಾಡಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ.‌ಕೆಎಂಆರ್ಸಿ ಗೆ ಶಿಕ್ಷಣ ಇಲಾಖೆಯಿಂದ 120 ಕೋಟಿ ಹಣಕ್ಕೆ ಬೇಡಿಕೆಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಮಂಜೂರಾಗಿ ಬಂದರೆ ಬಹುತೇಕ ಎಲ್ಲಾ ಶಾಲೆಗಳಿಗೆ ಅನುದಾನ ಒದಗಿಸಲಾಗುತ್ತದೆ‌ ಎಂದು ತಿಳಿಸಿದರು.
ಡಿಡಿಪಿಐ ರವಿಶಂಕರ್ ರೆಡ್ಡಿ ಮಾತನಾಡಿ ಎಲ್ಲಾ ಸಮಾಜದ ಬಗ್ಗೆ ವಿಶೇಷ ಕಾಳಜಿಯನ್ನು ಶಾಸಕರು ವಹಿಸಿದ್ದಾರೆ. ಶಿಕ್ಷಣ ಇಲಾಖೆಗೆ ನೂರಾರು ಕೊಠಡಿಗಳ ನೀಡಿದ್ದು ಗ್ರಾಮೀಣ ಭಾಗದಲ್ಲಿ  ಹೆಚ್ಚು ಅನುಕೂಲವಾಗಿದೆ. ನನ್ನ ಕ್ಷೇತ್ರದಲ್ಲಿ ಮಾದರಿ ಶಾಲೆ ಮಾಡಬೇಕು ಎಂದು ಶಾಸಕ ತಿಪ್ಪಾರೆಡ್ಡಿ ಅವರ ಕನಸಾಗಿತ್ತು ಅದರಂತೆ ಮಾಳಪ್ಪನಹಟ್ಟಿಯಲ್ಲಿ ಶಾಲೆ ನಿರ್ಮಾಣ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ  ಕ್ರಾಂತಿ ಮಾಡಿದ್ದಾರೆ. ಅವಕಾಶ ಇರುವ ಕಡೆ ಅನುದಾನ ಬಳಕೆ ಮಾಡಿಕೊಂಡು ಸ್ಮಾರ್ಟ್ ಕ್ಲಾಸ್ ಮಾಡಲಾಗಿದ್ದು ಶಿಕ್ಷಣ ಇಲಾಖೆಗೆ ಬದಲಾವಣೆಗೆ ಶಾಸಕರ ಪಾತ್ರ ದೊಡ್ಡದು ಎಂದು ಶಾಸಕರ ಶಿಕ್ಷಣ ಇಲಾಖೆಯ ಕೊಡುಗೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ  ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳ,ಉಪಾಧ್ಯಕ್ಷ ಮಲೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ್,  ಮುಖಂಡರಾದ ಈಶ್ವರಪ್ಪ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರ ಮೂಡಲಗಿರಿಯಪ್ಪ, ತಾ.ಪಂ.ಇಓ ಹನುಂಮಂತಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ತಿಮ್ಮಾರೆಡ್ಡಿ, ಪ್ರಭಾರ ಶಿಕ್ಷಣಧಿಕಾರಿ ಸಂಪತ್ ಇದ್ದರು.
[t4b-ticker]

You May Also Like

More From Author

+ There are no comments

Add yours